AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuzvendra Chahal: ಒಂದೇ ಓವರ್​ನಲ್ಲಿ 4 ವಿಕೆಟ್ ಕಿತ್ತ ಚಹಲ್: ಹ್ಯಾಟ್ರಿಕ್ ಮ್ಯಾಜಿಕ್ ವಿಡಿಯೋ ಇಲ್ಲಿದೆ ನೋಡಿ

RR vs KKR, Chahal Hat-trick Video: ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನಡುವಣ ಪಂದ್ಯದ ಪ್ರಮುಖ ಹೈಲೇಟ್ ಜೋಸ್ ಬಟ್ಲರ್ ಸ್ಫೋಟಕ ಶತಕ ಮತ್ತು ಯುಜ್ವೇಂದ್ರ ಚಹಲ್ ಹ್ಯಾಟ್ರಿಕ್ ವಿಕೆಟ್ (ಒಟ್ಟು 5 ವಿಕೆಟ್). ಇದು ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ಕೂಡ ಆಯಿತು.

Yuzvendra Chahal: ಒಂದೇ ಓವರ್​ನಲ್ಲಿ 4 ವಿಕೆಟ್ ಕಿತ್ತ ಚಹಲ್: ಹ್ಯಾಟ್ರಿಕ್ ಮ್ಯಾಜಿಕ್ ವಿಡಿಯೋ ಇಲ್ಲಿದೆ ನೋಡಿ
Yuzvendra Chahal hat-trick RR vs KKR
TV9 Web
| Edited By: |

Updated on:Apr 19, 2022 | 12:08 PM

Share

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (RR vs KKR)​ ನಡುವಣ ಪಂದ್ಯ ರಣ ರೋಚಕವಾಗಿತ್ತು. ಕೊನೆಯ ಹಂತದ ವರೆಗೂ ನಡೆದ ಹೈವೋಲ್ಟೇಜ್ ಮ್ಯಾಚ್​ನಲ್ಲಿ ಸಂಜು ಸ್ಯಾಮ್ಸನ್ ಬಳಗ 7 ರನ್​ಗಳ ಜಯ ಸಾಧಿಸಿತು. ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಶ್ರೇಯಸ್ ಅಯ್ಯರ್ ಪಡೆ ಗೆಲುವಿಗಾಗಿ ಕೊನೆಯ ಓವರ್ ವರೆಗೂ ಹೋರಾಟ ನಡೆಸಿತು. ಆದರೆ, ಡೆತ್ ಓವರ್​ಗಳಲ್ಲಿ ಆರ್​ ಆರ್​ ಬೌಲರ್​ಗಳು ನೀಡಿದ ಪ್ರದರ್ಶನದಿಂದ ಕೆಕೆಆರ್ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡಿದೆ. ರಾಜಸ್ಥಾನ್ ತಂಡ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಈ ಪಂದ್ಯದ ಪ್ರಮುಖ ಹೈಲೇಟ್ ಜೋಸ್ ಬಟ್ಲರ್ (Jos Butler) ಸ್ಫೋಟಕ ಶತಕ ಮತ್ತು ಯುಜ್ವೇಂದ್ರ ಚಹಲ್ (Yuzvendra Chahal) ಹ್ಯಾಟ್ರಿಕ್ ವಿಕೆಟ್ (ಒಟ್ಟು 5 ವಿಕೆಟ್). ಇದು ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ಕೂಡ ಆಯಿತು. ಐಪಿಎಲ್​​ನಲ್ಲಿ ಇದುವರೆಗೆ ಒಂದು ಪಂದ್ಯದಲ್ಲಿ ಶತಕ ಮತ್ತು ಐದು ವಿಕೆಟ್ ಸಾಧನೆ ಮಾಡಿದ ಇತಿಹಾಸವಿರಲಿಲ್ಲ.

ಚಹಲ್ ಹ್ಯಾಟ್ರಿಕ್:

