AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs PBKS, IPL 2024: ಪಂದ್ಯದ ಮಧ್ಯೆ ಪಂಜಾಬ್ ಆಟಗಾರನನ್ನು ನಿಂದಿಸಿದ ವಿರಾಟ್ ಕೊಹ್ಲಿ: ವಿಡಿಯೋ

Virat Kohli and Harpreet Brar: ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಅವರನ್ನು ನಿಂದಿಸುವ ಕೊಹ್ಲಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಬ್ಯಾಟಿಂಗ್ ಇನಿಂಗ್ಸ್‌ನ 13ನೇ ಓವರ್‌ ಆರಂಭಕ್ಕೂ ಮುನ್ನ ಈ ಘಟನೆ ನಡೆದಿದೆ. ಕೊಹ್ಲಿ ಅವರು ಬ್ರಾರ್​ಗೆ ಏನು ಹೇಳಿದರು?. ಇಲ್ಲಿದೆ ನೋಡಿ ವಿಡಿಯೋ.

RCB vs PBKS, IPL 2024: ಪಂದ್ಯದ ಮಧ್ಯೆ ಪಂಜಾಬ್ ಆಟಗಾರನನ್ನು ನಿಂದಿಸಿದ ವಿರಾಟ್ ಕೊಹ್ಲಿ: ವಿಡಿಯೋ
Virat Kohli and Harpreet Brar
Vinay Bhat
|

Updated on: Mar 26, 2024 | 9:03 AM

Share

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ 2024 ರ ಆರನೇ ಪಂದ್ಯದಲ್ಲಿ ಆರ್​ಸಿಬಿ (RCB vs PBKS) 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಕೊಹ್ಲಿ ಸೋಮವಾರ ತಮ್ಮ ಫಾರ್ಮ್​ಗೆ ಮರಳಿದರು. ಕೇವಲ 49 ಎಸೆತಗಳಲ್ಲಿ 77 ರನ್ ಸಿಡಿಸಿ ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡವನ್ನು ಸೋಲಿಸಲು ಸಹಾಯ ಮಾಡಿದರು. ಕೊಹ್ಲಿ ಅವರ 77 ರನ್​ಗಳ ನೆರವಿನಿಂದ ಆರ್​ಸಿಬಿ 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳ ಗುರಿ ಬೆನ್ನಟ್ಟಿತು. ಇದೀಗ ಈ ಪಂದ್ಯದ ನಡುವಣ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ ಪಂಜಾಬ್ ಆಟಗಾರನನ್ನು ನಿಂದಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಅವರನ್ನು ನಿಂದಿಸುವ ಕೊಹ್ಲಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಬ್ಯಾಟಿಂಗ್ ಇನಿಂಗ್ಸ್‌ನ 13ನೇ ಓವರ್‌ ಆರಂಭಕ್ಕೂ ಮುನ್ನ ಈ ಘಟನೆ ನಡೆದಿದೆ. ಬ್ರಾರ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾಗ, ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದ ಕೊಹ್ಲಿ, ಬ್ರಾರ್‌ಗೆ “Ruka jaa B******, saans to lene de” (ನಿಧಾನವಾಗಿ ಬೌಲಿಂಗ್ ಮಾಡು B******, ಉಸಿರಾಡಲು ಸ್ವಲ್ಪ ಸಮಯ ಕೊಡು) ಎಂದು ಬ್ರಾರ್‌ಗೆ ಕೊಹ್ಲಿ ಹೇಳಿದ್ದಾರೆ. ಇದರ ಆಡಿಯೋ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.

ರೋಚಕ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ಆರ್​ಸಿಬಿ ನಾಯಕ ಡುಪ್ಲೆಸಿಸ್ ಏನೆಲ್ಲ ಹೇಳಿದ್ರು ಗೊತ್ತೇ?

ಆರ್​ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯದ ವೇಳೆ ಕೊಹ್ಲಿ, ಹರ್ಪ್ರೀತ್ ಬ್ರಾರ್ ಅವರನ್ನು ನಿಂದಿಸಿದ ವಿಡಿಯೋ:

28 ವರ್ಷದ ಬ್ರಾರ್ ವಿರಾಟ್‌ನ ಕಾಮೆಂಟ್‌ಗಳಿಗೆ ತಲೆಕೆಡಿಸಿಕೊಂಡಿಲ್ಲ. 13 ನೇ ಓವರ್‌ನ ಮೊದಲ ಎಸೆತದಲ್ಲೇ ಮ್ಯಾಕ್ಸ್‌ವೆಲ್‌ ಅವರನ್ನು ಔಟ್ ಮಾಡಿದರು. ಮ್ಯಾಕ್ಸಿ ಐದು ಎಸೆತಗಳಲ್ಲಿ ಮೂರು ರನ್‌ಗಳಸಿ ಔಟ್ ಆದರು. ಬಳಿಕ ಹರ್ಷಲ್ ಪಟೇಲ್ ಎಸೆದ 16ನೇ ಓವರ್​ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಅನ್ನು ಕೂಡ ಹಿಡಿದರು.

ಕೊಹ್ಲಿ ಕೈಗೆ ಸಿಕ್ಕಿತು ಆರೆಂಜ್ ಕ್ಯಾಪ್: ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೆದ್ದಿತು ಆರ್​ಸಿಬಿ

ಆರ್‌ಸಿಬಿ ವಿರುದ್ಧ ಬ್ರಾರ್ ಪ್ರದರ್ಶನ

ಆರ್‌ಸಿಬಿ ವಿರುದ್ಧ ಹರ್‌ಪ್ರೀತ್ ಬೆಂಕಿ ಅಮೋಘ ಪ್ರದರ್ಶನ ನೀಡಿದರು. 28ರ ಹರೆಯದ ಕ್ರಿಕೆಟಿಗ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಓವರ್ ಬೌಲ್ ಮಾಡಿ ಕೇವಲ 13 ರನ್ ಬಿಟ್ಟುಕೊಟ್ಟರು. ಮ್ಯಾಕ್ಸ್‌ವೆಲ್ ಹೊರತಾಗಿ, ಅವರು ರಜತ್ ಪಾಟಿದಾರ್ ಅವರನ್ನು ಸಹ ಔಟ್ ಮಾಡಿದರು. ಇವರಿಬ್ಬರು ಕೂಡ ಕ್ಲೀನ್ ಬೌಲ್ಡ್ ಆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