IPL 2023 RR vs CSK Highlights: ರಾಜಸ್ಥಾನ್ ಬೊಂಬಾಟ್ ಆಟ; ಚೆನ್ನೈಗೆ 32 ರನ್ ಸೋಲು

|

Updated on: Apr 27, 2023 | 11:17 PM

Rajasthan Royals vs Chennai Super Kings IPL 2023 Highlights in Kannada: ಅಂತಿಮವಾಗಿ ಚೆನ್ನೈ ತಂಡವನ್ನು 32 ರನ್​ಗಳಿಂದ ಮಣಿಸಿದ ರಾಜಸ್ಥಾನ್ ಟೂರ್ನಿಯಲ್ಲಿ 6ನೇ ಗೆಲುವಿನೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

IPL 2023 RR vs CSK Highlights: ರಾಜಸ್ಥಾನ್ ಬೊಂಬಾಟ್ ಆಟ; ಚೆನ್ನೈಗೆ 32 ರನ್ ಸೋಲು
ಚೆನ್ನೈ - ರಾಜಸ್ಥಾನ ಮುಖಾಮುಖಿ

ಐಪಿಎಲ್​ 37ನೇ ಪಂದ್ಯದಲ್ಲಿಂದು ಮುಖಾಮುಖಿಯಾಗಿದ್ದ ರಾಜಸ್ಥಾನ್ ರಾಯಲ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಒಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾದವು. ಅಂತಿಮವಾಗಿ ಚೆನ್ನೈ ತಂಡವನ್ನು 32 ರನ್​ಗಳಿಂದ ಮಣಿಸಿದ ರಾಜಸ್ಥಾನ್ ಟೂರ್ನಿಯಲ್ಲಿ 6ನೇ ಗೆಲುವಿನೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಆರ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸಿಎಸ್ ಕೆ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ 32 ರನ್ ಗಳ ಜಯ ಸಾಧಿಸಿತು.

LIVE NEWS & UPDATES

The liveblog has ended.
  • 27 Apr 2023 11:12 PM (IST)

    ಚೆನ್ನೈಗೆ 32 ರನ್ ಸೋಲು

    ಕೊನೆಯ ಓವರ್​​ನಲ್ಲಿ ಕೇವಲ 4 ರನ್ ಕಲೆಹಾಕಿದ ಚೆನ್ನೈ ಕೊನೆಯ ಎಸೆತದಲ್ಲಿ ವಿಕೆಟ್ ಕೂಡ ಕಳೆದುಕೊಂಡಿತು. ಇದರೊಂದಿಗೆ 32 ರನ್​​ಗಳಿಂದ ರಾಜಸ್ಥಾನ್ ಎದುರು ಶರಣಾಯಿತು.

  • 27 Apr 2023 11:06 PM (IST)

    ದುಬೆ ಅರ್ಧಶತಕ

    19ನೇ ಐದನೇ ಎಸೆತದಲ್ಲಿ ಸಿಂಗಲ್ ಬಾರಿಸಿದ ದುಬೆ ತಮ್ಮ ಅರ್ಧಶತಕ ಪೂರೈಸಿದರು. ಹಾಗೆಯೇ ಕೊನೆಯ ಎಸೆತವನ್ನು ಜಡೇಜಾ ಬೌಂಡರಿಗಟ್ಟಿದರು.

  • 27 Apr 2023 11:00 PM (IST)

    ಚೆನ್ನೈ 150 ರನ್ ಪೂರ್ಣ

    18ನೇ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಜಡೇಜಾ, ಚೆನ್ನೈ ಸ್ಕೋರ್​ ಅನ್ನು 150 ರ ಗಡಿ ದಾಟಿಸಿದರು.

