RR vs GT Highlights IPL 2023: ಗುಜರಾತ್ಗೆ ಸುಲಭ ತುತ್ತಾದ ರಾಜಸ್ಥಾನ್; ಪಾಂಡ್ಯ ಪಡೆಗೆ ಭಾರಿ ಜಯ
Rajasthan Royals vs Gujarat Titans IPL 2023 Highlights in Kannada: ಐಪಿಎಲ್ನ 48 ನೇ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಕದನ ನಡೆಯುತ್ತಿದೆ.

ಐಪಿಎಲ್ನ 48 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತನ್ನ ನಂಬರ್ 1 ಪಟ್ಟವನ್ನು ಇನ್ನು ಭದ್ರಪಡಿಸಿಕೊಂಡಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನದ ಬ್ಯಾಟಿಂಗ್ ಕಳಪೆಯಾಗಿತ್ತು. ಶೋಚನೀಯ ಆಟದಿಂದಾಗಿ ಇಡೀ ರಾಜಸ್ಥಾನ ತಂಡ 18 ಓವರ್‌ಗಳಲ್ಲಿ ಕೇವಲ 118 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಕೇವಲ 1 ವಿಕೆಟ್ ಕಳೆದುಕೊಂಡು 14ನೇ ಓವರ್ನಲ್ಲೇ ಗೆಲುವಿನ ದಡ ಸೇರಿತು.
LIVE NEWS & UPDATES
-
14ನೇ ಓವರ್ನಲ್ಲೇ ಜಯ
ಚಹಲ್ ಬೌಲ್ ಮಾಡಿದ 14ನೇ ಓವರ್‌ನ ಐದನೇ ಎಸೆತದಲ್ಲಿ ಸಿಂಗಲ್ ತೆಗೆದ ಸಹಾ, ಗುಜರಾತ್ ಪಡೆಗೆ 9 ವಿಕೆಟ್‌ಗಳ ಜಯ ತಂದುಕೊಟ್ಟರು.
-
ಪಾಂಡ್ಯ ಬೌಂಡರಿ
ಅಶ್ವಿನ್ ಬೌಲ್ ಮಾಡಿದ 13ನೇ ಓವರ್‌ನ ಮೂರನೇ ಎಸೆತದಲ್ಲಿ ಪಾಂಡ್ಯ ಬೌಂಡರಿ ಹೊಡೆದರು.
-
-
ಗುಜರಾತ್ ಶತಕ ಪೂರ್ಣ
ಚಹಲ್ ಬೌಲ್ ಮಾಡಿದ 12ನೇ ಓವರ್‌ನ 4ನೇ ಎಸೆತದಲ್ಲಿ ಡಬಲ್ ರನ್ ತೆಗೆದ ಪಾಂಡ್ಯ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಹಾಗೆಯೇ ಈ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಕೂಡ ಬಂತು.
-
ಝಂಪಾ ಭಾರಿ ದುಬಾರಿ
ಝಂಪಾ ಬೌಲ್ ಮಾಡಿದ ಮೊದಲ 4 ಎಸೆತಗಳಲ್ಲಿ ಬೌಂಡರಿ ಬಂದವು. 4 ಎಸೆತಗಳಲ್ಲಿ 3 ಸಿಕ್ಸರ್ ಬಂದರೆ, 1 ಬೌಂಡರಿ ಬಂತು. ಒಟ್ಟು ಈ ಓವರ್‌ನಲ್ಲಿ 24 ರನ್ ಬಂದವು.
-
ಚಹಲ್ಗೆ ವಿಕೆಟ್
10ನೇ ಓವರ್‌ನ 4ನೇ ಎಸೆತದಲ್ಲಿ ಗಿಲ್ ಸ್ಟಂಪ್ ಔಟ್ ಆದರು. ಚಹಲ್ ಬೌಲ್ ಮಾಡಿದ 10ನೇ ಓವರ್‌ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಗಿಲ್ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
-
-
8ನೇ ಓವರ್ ಅಂತ್ಯ
7ನೇ ಓವರ್‌ನಲ್ಲಿ ಗಿಲ್ ಡೀಪ್ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು. ಇದನ್ನು ಬಿಟ್ಟರೆ 8ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ.
