AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs KKR IPL 2026 Highlights: ಕೊಹ್ಲಿಗೆ ಜೀವದಾನ ನೀಡಿ ಸೋತ ಕೆಕೆಆರ್​​

Royal Challengers Bengaluru vs Kolkata Knight Riders, IPL 2026 Highlights: ವಿರಾಟ್ ಕೊಹ್ಲಿಯ ಅಜೇಯ ಶತಕದ ಬಲದಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯಕ್ಕೂ ಮೊದಲು, ಕೊಹ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು, ಆದರೆ ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಶತಕ ಬಾರಿಸುವುದರ ಜೊತೆಗೆ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

RCB vs KKR IPL 2026 Highlights: ಕೊಹ್ಲಿಗೆ ಜೀವದಾನ ನೀಡಿ ಸೋತ ಕೆಕೆಆರ್​​
Virat Kohli
ಪೃಥ್ವಿಶಂಕರ
|

Updated on:May 14, 2026 | 12:27 AM

Share

ವಿರಾಟ್ ಕೊಹ್ಲಿಯ ಅಜೇಯ ಶತಕದ ಬಲದಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯಕ್ಕೂ ಮೊದಲು, ಕೊಹ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು, ಆದರೆ ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಶತಕ ಬಾರಿಸುವುದರ ಜೊತೆಗೆ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಇದು ಆರ್‌ಸಿಬಿಯ ಸತತ ಎರಡನೇ ಗೆಲುವಾದರೆ, ಇತ್ತ ಕೆಕೆಆರ್‌ ಸತತ ನಾಲ್ಕು ಗೆಲುವುಗಳ ನಂತರ ಸೋಲಿಗೆ ಕೊರಳೊಡ್ಡಿತು.

LIVE NEWS & UPDATES

The liveblog has ended.
  • 14 May 2026 12:26 AM (IST)

    RCB vs KKR IPL 2026: 6 ವಿಕೆಟ್‌ಗಳ ಜಯ

    ವಿರಾಟ್ ಕೊಹ್ಲಿ ಅವರ ಅಜೇಯ ಶತಕದ ನೆರವಿನಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರೆ, ಇತ್ತ ಆರ್​​ಸಿಬಿ ವಿರುದ್ಧ ಸೋತ ಕೆಕೆಆರ್ ಮೂರನೇ ತಂಡವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದೆ.

  • 14 May 2026 12:23 AM (IST)

    RCB vs KKR IPL 2026: ಕೊಹ್ಲಿ 58 ಎಸೆತಗಳಲ್ಲಿ ಶತಕ

    ಕೊಹ್ಲಿ ಕೆಕೆಆರ್ ವಿರುದ್ಧ 58 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಈ ಆವೃತ್ತಿಯಲ್ಲಿ ಅವರ ಮೊದಲ ಶತಕ, ಐಪಿಎಲ್ ವೃತ್ತಿಜೀವನದಲ್ಲಿ 9 ನೇ ಮತ್ತು ಟಿ20 ವೃತ್ತಿಜೀವನದಲ್ಲಿ 10 ನೇ ಶತಕವಾಗಿದೆ.

  • 14 May 2026 12:16 AM (IST)

    RCB vs KKR IPL 2026: ಪಾಟಿದಾರ್ ಔಟ್

    ರಜತ್ ಪಟಿದಾರ್ 8 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 157 ರನ್ ಗಳಿಸುವಷ್ಟರಲ್ಲಿ ಈ ವಿಕೆಟ್ ಕಳೆದುಕೊಂಡಿತು.

  • 13 May 2026 11:57 PM (IST)

    RCB vs KKR IPL 2026: ಪಡಿಕ್ಕಲ್ ಔಟ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 129 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. 27 ಎಸೆತಗಳಲ್ಲಿ 39 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ದೇವದತ್ ಪಡಿಕ್ಕಲ್ ಔಟಾದರು.

