RCB Playing XI: ಆರ್​ಸಿಬಿ ಓಪನರ್ ಚೇಂಜ್: ಇಂದಿನ ಪಂದ್ಯಕ್ಕೆ ಫಾಫ್ ಪಡೆಯಲ್ಲಿ ಮಹತ್ವದ ಬದಲಾವಣೆ

| Updated By: Vinay Bhat

Updated on: Apr 19, 2022 | 10:27 AM

Predicted RCB Playing XI vs LSG: ಐಪಿಎಲ್​​ನಲ್ಲಿಂದು ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಆರ್​​ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಂಭವವಿದೆ. ಇಲ್ಲಿದೆ ನೋಡಿ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI.

RCB Playing XI: ಆರ್​ಸಿಬಿ ಓಪನರ್ ಚೇಂಜ್: ಇಂದಿನ ಪಂದ್ಯಕ್ಕೆ ಫಾಫ್ ಪಡೆಯಲ್ಲಿ ಮಹತ್ವದ ಬದಲಾವಣೆ
RCB Playing vs LSG
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2022) ಮತ್ತೊಂದು ಹೈವೋಲ್ಟೇಜ್ ಕದನ ನಡೆಯಲಿದೆ. ಮುಂಬೈನ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​​​ ಅಕಾಡೆಮಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ಮತ್ತು ಫಾಫ್ ಡುಪ್ಲೆಸಿಸ್ (Faf Duplessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳು ಆರು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಗೆಲುವು ಎರಡರಲ್ಲಿ ಸೋಲುಂಡು ಸಮಾನ ಅಂಕ ಸಂಪಾದಿಸಿದೆ. ರನ್​ರೇಟ್ ಆಧಾರದ ಮೇಲೆ ಎಲ್​ಎಸ್​ಜಿ ತಂಡ ಮೂರನೇ ಸ್ಥಾನದಲ್ಲಿದ್ದರೆ ಆರ್​ಸಿಬಿ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಪಾಯಿಂಟ್ ಟೇಬಲ್​ನಲ್ಲಿ ಮೇಲಕ್ಕೇರಲು ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಬೆಂಗಳೂರು ಈ ಪಂದ್ಯವನ್ನು ಉತ್ತಮ ರನ್​ರೇಟ್​​ನೊಂದಿಗೆ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೂಡ ಹೊಂದಿದೆ. ಇದಕ್ಕಾಗಿಯೆ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಂಭವವಿದೆ. ಇದರ ಪ್ರಕಾರ ಆರ್​ಸಿಬಿ ಆರಂಭಿಕ ಆಟಗಾರ ಅನುಜ್ ರಾವತ್ ಅವರನ್ನು ಹೊರಗಿಡುವ ಸಾಧ್ಯತೆ ಇದೆ.

ಹೌದು, ಆರ್​ಸಿಬಿ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿದೆ. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಅನುಜ್ ರಾವತ್ ದೊಡ್ಡ ರನ್ ಕಲೆಹಾಕುತ್ತಿಲ್ಲ. ಮಧ್ಯಮ ಕ್ರಮಾಂಕದವರನ್ನೇ ನೆಚ್ಚಿಕೊಂಡಿರುವ ಆರ್​ಸಿಬಿಗೆ ಬಿರುಸಿನ ಆರಂಭ ಒದಗಿಸುವ ಓರ್ವ ಬ್ಯಾಟ್ಸ್​ಮನ್​ನ ಅಗತ್ಯವಿದೆ. ಹೀಗಾಗಿ ಕಳೆದ ಕೆಲವು ಪಂದ್ಯಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದ ಅನುಜ್ ರಾವತ್ ಅವರನ್ನು ಇಂದಿನ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಇವರ ಬದಲು ಒಂದಾ ವಿರಾಟ್ ಕೊಹ್ಲಿ ಫಾಫ್ ಜೊತೆ ಇನ್ನಿಂಗ್ಸ್​ ಆರಂಭಿಸುವಬಹುದು. ಇಲ್ಲವಾದಲ್ಲಿ ರಜತ್ ಪಟಿದಾರ್ ಅಥವಾ ಮಹಿಪಾಲ್ ಲುಮ್ರೂರ್​​ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.