  • 27 Apr 2023 10:56 PM (IST)

    ದುಬೆ ಅಬ್ಬರ

    ಹೋಲ್ಡರ್ ಬೌಲ್ ಮಾಡಿದ 17ನೇ ಓವರ್​​ನಲ್ಲಿ ದುಬೆ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

  • 27 Apr 2023 10:45 PM (IST)

    ಝಂಪಾಗೆ 3 ವಿಕೆಟ್

    15ನೇ ಓವರ್​ನ 5ನೇ ಎಸೆತದಲ್ಲಿ ಝಂಪಾ, ಅಲಿ ವಿಕೆಟ್ ಉರುಳಿಸಿದರು. ಇದರೊಂದಿಗೆ ಚೆನ್ನೈ ತಂಡದ 5ನೇ ವಿಕೆಟ್ ಉರುಳಿದೆ

  • 27 Apr 2023 10:44 PM (IST)

    ಅರ್ಧಶತಕದ ಜೊತೆಯಾಟ

    ಝಂಪಾ ಬೌಲ್ ಮಾಡಿದ 15ನೇ ಓವರ್​ನ ಮೊದಲ ಎಸೆತವನ್ನು ದುಬೆ ಸಿಕ್ಸರ್​ಗಟ್ಟಿದರೆ, 4ನೇ ಎಸೆತವನ್ನು ಬೌಂಡರಿ ಬಾರಿಸಿದರು. ಇದರೊಂದಿಗೆ ಈ ಇಬ್ಬರ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿದೆ.

  • 27 Apr 2023 10:35 PM (IST)

    ಚೆನ್ನೈ ಶತಕ ಪೂರ್ಣ

    14ನೇ ಓವರ್​​ನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದ ದುಬೆ ಚೆನ್ನೈ ಸ್ಕೋರ್​​ ಅನ್ನು 100ರ ಗಡಿ ದಾಟಿಸಿದರು. ಹಾಗೆಯೇ 2ನೇ ಎಸೆತದಲ್ಲೂ ಮತ್ತೊಂದು ಸಿಕ್ಸರ್ ಬಂತು.

  • 27 Apr 2023 10:32 PM (IST)

    ಮತ್ತೊಂದು ಸಿಕ್ಸರ್

    13ನೇ ಓವರ್​​ನ 5ನೇ ಎಸೆತವನ್ನು ಅಲಿ ಸ್ಕ್ವೇರ್​ ಲೆಗ್​​ನಲ್ಲಿ ಸಿಕ್ಸರ್ ಗಟ್ಟಿದರು. ಹಾಗೆಯೇ ಕೊನೆಯ ಎಸೆತದಲ್ಲಿ ಬೌಂಡರಿ ಕೂಡ ಬಂತು.

  • 27 Apr 2023 10:27 PM (IST)

    ಅಲಿ ಸಿಕ್ಸರ್

    ಹೋಲ್ಡರ್ ಬೌಲ್ ಮಾಡಿದ 12ನೇ ಓವರ್​​ನ 4ನೇ ಎಸೆತದಲ್ಲಿ ಅಲಿ ಲಾಂಗ್​​ ಆಫ್​​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.

  • 27 Apr 2023 10:23 PM (IST)

    ರಹಾನೆ- ರಾಯುಡ್ ಔಟ್

    ಅಶ್ವಿನ್ ಬೌಲ್ ಮಾಡಿದ 11ನೇ ಓವರ್​ನ 2ನೇ ಎಸೆತದಲ್ಲಿ ರಹಾನೆ ಲಾಂಗ್​​ ಆನ್​​ನಲ್ಲಿ ಕ್ಯಾಚಿತ್ತು ಔಟಾದರೆ, ಆ ಬಳಿಕ ಬಂ ರಾಯುಡು ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

  • 27 Apr 2023 10:17 PM (IST)

    ಝಂಫಾಗೆ 2ನೇ ವಿಕೆಟ್

    6ನೇ ಓವರ್ ಕೊನೆಯ ಎಸೆತದಲ್ಲಿ ಕಾನ್ವೆ ವಿಕೆಟ್ ಉರುಳಿಸಿದ್ದ ಝಂಪಾ, 10ನೇ ಓವರ್​​ನ 2ನೇ ಎಸೆತದಲ್ಲಿ ರುತುರಾಜ್​​ರನ್ನು ಔಟ್ ಮಾಡಿದರು. 29 ಎಸತದಲ್ಲಿ 47 ರನ್ ಬಾರಿಸಿದ್ದ ರುತುರಾಜ್ ಲಾಂಗ್ ಆನ್​ನಲ್ಲಿ ಕ್ಯಾಚಿತ್ತು ಔಟಾದರು.