-
ಗುಜರಾತ್‌ನ 50 ರನ್ ಪೂರ್ಣ
ಗುಜರಾತ್ 50 ರನ್ ಪೂರೈಸಿದೆ. ಏಳನೇ ಓವರ್‌ನ ಮೊದಲ ಎಸೆತದಲ್ಲಿ ಸಹಾ ಒಂದು ರನ್ ಗಳಿಸುವ ಮೂಲಕ ತಂಡದ 50 ರನ್ ಪೂರೈಸಿದರು. ಈ ಸೀಸನ್ನಲ್ಲಿ ಇವರಿಬ್ಬರ ನಡುವಿನ ಮೊದಲ ಅರ್ಧಶತಕದ ಇನ್ನಿಂಗ್ಸ್ ಇದಾಗಿದೆ.
-
ಪವರ್ ಪ್ಲೇ ಅಂತ್ಯ
6ನೇ ಓವರ್‌ನಲ್ಲಿ ಒಟ್ಟು 10 ರನ್ ಬಂದವು. ಈ ಓವರ್‌ನಲ್ಲಿ ಗಿಲ್ ಬರೋಬ್ಬರಿ 2 ಬೌಂಡರಿ ಬಾರಿಸಿದರು.
-
5ನೇ ಓವರ್‌ನಲ್ಲಿ 3 ಬೌಂಡರಿ
ಬೌಲ್ಟ್ ಬೌಲ್ ಮಾಡಿದ 5ನೇ ಓವರ್‌ನಲ್ಲಿ 3 ಬೌಂಡರಿ ಹೊರಬಿದ್ದವು. ಮೊದಲ ಬೌಂಡರಿ ಗಿಲ್ ಬ್ಯಾಟ್ನಿಂದ ಬಂದರೆ, 4 ಮತ್ತು 5ನೇ ಎಸೆತದಲ್ಲಿ ಸಹಾ ಬೌಂಡರಿ ಹೊಡೆದರು.
-
ಸಹಾ ಬೌಂಡರಿ
ಸಂದೀಪ್ ಬೌಲ್ ಮಾಡಿದ 4ನೇ ಓವರ್‌ನ ಕೊನೆಯ ಎಸೆತದಲ್ಲಿ ಸಹಾ ಮಿಡ್ ಆಫ್ ತಲೆಯ ಮೇಲೆ ಬೌಂಡರಿ ಬಾರಿಸಿದರು.
-
ಗಿಲ್ ಬೌಂಡರಿ
ಬೌಲ್ಟ್ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತದಲ್ಲಿ ಗಿಲ್ ಡೀಪ್ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು.
-
ಗುಜರಾತ್ ಬ್ಯಾಟಿಂಗ್ ಆರಂಭ
ಗುಜರಾತ್ ಬ್ಯಾಟಿಂಗ್ ಆರಂಭಿಸಿದ್ದು, ವೃದ್ಧಿಮಾನ್ ಸಹಾ ಮೊದಲ ಓವರ್‌ನ ಮೂರು ಮತ್ತು 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
-
118 ರನ್‌ಗಳಿಗೆ ಆಲೌಟ್
18ನೇ ಓವರ್‌ನ 5ನೇ ಎಸೆತದಲ್ಲಿ ಝಂಪಾ ವಿಕೆಟ್ ಕಳೆದುಕೊಳ್ಳುವ ಮೂಲಕ ರಾಜಸ್ಥಾನ್ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 118 ರನ್ ಬಾರಿಸಿದೆ.
