SA vs IND: ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಸೌತ್ ಆಫ್ರಿಕಾ
SA Vs IND 1st ODI: ಭಾರತ-ಸೌತ್ ಆಫ್ರಿಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 17 ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಇನ್ನು 2ನೇ ಪಂದ್ಯವು ಗೆಬ್ಬಾಗದಲ್ಲಿ ಡಿಸೆಂಬರ್ 19 ರಂದು ಜರುಗಲಿದೆ. ಹಾಗೆಯೇ 3ನೇ ಏಕದಿನ ಪಂದ್ಯವು ಡಿಸೆಂಬರ್ 21 ರಂದು ಪಾರ್ಲ್ನಲ್ಲಿ ನಡೆಯಲಿದೆ.
ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ (South Africa) ತಂಡವು ಪಿಂಕ್ ಜೆರ್ಸಿಯಲ್ಲಿ (Pink Jersey) ಕಣಕ್ಕಿಳಿಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ತಮ್ಮ ಸಾಂಪ್ರದಾಯಿಕ ಹಳದಿ-ಹಸಿರು ಜೆರ್ಸಿ ಬದಲಿಗೆ ಪಿಂಕ್ ಸಮವಸ್ತ್ರದಲ್ಲಿ ಸೌತ್ ಆಫ್ರಿಕಾ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಜೆರ್ಸಿ ಬಣ್ಣ ಬದಲಾವಣೆ ಯಾಕೆ?
ಸೌತ್ ಆಫ್ರಿಕಾ ತಂಡವು ಪ್ರತಿ ವರ್ಷ ಪಿಂಕ್ ಡೇ ಅನ್ನು ಆಚರಿಸುತ್ತದೆ. ಇದರ ಮೂಲ ಉದ್ದೇಶ ಸ್ತನ ಕ್ಯಾನ್ಸರ್ ಜಾಗೃತಿಯಾಗಿದೆ. ಇದರ ಜೊತೆಗೆ ಶಿಕ್ಷಣ ಮತ್ತು ಸಂಶೋಧನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ.
ಸೌತ್ ಆಫ್ರಿಕಾ ತಂಡದ ಈ ಅಭಿಯಾನದಲ್ಲಿ ಭಾಗವಹಿಸಲು ಪ್ರೇಕ್ಷಕರು ಕೂಡ ಪಿಂಕ್ ಡ್ರೆಸ್ನಲ್ಲಿ ಸ್ಟೇಡಿಯಂಗೆ ಬರಲಿದ್ದಾರೆ. ಅಷ್ಟೇ ಅಲ್ಲದೆ ಈ ಪಂದ್ಯದ ಸಂಪೂರ್ಣ ಗಳಿಕೆಯನ್ನು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಉಪಕ್ರಮಗಳಿಗೆ ವ್ಯಯಿಸಲಾಗುತ್ತದೆ.
#PitchUpInPink on Sunday at the Bullring for a great cause 💗
Let’s rise to the challenge and raise Breast Cancer Awareness 🎀 🏏
🏟: DP Wanderers Stadium, Johannesburg 🕚: 10h00 📺: SuperSport Grandstand (Ch 201)
You don’t want miss out! #WozaNawe #BePartOfIt #PinkDay pic.twitter.com/ICpdpa0FCJ
— Proteas Men (@ProteasMenCSA) December 15, 2023
ರೋಹಿತ್-ಕೊಹ್ಲಿ ಇಲ್ಲ:
ಸೌತ್ ಆಫ್ರಿಕಾ ವಿರುದ್ಧದ ಪಿಂಕ್ ಜೆರ್ಸಿ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದಿಲ್ಲ. ಈ ಇಬ್ಬರು ಆಟಗಾರರು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ, ಉದಯೋನ್ಮುಖ ಪ್ರತಿಭೆಗಳಾದ ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಸೌತ್ ಆಫ್ರಿಕಾ ತಂಡ: ರೀಝ ಹೆಂಡ್ರಿಕ್ಸ್, ಟೋನಿ ಡಿ ಜೊರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್ , ನಾಂದ್ರೆ ಬರ್ಗರ್, ತಬ್ರೇಝ್ ಶಮ್ಸಿ, ಲಿಝಾಡ್ ವಿಲಿಯಮ್ಸ್, ವಿಯಾನ್ ಮುಲ್ಡರ್, ಒಟ್ನಿಯೆಲ್ ಬಾರ್ಟ್‌ಮ್ಯಾನ್, ಮಿಹ್ಲಾಲಿ ಎಂಪೊಂಗ್ವಾನಾ, ಕೈಲ್ ವೆರ್ರೆನ್ನೆ.
ಇದನ್ನೂ ಓದಿ: IPL 2024: ಈ ಬಾರಿಯ ಐಪಿಎಲ್ನೊಂದಿಗೆ 3 ಆಟಗಾರರು ವಿದಾಯ..!
ಭಾರತ ತಂಡ: ರಜತ್ ಪಾಟಿದಾರ್, ಸಾಯಿ ಸುದರ್ಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಯುಜ್ವೇಂದ್ರ ಚಹಲ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಆಕಾಶ್ ದೀಪ್.
ಏಕದಿನ ಸರಣಿ ವೇಳಾಪಟ್ಟಿ:
ಭಾರತ-ಸೌತ್ ಆಫ್ರಿಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 17 ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಇನ್ನು 2ನೇ ಪಂದ್ಯವು ಗೆಬ್ಬಾಗದಲ್ಲಿ ಡಿಸೆಂಬರ್ 19 ರಂದು ಜರುಗಲಿದೆ. ಹಾಗೆಯೇ 3ನೇ ಏಕದಿನ ಪಂದ್ಯವು ಡಿಸೆಂಬರ್ 21 ರಂದು ಪಾರ್ಲ್ನಲ್ಲಿ ನಡೆಯಲಿದೆ.
Published On - 8:47 am, Sun, 17 December 23