  • 27 Apr 2023 10:04 PM (IST)

    ಚೆನ್ನೈ ಅರ್ಧಶತಕ

    ಚಹಲ್ ಬೌಲ್ ಮಾಡಿದ 7ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಹೊಡೆದ ಗಾಯಕ್ವಾಡ್ ಆ ಬಳಿಕ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ಕದ್ದು ಚೆನ್ನೈ ಸ್ಕೋರ್ ಅನ್ನು 50ರ ಗಡಿ ದಾಟಿಸಿದರು.

  • 27 Apr 2023 10:01 PM (IST)

    ಚೆನ್ನೈನ ಮೊದಲ ವಿಕೆಟ್ ಪತನ

    ಪವರ್ ಪ್ಲೇನ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಕಾನ್ವೇ ಮಿಡ್ ಆಫ್​​ನಲ್ಲಿ ಕ್ಯಾಚಿತ್ತು ಔಟಾದರು. ಝಂಪಾ ಈ ವಿಕೆಟ್ ಪಡೆದರು.

  • 27 Apr 2023 09:51 PM (IST)

    5 ಓವರ್‌ ಅಂತ್ಯ

    5ನೇ ಓವರ್‌ನಲ್ಲಿ ಗಾಯಕ್ವಾಡ್ 1 ಬೌಂಡರಿ ಬಾರಿಸಿದರು. 5 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 35/0

  • 27 Apr 2023 09:51 PM (IST)

    ಗಾಯಕ್ವಾಡ್ ಸಿಕ್ಸರ್

    ಗಾಯಕ್ವಾಡ್ 4ನೇ ಓವರ್‌ನಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. ಚೆನ್ನೈ ಪರ ಗಾಯಕ್ವಾಡ್ 13 ರನ್ ಹಾಗೂ ಕಾನ್ವೆ 6 ರನ್ ಗಳಿಸಿ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 25/0

  • 27 Apr 2023 09:45 PM (IST)

    2 ಕ್ಯಾಚ್ ಡ್ರಾಪ್

    2ನೇ ಓವರ್​ನಲ್ಲಿ ರಾಜಸ್ಥಾನ ತಂಡ 2 ಕ್ಯಾಚ್ ಹಿಡಿಯುವ ಅವಕಾಶ ಕಳೆದುಕೊಂಡಿತು. ಚೆನ್ನೈ ಪರ ಗಾಯಕ್ವಾಡ್ 7 ರನ್ ಹಾಗೂ ಕಾನ್ವೆ 5 ರನ್ ಗಳಿಸಿ ಆಡುತ್ತಿದ್ದಾರೆ. 2 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 12/0

  • 27 Apr 2023 09:34 PM (IST)

    ಚೆನ್ನೈ ಇನ್ನಿಂಗ್ಸ್ ಆರಂಭ

    ಚೆನ್ನೈ ಇನ್ನಿಂಗ್ಸ್ ಆರಂಭವಾಗಿದೆ. ಚೆನ್ನೈ ಪರ ಡೆವೊನ್ ಕಾನ್ವೆ ಮತ್ತು ರಿತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ರಾಜಸ್ಥಾನ ಪರ ಸಂದೀಪ್ ಶರ್ಮಾ ಮೊದಲ ಓವರ್ ಎಸೆಯುತ್ತಿದ್ದಾರೆ. ಅಂತಿಮ ಎಸೆತದಲ್ಲಿ ಬೌಂಡರಿ ಬಂತು.