-
ಒಂಬತ್ತನೇ ವಿಕೆಟ್ ಪತನ
ರಾಜಸ್ಥಾನದ ಒಂಬತ್ತನೇ ವಿಕೆಟ್ ಕೂಡ ಪತನಗೊಂಡಿದೆ. 17ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ, ಟ್ರೆಂಟ್ ಬೌಲ್ಟ್ (15) ಅವರನ್ನು ಬೌಲ್ಡ್ ಮಾಡಿದರು. ಔಟಾಗುವ ಮೊದಲು ಬೋಲ್ಟ್ ಅತ್ಯುತ್ತಮ ಸಿಕ್ಸರ್ ಮತ್ತು ಫೋರ್ ಬಾರಿಸಿದ್ದರು.
-
100 ರನ್ ಪೂರ್ಣ
ವಿಕೆಟ್‌ಗಳ ಪತನದ ನಡುವೆಯೇ ರಾಜಸ್ಥಾನ 100ರ ಗಡಿ ದಾಟಿದೆ. 15ನೇ ಓವರ್‌ನಲ್ಲಿ ತಂಡದ 100 ರನ್‌ಗಳು ಪೂರ್ಣಗೊಂಡವು.
-
ಎಂಟನೇ ವಿಕೆಟ್ ಪತನ
ರಾಜಸ್ಥಾನದ ಕೊನೆಯ ಭರವಸೆ ಶಿಮ್ರಾನ್ ಹೆಟ್ಮೆಯರ್ (7) ಕೂಡ ಔಟಾಗಿದ್ದಾರೆ. ಮತ್ತೊಮ್ಮೆ ರಶೀದ್ ಖಾನ್ ಅವರ ಸ್ಪಿನ್ ಬಲೆಗೆ ಬಿದ್ದು ಎಲ್ಬಿಡಬ್ಲ್ಯೂ ಆಗಿ ಔಟಾದರು.
-
ಜುರೇಲ್ ಔಟ್
ರಾಜಸ್ಥಾನ್ ರಾಯಲ್ಸ್ ಸ್ಥಿತಿ ಚಿಂತಾಜನಕವಾಗಿದೆ. ಕೇವಲ 87 ರನ್‌ಗಳಿಗೆ ತಂಡದ 7 ವಿಕೆಟ್‌ಗಳು ಪತನಗೊಂಡಿವೆ. ಮತ್ತೊಮ್ಮೆ ನೂರ್ ಅಹ್ಮದ್ಗೆ ಧ್ರುವ್ ಜುರೈಲ್ (9) ಬಲಿಯಾಗಿದ್ದಾರೆ.
-
13 ಓವರ್ ಅಂತ್ಯ
ರಾಜಸ್ಥಾನ್ ಇನ್ನಿಂಗ್ಸ್ ಅಕ್ಷರಶಃ ತತ್ತರಿಸಿದೆ. 7ನೇ ಓವರ್‌ನಲ್ಲಿ ಕೊನೆಯ ಬೌಂಡರಿ ಬಂದಿದ್ದು ಬಿಟ್ಟರೆ ಅಲ್ಲಿಂದ ಮತ್ತೆ ಯಾವುದೇ ಬೌಂಡರಿ ಬಂದಿಲ್ಲ.
-
ಪಡಿಕಲ್ ಔಟ್
11ನೇ ಓವರ್‌ನ 3ನೇ ಎಸೆತದಲ್ಲಿ 12 ಎಸೆತಗಳಲ್ಲಿ 12 ರನ್ ಬಾರಿಸಿದ್ದ ಪಡಿಕಲ್ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ರಾಜಸ್ಥಾನ್ 12 ಓವರ್ ಅಂತ್ಯಕ್ಕೆ 82 ರನ್ ಬಾರಿಸಿದೆ.