ಉಳಿದಂತೆ ದಿನೇಶ್‌ ಕಾರ್ತಿಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನೊಳಗೊಂಡ ಆರ್‌ಸಿಬಿ ಫಿನಿಶಿಂಗ್‌ ಅತ್ಯುತ್ತಮ ಮಟ್ಟದಲ್ಲಿದೆ. ಆದರೆ, ವಿರಾಟ್ ಕೊಹ್ಲಿ ಇದುವರೆಗೆ ದೊಡ್ಡ ಮೊತ್ತ ಪೇರಿಸಿಲ್ಲ. ಆಲ್ರೌಂಡರ್ ಶಹ್ಬಾಜ್ ಅಹ್ಮದ್ ಬ್ಯಾಟಿಂಗ್‌ನಲ್ಲಿ ಗಮನಸೆಳೆಯತ್ತಿದ್ದರೆ ಸುಯೇಶ್​​ ಪ್ರಭು ದೇಸಾಯಿ ಕೂಡ ಭರವಸೆ ಮೂಡಿಸಿದ್ದಾರೆ. ಜೋಶ್​​ ಹ್ಯಾಜಲ್​ವುಡ್​​ ತಂಡದ ಬೌಲಿಂಗ್​​ಗೆ ಜೋಶ್​​ ತುಂಬಿದ್ದಾರೆ. ಸಿರಾಜ್​​ ದುಬಾರಿ ಆಗುತ್ತಿರುವುದು ಕೊಂಚ ತಲೆನೋವು. ಹರ್ಷಲ್​​ ಪಟೇಲ್​​ಗೆ ವಿಕೆಟ್​ ಬೀಳುತ್ತಿಲ್ಲ ಅನ್ನುವ ಚಿಂತೆಯೂ ಇದೆ. ವನಿಂದು ಹಸರಂಗ ದುಬಾರಿ ಅನಿಸಿದರೂ ವಿಕೆಟ್​​ ಬೇಟೆಯಲ್ಲಿದ್ದಾರೆ.

ಇತ್ತ ಕಳೆದ ಪಂದ್ಯದಲ್ಲಿ ಶತಕ ಸಿಡಿಸುವ ಭರ್ಜರಿ ಫಾರ್ಮ್ ಕಂಡುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಎಲ್‌ಎಸ್‌ಜಿ ತಂಡದ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಿದ್ದಾರೆ. ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಯಾವುದೇ ಬೌಲರ್‌ಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಯುವ ಆಟಗಾರ ಆಯುಷ್ ಬದೋನಿ, ಭರ್ಜರಿ ಹೊಡೆತಗಳ ದೀಪಕ್ ಹೂಡಾ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರ ಬಲವೂ ತಂಡಕ್ಕಿದೆ. ಆವೇಶ್ ಖಾನ್ ಮತ್ತು ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ತಂಡದ ಕೈ ಹಿಡಿಯುತ್ತಿದ್ದಾರೆ.

ಡಿವೈ ಪಾಟೀಲ್ ಕ್ರೀಡಾಂಗಣ ಈ ಬಾರಿಯ ಟೂರ್ನಿಯಲ್ಲಿ ಬ್ಯಾಟರ್‌ಗಳಿಗೆ ಸಾಕಷ್ಟು ನೆರವು ನೀಡುತ್ತಿರುವುದನ್ನು ಗಮನಿಸಿದ್ದೇವೆ. ಹೀಗಾಗಿ ಮತ್ತೊಂದು ಹೈಸ್ಕೋರ್ ಪಂದ್ಯ ನಡೆದರೆ ಅಚ್ಚರಿಯಿಲ್ಲ. ಪಿಚ್ ಹಸಿರಿನಿಂದ ಕೂಡಿದ್ದು ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚಿದೆ.

ಸಂಭಾವ್ಯ ಪ್ಲೇಯಿಂಗ್ XI:

ಆರ್​​ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯುಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ರಜಿತ್ ಪಟಿದಾರ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.

ಎಲ್​ಎಸ್​ಜಿ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್.

Yuzvendra Chahal: ಒಂದೇ ಓವರ್​ನಲ್ಲಿ 4 ವಿಕೆಟ್ ಕಿತ್ತ ಚಹಲ್: ಹ್ಯಾಟ್ರಿಕ್ ಮ್ಯಾಜಿಕ್ ವಿಡಿಯೋ ಇಲ್ಲಿದೆ ನೋಡಿ

Cristiano Ronaldo: ದಿಗ್ಗಜ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಗಂಡು ಮಗು ಸಾವು