  • 27 Apr 2023 09:12 PM (IST)

    20ನೇ ಓವರ್​​ನಲ್ಲಿ 20 ರನ್

    ಪತಿರಾನ ಬೌಲ್ ಮಾಡಿದ 20ನೇ ಓವರ್​ನಲ್ಲಿ 20 ರನ್ ಬಂದವು. ಅಂತಿಮವಾಗಿ ರಾಜಸ್ಥಾನ್ ತಂಡ 5 ವಿಕೆಟ್ ಕಳೆದುಕೊಂಡು 201 ರನ್ ಕೆಲಹಾಕಿದೆ.

  • 27 Apr 2023 09:04 PM (IST)

    ದೇಶಪಾಂಡೆ ದುಬಾರಿ

    19ನೇ ಓವರ್​​ನಲ್ಲಿ ದೇಶಪಾಂಡೆ ಕೊಂಚ ದುಬಾರಿಯಾದರು. ಈ ಓವರ್​ನ ಮೊದಲ ಎಸೆತದಲ್ಲಿ ಪಡಿಕಲ್ ಬೌಂಡರಿ ಹೊಡೆದರೆ, ಆ ಬಳಿಕ ಧೃವ್ ಬೌಂಡರಿ ಹಾಗೂ ಸಿಕ್ಸರ್ ಹೊಡೆದರು.

  • 27 Apr 2023 09:00 PM (IST)

    18ನೇ ಓವರ್​ನಲ್ಲಿ 3 ಬೌಂಡರಿ

    ದೇಶಪಾಂಡೆ ಬೌಲ್ ಮಾಡಿದ 18ನೇ ಓವರ್​ನ 2 ಮತ್ತು 3ನೇ ಎಸೆತವನ್ನು ಬೌಂಡರಿಗಟ್ಟಿದ ಪಡಿಕಲ್ ಆ ಬಳಿಕ ಕೊನೆಯ ಎಸೆತದಲ್ಲೂ ಬೌಂಡರಿ ಹೊಡೆದರು.

  • 27 Apr 2023 08:59 PM (IST)

    ಪಡಿಕಲ್ ಬೌಂಡರಿ

    ತೀಕ್ಷಣ ಬೌಲ್ ಮಾಡಿದ 17ನೇ ಓವರ್​ನಲ್ಲಿ ಬೌಂಡರಿ ಹೊಡೆದ ಪಡಿಕಲ್ ರಾಜಸ್ಥಾನ್ ಸ್ಕೋರ್​ ಅನ್ನು 150ರ ಗಡಿ ದಾಟಿಸಿದರು.

  • 27 Apr 2023 08:53 PM (IST)

    ಹೆಟ್ಮೆಯರ್ ಔಟ್

    ರಾಜಸ್ಥಾನದ ಸ್ಫೋಟಕ ಬ್ಯಾಟ್ಸ್‌ಮನ್ ಹೆಟ್ಮೆಯರ್, ತಿಕಷ್ಣ ಅವರ ಓವರ್‌ನಲ್ಲಿ 8 ರನ್ ಗಳಿಸಿ ಔಟಾದರು.

  • 27 Apr 2023 08:52 PM (IST)

    16 ಓವರ್‌ ಮುಕ್ತಾಯ

    ರಾಜಸ್ಥಾನ ಪರ ಹೆಟ್ಮೆಯರ್ 8 ಹಾಗೂ ಜುರೆಲ್ 8 ರನ್‌ಗಳಿಸಿ ಆಡುತ್ತಿದ್ದಾರೆ. 16 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 146/3

  • 27 Apr 2023 08:41 PM (IST)

    ಜೈಸ್ವಾಲ್ ಔಟ್

    ದೇಶಪಾಂಡೆ ಅವರ ಓವರ್‌ನಲ್ಲಿ ರಾಜಸ್ಥಾನದ ಎರಡನೇ ವಿಕೆಟ್ ಪತನವಾಯಿತು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಜೈಸ್ವಾಲ್ 77 ರನ್ ಗಳಿಸಿ ಔಟಾದರು.14 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 132/3

  • 27 Apr 2023 08:41 PM (IST)

    ಎರಡನೇ ವಿಕೆಟ್ ಪತನ

    ರಾಜಸ್ಥಾನ ಪರ 200ನೇ ಪಂದ್ಯವನ್ನಾಡುತ್ತಿರುವ ಸಂಜು ಸ್ಯಾಮ್ಸನ್ ದೇಶಪಾಂಡೆ ಎಸೆತದಲ್ಲಿ ಕ್ಯಾಚ್ ಔಟ್ ಆದರು. ಸಂಜು ಸ್ಯಾಮ್ಸನ್ 17 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು.