-
ಐದನೇ ವಿಕೆಟ್ ಪತನ
ರಾಜಸ್ಥಾನ್ ರಾಯಲ್ಸ್ ಐದನೇ ವಿಕೆಟ್ ಕಳೆದುಕೊಂಡಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ಗೆ ಇಳಿದಿದ್ದ ಪರಾಗ್ ರಶೀದ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
-
ಅಶ್ವಿನ್ ಕೂಡ ಔಟ್
ತಮ್ಮ ಕೋಟಾದ 2ನೇ ಓವರ್ ಬೌಲ್ ಮಾಡಲು ಬಂದ ರಶೀದ್ 8ನೇ ಓವರ್‌ನ 5ನೇ ಎಸೆತದಲ್ಲಿ ಅಶ್ವಿನ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
-
ಸಂಜು ಔಟ್
ರಾಜಸ್ಥಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ನಾಯಕ ಸಂಜು ಸ್ಯಾಮ್ಸನ್ (30) ಕೂಡ ಔಟಾಗಿದ್ದಾರೆ. ಏಳನೇ ಓವರ್‌ನಲ್ಲಿ ಜೋಶ್ ಲಿಟಲ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು.
-
50 ರನ್ ಪೂರ್ಣಗೊಂಡಿದೆ
ಪವರ್‌ಪ್ಲೇಯಲ್ಲಿಯೇ ರಾಜಸ್ಥಾನ 50 ರನ್ ಪೂರೈಸಿದೆ. ಈ ಸಂದರ್ಭದಲ್ಲಿ, ರಾಜಸ್ಥಾನ ಆರಂಭಿಕರಿಬ್ಬರ ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ನಾಯಕ ಸಂಜು ಸ್ಯಾಮ್ಸನ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ.
-
ಜೈಸ್ವಾಲ್ ರನೌಟ್
ರಶೀದ್ ಬೌಲ್ ಮಾಡಿದ 6ನೇ ಓವರ್‌ನ ಮೊದಲ ಎಸೆತದಲ್ಲಿ ಜೈಸ್ವಾಲ್ ರನೌಟ್ಗೆ ಬಲಿಯಾದರು. ಕನ್ನಡಿಗ ಅಭಿನವ್ ಮನೋಹರ್ ಅದ್ಭುತ ಫೀಲ್ಡಿಂಗ್ ಮಾಡಿದರು.
-
ಸ್ಯಾಮ್ಸನ್ ಸಿಕ್ಸ್
ಹಾರ್ದಿಕ್ ಬೌಲ್ ಮಾಡಿದ 4ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಸಂಜು, 2ನೇ ಎಸೆತದಲ್ಲಿ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಹೊಡೆದರು.
-
ಜೈಸ್ವಾಲ್ ಸಿಕ್ಸರ್
ಶಮಿ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತದಲ್ಲಿ ಜೈಸ್ವಾಲ್ ಸ್ಕ್ವೈರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರೆ, 5ನೇ ಎಸೆತದಲ್ಲಿ ಮಿಡ್ ವಿಕೆಟ್ನಲ್ಲಿ ಬೌಂಡರಿ ಹೊಡೆದರು.
-
ಬಟ್ಲರ್ ಔಟ್,
2ನೇ ಓವರ್‌ನಲ್ಲಿ ಹಾರ್ದಿಕ್ಗೆ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಹೊಡೆದ ಬಟ್ಲರ್ 4ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
-
ಬಟ್ಲರ್ ಬೌಂಡರಿ
ಹಾರ್ದಿಕ್ ಬೌಲ್ ಮಾಡಿದ 2ನೇ ಓವರ್‌ನ 3 ಮತ್ತು 4ನೇ ಎಸೆತದಲ್ಲಿ ಬಟ್ಲರ್ ಬೌಂಡರಿ ಹೊಡೆದರು.
-
ರಾಜಸ್ಥಾನ್ ಬ್ಯಾಟಿಂಗ್ ಆರಂಭ
ರಾಜಸ್ಥಾನ್ ಪರ ಜೈಸ್ವಾಲ್ ಹಾಗೂ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶಮಿ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ಕೇವಲ 2 ರನ್ ಬಂದವು.
-
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಸಮಿ, ನೂರ್ ಅಹ್ಮದ್, ಜೋಶ್ ಲಿಟಲ್
-
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ದೇವದತ್ತ ಪಡಿಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೇಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ
-
ಟಾಸ್ ಗೆದ್ದ ರಾಜಸ್ಥಾನ್
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - May 05,2023 7:01 PM