RCB 2024 Schedule: ಸಿಎಸ್ಕೆ ವಿರುದ್ಧ ಬೆಂಗಳೂರಲ್ಲೇ ಸೇಡು ತೀರಿಸಿಕೊಳ್ಳಲಿದೆ ಫಾಫ್ ಪಡೆ: ಆರ್‌ಸಿಬಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
IPL 2024 RCB Match Complete Schedule: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆರ್ಸಿಬಿ ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆದ್ದರೆ ಮತ್ತೊಂದು ಪಂದ್ಯದಲ್ಲಿ ಜಯ ಸಾಧಿಸಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಸಂಪೂರ್ಣ ವೇಳಾಪಟ್ಟಿಯನ್ನು ನೋಡೋಣ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರದಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2024 ರ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಅನಾವರಣಗೊಳಿಸಿದೆ. ಈ ಹಿಂದೆ, ದೇಶದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗಳ ಕಾರಣ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಇದೀಗ ಸಂಪೂರ್ಣ ಶೆಡ್ಯೂಲ್ ರಿಲೀಸ್ ಮಾಡಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೇ 26 ರ ಭಾನುವಾರದಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ. ಆರ್ಸಿಬಿ ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆದ್ದರೆ ಮತ್ತೊಂದು ಪಂದ್ಯದಲ್ಲಿ ಜಯ ಸಾಧಿಸಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಸಂಪೂರ್ಣ ವೇಳಾಪಟ್ಟಿಯನ್ನು ನೋಡೋಣ.
- RCB vs KKR- 7:30pm- ಮಾರ್ಚ್ 29- ಬೆಂಗಳೂರು
- RCB vs LSG- ರಾತ್ರಿ 7:30- ಏಪ್ರಿಲ್ 2- ಬೆಂಗಳೂರು
- RR vs RCB- 7:30pm- ಏಪ್ರಿಲ್ 6- ಜೈಪುರ
- MI vs RCB- 7:30pm- ಏಪ್ರಿಲ್ 11- ಮುಂಬೈ
- RCB vs SRH- 7:30pm- ಏಪ್ರಿಲ್ 15- ಬೆಂಗಳೂರು
- KKR vs RCB- ಮಧ್ಯಾಹ್ನ 3:30- ಏಪ್ರಿಲ್ 21- ಕೋಲ್ಕತ್ತಾ
- SRH vs RCB- 7:30pm- ಏಪ್ರಿಲ್ 25- ಹೈದರಾಬಾದ್
- GT vs RCB- ಮಧ್ಯಾಹ್ನ 3:30- ಏಪ್ರಿಲ್ 28- ಅಹಮದಾಬಾದ್
- RCB vs GT- ರಾತ್ರಿ 7:30- ಮೇ 4- ಬೆಂಗಳೂರು
- PBKS vs RCB- 7:30pm- ಮೇ 9- ಧರ್ಮಶಾಲಾ
- RCB vs DC- ರಾತ್ರಿ 7:30- ಮೇ 12- ಬೆಂಗಳೂರು
- RCB vs CSK- ರಾತ್ರಿ 7:30- ಮೇ 18- ಬೆಂಗಳೂರು
ಹೋಳಿ ಸೆಲೆಬ್ರೇಷನ್ ವೇಳೆ ರೋಹಿತ್ ಪತ್ನಿ ರಿತಿಕಾರನ್ನು ತಬ್ಬಿಕೊಂಡ ಹಾರ್ದಿಕ್ ಪಾಂಡ್ಯ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಸೋತಿತು. ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್ ದಾಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ವರು ಪೆವಿಲಿಯನ್ ಸೇರಿಕೊಂಡರು. ಮೇ 18 ರಂದು ಆರ್ಸಿಬಿ ತಂಡ ಬೆಂಗಳೂರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪುನಃ ಎದುರಿಸಲಿದೆ. ಈ ಮೂಲಕ ಸೇಡು ತೀರಿಸಿಕೊಳ್ಳುತ್ತಾ ನೋಡಬೇಕು.
ಪಂದ್ಯದ ಮಧ್ಯೆ ಪಂಜಾಬ್ ಆಟಗಾರನನ್ನು ನಿಂದಿಸಿದ ವಿರಾಟ್ ಕೊಹ್ಲಿ: ವಿಡಿಯೋ
ಆರ್ಸಿಬಿಗೆ ಜಯ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸುವ ಮೂಲಕ ಐಪಿಎಲ್ 2024 ರ ಋತುವಿನಲ್ಲಿ ತನ್ನ ಖಾತೆಯನ್ನು ತೆರೆದಿದೆ. ಅದು ಕೂಡ ಅವರ ತವರು ನೆಲ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಹೋಳಿ ದಿನದಂದು ನಡೆದ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಂಜಾಬ್ ಬೌಲರ್‌ಗಳ ಬೆವರಿಳಿಸಿ ತಂಡವನ್ನು ಜಯಗಳಿಸಿದರು. 77 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಕೊಹ್ಲಿ ಗೆಲುವಿನ ಸ್ಟಾರ್ ಆದರು. ದಿನೇಶ್ ಕಾರ್ತಿಕ್ ಕೇವಲ 10 ಎಸೆತಗಳಲ್ಲಿ 28 ರನ್‌ಗಳ ಸ್ಫೋಟಕ ಆಟವಾಡಿ ವಿನ್ನಿಂಗ್ ಶಾಟ್ ಹೊಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