  • 27 Apr 2023 08:40 PM (IST)

    13ನೇ ಓವರ್‌ನಲ್ಲಿ 2 ಬೌಂಡರಿ

    ಜಡೇಜಾ ಬೌಲ್ ಮಾಡಿದ 12ನೇ ಓವರ್​​ನಲ್ಲಿ 2 ಬೌಂಡರಿಗಳು ಬಂದವು. ರಾಜಸ್ಥಾನ ಪರ ಸಂಜು ಸ್ಯಾಮ್ಸನ್ 16 ರನ್ ಹಾಗೂ ಜೈಸ್ವಾಲ್ 73 ರನ್ ಗಳಿಸಿ ಆಡುತ್ತಿದ್ದಾರೆ. 13 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 125/1

  • 27 Apr 2023 08:39 PM (IST)

    12 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 113/1

    ರಾಜಸ್ಥಾನ ಪರ ಸಂಜು ಸ್ಯಾಮ್ಸನ್ 12 ಹಾಗೂ ಜೈಸ್ವಾಲ್ 66 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಜಡೇಜಾ ಮತ್ತು ಕಾನ್ವೆ ಅವರಿಂದ ಉತ್ತಮ ಫೀಲ್ಡಿಂಗ್ ಕಂಡಿತು.

  • 27 Apr 2023 08:24 PM (IST)

    ರಾಜಸ್ಥಾನ್ ಶತಕ ಪೂರ್ಣ

    10ನೇ ಓವರ್​​ನ 5ನೇ ಎಸೆತದಲ್ಲಿ ಸಿಂಗಲ್ ಕದ್ದ ಸಂಜು, ರಾಜಸ್ಥಾನ್ ತಂಡವನ್ನು 100ರ ಗಡಿ ದಾಟಿಸಿದರು.

  • 27 Apr 2023 08:18 PM (IST)

    10 ಓವರ್ ಅಂತ್ಯ

    ಮೊಯಿನ್ ಅಲಿ ಬೌಲ್ ಮಾಡಿದ 10ನೇ ಓವರ್​ನಲ್ಲಿ ಜೈಸ್ವಾಲ್ ಎಕ್ಸ್​​ಟ್ರಾ ಕವರ್​ನಲ್ಲಿ ಸಿಕ್ಸರ್​ ಬಾರಿಸಿದರು.

  • 27 Apr 2023 08:15 PM (IST)

    ಬಟ್ಲರ್ ಔಟ್

    ಜಡೇಜಾ ಬೌಲ್ ಮಾಡಿದ 9ನೇ ಓವರ್​ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಬಟ್ಲರ್ ಲಾಂಗ್​​ ಆನ್​ನಲ್ಲಿ ಕ್ಯಾಚಿತ್ತು ಔಟಾದರು.

  • 27 Apr 2023 08:13 PM (IST)

    ಜೈಸ್ವಾಲ್ ಅರ್ಧಶತಕ

    ಯಶಸ್ವಿ ಜೈಸ್ವಾಲ್ ತಮ್ಮ ಐಪಿಎಲ್ ವೃತ್ತಿಜೀವನದ 18ನೇ ಅರ್ಧಶತಕ ಬಾರಿಸಿದ್ದಾರೆ. ಅವರು ಇಂದು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 7 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 75/0. ಈ ಓವರ್‌ನಲ್ಲಿ ಸಿಕ್ಸರ್ ಕೂಡ ಬಂದಿತು.