ರಾಜಸ್ಥಾನ್ ನೀಡಿದ್ದ 218 ರನ್​ಗಳ ಬೃಹತ್ ಮೊತ್ತವನ್ನು ಬೆನ್ನನಟ್ಟಿದ ಕೆಕೆಆರ್ ತಂಡದ ಪರವಾಗಿ ಅನುಭವಿ ಆರೋನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರಿಂದ ಭರ್ಜರಿ ಪ್ರದರ್ಶನ ಬಂತು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅಯ್ಯರ್ ಕೆಕೆಆರ್ ತಂಡಕ್ಕೆ ಜಯವನ್ನು ನೀಡಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಈ ಸಂದರ್ಭ ದಾಳಿಗಿಳಿದ ಯುಜ್ವೇಂದ್ರ ಚಹಲ್ ಕೆಕೆಆರ್ ತಂಡದ ಯೋಜನೆಯನ್ನು ಬುಡಮೇಲು ಮಾಡಿದರು. ಪಂದ್ಯದ ದಿಕ್ಕನ್ನೇ ಬದಲಿಸಿದರು. 17ನೇ ಓವರ್‌ನಲ್ಲಿ ಕೇವಲ 2 ರನ್‌ ನೀಡಿ ಹ್ಯಾಟ್ರಿಕ್‌ ವಿಕೆಟ್‌ ಸಹಿತ ನಾಲ್ಕು ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. ಈ ಓವರ್​ನ ಮೊದಲ ಎಸೆತದಲ್ಲಿ ವೆಂಕಟೇಶ್‌ ಅಯ್ಯರ್‌(6) ಹಾಗೂ 4ನೇ ಬಾಲ್‌ನಲ್ಲಿ ಶ್ರೇಯಸ್‌ ಅಯ್ಯರ್‌(85), 5ನೇ ಬಾಲ್‌ನಲ್ಲಿ ಶಿವಂ ಮಾವಿ(0) ಹಾಗೂ 6ನೇ ಬಾಲ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌(0) ವಿಕೆಟ್‌ ಕಬಳಿಸುವ ಮೂಲಕ 2022ರ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಪಡೆದರು.

ಕೆಕೆಆರ್‌ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಯುಜ್ವೇಂದ್ರ ಚಹಲ್‌ 40 ರನ್‌ ನೀಡಿ 5 ವಿಕೆಟ್‌ ಪಡೆದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಪರವಾಗಿ ಐಪಿಎಲ್‌ನಲ್ಲಿ 5 ವಿಕೆಟ್‌ ಪಡೆದ ಮೊದಲ ಭಾರತೀಯ ಬೌಲರ್‌ ಎನಿಸಿದರು. ಜೊತೆಗೆ ಐಪಿಎಲ್‌ನಲ್ಲಿ ಕೆಕೆಆರ್‌ ವಿರುದ್ಧ 5 ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಯನ್ನು ಪಡೆದರು. ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಟ್ಲರ್ ಶತಕ:

ಐಪಿಎಲ್ 2022 ಆರಂಭದಿಂದಲೂ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೆಕೆಆರ್ ವಿರುದ್ಧವೂ ತಮ್ಮ ಅಬ್ಬರವನ್ನು ಮುಂದುವರಿಸಿದರು. ಕೇವಲ 61 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಒಟ್ಟು 103 ರನ್‌ಗಳಿಸಿದರು. ಇವರ ಖಾತೆಯಿಂದ 9 ಬೌಂಡರಿ ಹಾಗೂ 5 ಸಿಕ್ಸರ್ ಮೂಡಿಬಂತು. ಬಟ್ಲರ್ ಹೊರತುಪಡಿಸಿ ಆರ್‌ಆರ್ ಪರವಾಗಿ ಪಡಿಕ್ಕಲ್ 24 ರನ್‌ಗಳಿಸಿದರೆ ಸಂಜು ಸ್ಯಾಮ್ಸನ್ 38 ರನ್‌ಗಳಿಸಿದರು. ಶಿಮ್ರಾನ್ ಹೇಟ್ಮೇಯರ್ 26 ರನ್‌ಗಳಿಸಿ ಅಜೇಯವಾಗುಳಿದರು. ಪರಿಣಾಮ ಆರ್​ಆರ್​​ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 217 ರನ್ ಸಿಡಿಸಿತು.

ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್‌ ಗೆಲುವಿಗೆ ಆ್ಯರನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಹೋರಾಟ ನಡೆಸಿದರೂ ಫಲಸಿಗಲಿಲ್ಲ. ಫಿಂಚ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಔಟಾದರು. ಅಯ್ಯರ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 51 ಎಸೆತಗಳನ್ನು ಎದುರಿಸಿದ ಅಯ್ಯರ್ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ಔಟ್ ಆದರು. ಕೊನೆಯವರಾಗಿ ಔಟ್ ಆದ ಉಮೇಶ್ ಯಾದವ್ (21 ರನ್, 9 ಎಸೆತ, 1 ಬೌಂಡರಿ, 2 ಸಿಕ್ಸರ್) ಗೆಲುವಿಗಾಗಿ ಪ್ರಯತ್ನಿಸಿದರೂ ಸ್ವಲ್ಪದರಲ್ಲೇ ಎಡವಿದರು. ಅಂತಿಮವಾಗಿ ಕೆಕೆಆರ್ 19.4 ಓವರ್​ಗೆ 210 ರನ್ ಗಳಿಸಿ ಆಲೌಟ್ ಆಯಿತು.

Cristiano Ronaldo: ದಿಗ್ಗಜ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಗಂಡು ಮಗು ಸಾವು

Published On - 8:43 am, Tue, 19 April 22

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’