  • 13 May 2026 11:57 PM (IST)

    RCB vs KKR IPL 2026: 120 ರನ್‌ ಪೂರ್ಣ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12.1 ಓವರ್ ಗಳಲ್ಲಿ 120 ರನ್ ಗಳ ಗಡಿ ದಾಟಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ.

  • 13 May 2026 11:56 PM (IST)

    RCB vs KKR IPL 2026: ಕೊಹ್ಲಿ ಅರ್ಧಶತಕ

    ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಈ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡುತ್ತಿದ್ದಾರೆ.

  • 13 May 2026 11:19 PM (IST)

    RCB vs KKR IPL 2026: 7 ಓವರ್‌ ಪೂರ್ಣ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ವಿರಾಟ್ ಕೊಹ್ಲಿ 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ದೇವದತ್ ಪಡಿಕ್ಕಲ್ 17 ರನ್ ಗಳಿಸಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ.

  • 13 May 2026 11:09 PM (IST)

    RCB vs KKR IPL 2026: 50 ರನ್ ಪೂರ್ಣ

    ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಓವರ್‌ಗಳಲ್ಲಿ 1 ವಿಕೆಟ್‌ಗೆ 56 ರನ್ ಗಳಿಸಿದೆ. ವಿರಾಟ್ ಕೊಹ್ಲಿ 21 ಮತ್ತು ದೇವದತ್ ಪಡಿಕ್ಕಲ್ 16 ರನ್ ಗಳಿಸಿದ್ದಾರೆ.

  • 13 May 2026 10:50 PM (IST)

    RCB vs KKR IPL 2026: 3 ಓವರ್‌ಗಳಲ್ಲಿ 36 ರನ್‌

    ಆರ್‌ಸಿಬಿ ವೇಗದ ಆರಂಭ ಪಡೆದಿದ್ದು, ತಂಡವು ಮೂರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ.

  • 13 May 2026 10:45 PM (IST)

    RCB vs KKR IPL 2026: 193 ರನ್ ಗುರಿ

    46 ಎಸೆತಗಳಲ್ಲಿ 71 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ ಅಂಗ್ಕ್ರಿಶ್ ರಘುವಂಶಿ ರನೌಟ್ ಆದರು. ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ರಿಂಕು ಸಿಂಗ್ ಕೂಡ 29 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಕ್ಯಾಮರೂನ್ ಗ್ರೀನ್ ಕೂಡ 32 ರನ್ ಗಳಿಸಿದರು.

  • 13 May 2026 10:20 PM (IST)

    RCB vs KKR IPL 2026: 18 ಓವರ್‌ಗಳು ಪೂರ್ಣ

    ಕೋಲ್ಕತ್ತಾ ನೈಟ್ ರೈಡರ್ಸ್ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್ ಗಳಿಸಿದೆ. ಅಂಗ್‌ಕ್ರಿಶ್ ರಘುವಂಶಿ (68) ಮತ್ತು ರಿಂಕು ಸಿಂಗ್ (32) ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ.

  • 13 May 2026 10:11 PM (IST)

    RCB vs KKR IPL 2026: 150 ರನ್‌ ಪೂರ್ಣ

    ಕೋಲ್ಕತ್ತಾ ನೈಟ್ ರೈಡರ್ಸ್ 16 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್ ಗಳಿಸಿದೆ. ಅಂಗ್‌ಕ್ರಿಶ್ ರಘುವಂಶಿ 62 ಮತ್ತು ರಿಂಕು ಸಿಂಗ್ 19 ರನ್ ಗಳಿಸಿದ್ದಾರೆ.

  • 13 May 2026 10:03 PM (IST)

    RCB vs KKR IPL 2026: ರಘುವಂಶಿ ಅರ್ಧಶತಕ

    ಅಂಗ್‌ಕ್ರಿಶ್ ರಘುವಂಶಿ ಅದ್ಭುತ ಇನ್ನಿಂಗ್ಸ್ ಆಡಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರೊಂದಿಗೆ, ಕೆಕೆಆರ್ 14 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿದೆ.