  • 27 Apr 2023 08:13 PM (IST)

    ಜೈಸ್ವಾಲ್ ಅರ್ಧಶತಕ

    ಯಶಸ್ವಿ ಜೈಸ್ವಾಲ್ ತಮ್ಮ ಐಪಿಎಲ್ ವೃತ್ತಿಜೀವನದ 18ನೇ ಅರ್ಧಶತಕ ಬಾರಿಸಿದ್ದಾರೆ. ಅವರು ಇಂದು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 7 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 75/0. ಈ ಓವರ್‌ನಲ್ಲಿ ಸಿಕ್ಸರ್ ಕೂಡ ಬಂದಿತು.

  • 27 Apr 2023 08:03 PM (IST)

    ಜಡೇಜಾಗೆ ಸಿಕ್ಸರ್

    7ನೇ ಓವರ್​ ಬೌಲ್ ಮಾಡಿದ ಜಡೇಜಾ ಅವರ 4ನೇ ಎಸೆತವನ್ನು ಜೈಸ್ವಾಲ್ ಡೀಪ್ ಪಾಯಿಂಟ್​ನಲ್ಲಿ ಸಿಕ್ಸರ್​ಗಟ್ಟಿದರು.

  • 27 Apr 2023 08:03 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇಯ ಕೊನೆಯ ಓವರ್​ನಲ್ಲೂ 2 ಬೌಂಡರಿ ಬಂದವು. ಮೊದಲ ಬೌಂಡರಿ ಓವರ್ ಮಿಡ್ ಆಫ್​​ನಿಂದ ಬಂದರೆ, 2ನೇ ಬೌಂಡರಿ ಬೌಲರ್ ತಲೆಯ ಮೇಲಿಂದ ಬಂತು.

  • 27 Apr 2023 07:54 PM (IST)

    5ನೇ ಓವರ್ ಅಂತ್ಯ

    ದೇಶಪಾಂಡೆ ಬೌಲ್ ಮಾಡಿದ 5ನೇ ಓವರ್​ನ 2ನೇ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಹೊಡೆದರು. ಇದರೊಂದಿಗೆ ರಾಜಸ್ಥಾನ್ ಅರ್ಧಶತಕ ಪೂರೈಸಿತು.

  • 27 Apr 2023 07:46 PM (IST)

    ಯಶಸ್ವಿ ಸಿಕ್ಸ್

    ಆಕಾಶ್ ಸಿಂಗ್ ಬೌಲ್ ಮಾಡಿದ 3ನೇ ಓವರ್​ನಲ್ಲಿ ಜೈಸ್ವಾಲ್ 3 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು.

  • 27 Apr 2023 07:45 PM (IST)

    ಬಟ್ಲರ್ ಬೌಂಡರಿ

    ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್​ನಲ್ಲಿ ಬಟ್ಲರ್ 2ಬೌಂಡರಿ ಹೊಡೆದರು. ಮೊದಲ ಬೌಂಡರಿ ಡೀಪ್ ಕವರ್​​ ಕಡೆ ಬಂದರೆ, 2ನೇ ಬೌಂಡರಿ ಬ್ಯಾಕ್ವರ್ಡ್​ ಪಾಯಿಂಟ್​ನಿಂದ ಬಂತು.

  • 27 Apr 2023 07:34 PM (IST)

    ಜೈಸ್ವಾಲ್ ಬೌಂಡರಿ

    ರಾಜಸ್ಥಾನ್ ಬ್ಯಾಟಿಂಗ್ ಆರಂಭಿಸಿದ್ದು, ಆಕಾಶ್ ಬೌಲ್ ಮಾಡಿದ ಮೊದಲ ಓವರ್​ನಲ್ಲಿ ಜೈಸ್ವಾಲ್ 3 ಬೌಂಡರಿ ಹೊಡೆದರು.

  • 27 Apr 2023 07:20 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಮತಿಶಾ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್

  • 27 Apr 2023 07:20 PM (IST)

    ರಾಜಸ್ಥಾನ್ ರಾಯಲ್ಸ್

    ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್

  • 27 Apr 2023 07:02 PM (IST)

    ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - 7:01 pm, Thu, 27 April 23

Follow us on