
ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿಯು ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಶುಕ್ರವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಸಜೀವನ್ ಸಜ್ನಾ ಮತ್ತು ನಿಕೋಲಾ ಕ್ಯಾರಿ ನಡುವಿನ 82 ರನ್‌ಗಳ ಪಾಲುದಾರಿಕೆಯಿಂದಾಗಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 154 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ನಾಡಿನ್ ಡಿ ಕ್ಲರ್ಕ್ ಅವರ ಅಜೇಯ 63 ರನ್‌ಗಳ ನೆರವಿನಿಂದ ಆರ್‌ಸಿಬಿ ಏಳು ವಿಕೆಟ್‌ಗಳಿಗೆ 157 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ನಾಡಿನ್ ಡಿ ಕ್ಲರ್ಕ್ ಅದ್ಭುತ ಪ್ರದರ್ಶನ ನೀಡಿದರು. ಕೊನೆಯ ಓವರ್‌ನಲ್ಲಿ ಅವರು 18 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು
ಅರುಂಧತಿ ರೆಡ್ಡಿ ಮತ್ತು ನಾಡಿನ್ ಡಿ ಕ್ಲರ್ಕ್ 52 ರನ್ ಸೇರಿಸಿದ್ದಾರೆ. 16 ಓವರ್‌ಗಳ ನಂತರ ತಂಡದ ಸ್ಕೋರ್ ಆರು ವಿಕೆಟ್ ನಷ್ಟಕ್ಕೆ 117 ರನ್ ಆಗಿದೆ.
ರಾಧಾ ಯಾದವ್ ಅವರನ್ನು ಬೌಲ್ಡ್ ಮಾಡುವ ಮೂಲಕ ಅಮೆಲಿಯಾ ಕೆರ್ ಆರ್‌ಸಿಬಿಯ ನಾಲ್ಕನೇ ವಿಕೆಟ್ ಉರುಳಿಸಿದರು. ರಿಚಾ ಮತ್ತು ನಾಡಿನ್ ಡಿ ಕ್ಲರ್ಕ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.
ಆರಂಭಿಕ ಜೋಡಿ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ ಪೆವಿಲಿಯನ್‌ಗೆ ಮರಳಿದರು. ಮಂಧಾನ 18 ರನ್‌ಗಳಿಗೆ ಮತ್ತು ಹ್ಯಾರಿಸ್ 25 ರನ್‌ಗಳಿಗೆ ಔಟಾದರು. ದಯಾಲನ್ ಹೇಮಲತಾ ಮತ್ತು ರಿಚಾ ಘೋಷ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 154 ರನ್ ಗಳಿಸಿ ಆರ್‌ಸಿಬಿಗೆ 155 ರನ್‌ಗಳ ಗುರಿಯನ್ನು ನೀಡಿತು.
ಮುಂಬೈ ಇಂಡಿಯನ್ಸ್ ತಂಡವು ಹರ್ಮನ್ಪ್ರೀತ್ ಕೌರ್ ರೂಪದಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು, ಅವರು 17 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು.
ಮುಂಬೈ ತಂಡವು ಮೂರನೇ ವಿಕೆಟ್ ಕಳೆದುಕೊಂಡಿದೆ. ಜಿ. ಕಮಲಿನಿ ಅವರನ್ನು ಶ್ರೇಯಾಂಕ ಪಾಟೀಲ್ ಔಟ್ ಮಾಡಿದರು. ಅವರು 28 ಎಸೆತಗಳಲ್ಲಿ 32 ರನ್ ಗಳಿಸಿ ನಿರ್ಗಮಿಸಿದರು. ಹರ್ಮನ್ಪ್ರೀತ್ ಕೌರ್ ಮತ್ತು ನಿಕೋಲಾ ಕ್ಯಾರಿ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.
ಮುಂಬೈ ತಂಡವು 35 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿದೆ. ನ್ಯಾಟ್ ಶೀವರ್-ಬ್ರಂಟ್ ಕೇವಲ ನಾಲ್ಕು ರನ್‌ಗಳಿಗೆ ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಈಗ ಕ್ರೀಸ್‌ಗೆ ಬಂದಿದ್ದಾರೆ.
ಮುಂಬೈ ತಂಡವು 21 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಲಾರೆನ್ ಬೆಲ್ ಎಸೆತದಲ್ಲಿ ಅಮೆಲಿಯಾ ಕೆರ್ ಕ್ಯಾಚ್ ನೀಡಿದರು. ನ್ಯಾಟ್ ಶೀವರ್ ಬ್ರಂಟ್ ಈಗ ಜಿ ಕಮಲಿನಿ ಜೊತೆ ಸೇರಿಕೊಂಡಿದ್ದಾರೆ.
ಮುಂಬೈ ತಂಡದ ಇನ್ನಿಂಗ್ಸ್ ಆರಂಭವಾಗಿದೆ. ಅಮೆಲಿಯಾ ಕೆರ್ ಮತ್ತು ಜಿ ಕಮಲಿನಿ ಕ್ರೀಸ್‌ನಲ್ಲಿದ್ದಾರೆ. ಮೊದಲ ಓವರ್‌ನಲ್ಲಿ ಲಾರೆನ್ ಬೆಲ್ ಯಾವುದೇ ರನ್ ನೀಡಲಿಲ್ಲ.
ಜಾಕ್ವೆಲಿನ್ ಫರ್ನಾಂಡಿಸ್ ಮಸ್ತ್ ಡಾನ್ಸ್
Jacqueline Fernandez's special performance sets the stage on fire ahead of #TATAWPL 2026 season opener 🙌🔥#KhelEmotionKa | #MIvRCB | @Asli_Jacqueline pic.twitter.com/D7Yx2fM70o
— Women's Premier League (WPL) (@wplt20) January 9, 2026
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭ ಆರಂಭವಾಗಿದೆ. ಪ್ರಸಿದ್ಧ ನಟಿ ಹರ್ನಾಜ್ ಸಂಧು ಪ್ರದರ್ಶನ ನೀಡುತ್ತಿದ್ದಾರೆ.
ಹರ್ಮನ್ಪ್ರೀತ್ ಕೌರ್ (ನಾಯಕಿ), ಜಿ ಕಮಲಿನಿ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ನಿಕೋಲಾ ಕ್ಯಾರಿ, ಪೂನಮ್ ಖೇಮ್ನಾರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್ ಮತ್ತು ಸೈಕಾ ಇಶಾಕ್.
ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ದಯಾಲನ್ ಹೇಮಲತಾ, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಪ್ರೇಮಾ ರಾವತ್, ಲಿನ್ಸೆ ಸ್ಮಿತ್ ಮತ್ತು ಲಾರೆನ್ ಬೆಲ್.
ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಜನವರಿ 9, ಶುಕ್ರವಾರ ಸಂಜೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಹಿತಿ ಪ್ರಕಾರ ಸಂಜೆ 6:45 ಕ್ಕೆ, ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ.
Published On - 6:23 pm, Fri, 9 January 26