  • 13 May 2026 10:02 PM (IST)

    RCB vs KKR IPL 2026: ಗ್ರೀನ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 116 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. 24 ಎಸೆತಗಳಲ್ಲಿ ನಿರ್ಣಾಯಕ 32 ರನ್ ಗಳಿಸಿದ ನಂತರ ಕ್ಯಾಮರೂನ್ ಗ್ರೀನ್ ಔಟಾದರು.

  • 13 May 2026 09:37 PM (IST)

    RCB vs KKR IPL 2026: 7 ಓವರ್‌ಗಳು ಪೂರ್ಣ

    ಕೋಲ್ಕತ್ತಾ ನೈಟ್ ರೈಡರ್ಸ್ 7 ಓವರ್‌ಗಳಲ್ಲಿ 2 ವಿಕೆಟ್‌ಗೆ 64 ರನ್ ಗಳಿಸಿದೆ. ಕ್ಯಾಮರೂನ್ ಗ್ರೀನ್ 9 ರನ್ ಮತ್ತು ಅಂಗ್‌ಕ್ರಿಶ್ ರಘುವಂಶಿ 17 ರನ್ ಗಳಿಸಿದ್ದಾರೆ.

  • 13 May 2026 09:08 PM (IST)

    RCB vs KKR IPL 2026: ಅಲೆನ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 23 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಭುವನೇಶ್ವರ್ 8 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಫಿನ್ ಅಲೆನ್ ಅವರನ್ನು ಔಟ್ ಮಾಡಿದರು.

  • 13 May 2026 08:58 PM (IST)

    RCB vs KKR IPL 2026: ಕೆಕೆಆರ್‌ಗೆ ಉತ್ತಮ ಆರಂಭ

    ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆರಂಭ ನೀಡಿದೆ. ಮೊದಲ ಎರಡು ಓವರ್ ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 18 ರನ್ ಗಳಿಸಿದೆ. ಫಿನ್ ಅಲೆನ್ ಒಂದೇ ಓವರ್ ನಲ್ಲಿ 14 ರನ್ ಬಾರಿಸಿದರು.

  • 13 May 2026 08:43 PM (IST)

    RCB vs KKR IPL 2026: ಕೆಕೆಆರ್

    ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ರಿಂಕು ಸಿಂಗ್, ಸುನಿಲ್ ನರೈನ್, ಅನುಕುಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.

  • 13 May 2026 08:43 PM (IST)

    RCB vs KKR IPL 2026: ಆರ್​ಸಿಬಿ

    ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಸಿಖ್ ಸಲಾಮ್ ದಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್.

  • 13 May 2026 08:32 PM (IST)

    RCB vs KKR IPL 2026: ಟಾಸ್ ಗೆದ್ದ ಆರ್​​ಸಿಬಿ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

  • 13 May 2026 07:38 PM (IST)

    RCB vs KKR IPL 2026: ಮಳೆ ನಿಂತಿದೆ

    ರಾಯ್‌ಪುರದಲ್ಲಿ ಪ್ರಸ್ತುತ ಮಳೆಯಾಗುತ್ತಿಲ್ಲ, ಆದರೆ ನೆಲ ಒದ್ದೆಯಾಗಿರುವುದರಿಂದ ರಾತ್ರಿ 8.15 ಕ್ಕೆ ನೆಲವನ್ನು ಪರಿಶೀಲಿಸಲಾಗುವುದು.

  • 13 May 2026 06:59 PM (IST)

    RCB vs KKR IPL 2026: ಮಳೆಯಿಂದಾಗಿ ಟಾಸ್ ವಿಳಂಬ

    ಮಳೆಯಿಂದಾಗಿ ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ

Published On - May 13,2026 6:58 PM

Follow Us
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