ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಹೆನ್ರಿಕ್ ಕ್ಲಾಸೆನ್ (Heinrich Klaasen) ಕೇವಲ 43 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ ಡರ್ಬನ್ ಸೂಪರ್ ಜೈಂಟ್ಸ್ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕ ಕ್ವಿಂಟನ್ ಡಿಕಾಕ್ (43) ಹಾಗೂ ಬೆನ್ ಮೆಕ್ಡೆರ್ಮಾಟ್ (41) ಉತ್ತಮ ಆರಂಭ ಒದಗಿಸಿದ್ದರು. ಪವರ್ಪ್ಲೇನಲ್ಲಿ 76 ರನ್ ಬಾರಿಸಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಜಿಮ್ಮಿ ನೀಶಮ್ ಯಶಸ್ವಿಯಾದರು. ಅದರಂತೆ ಡಿಕಾಕ್ ಮೊದಲಿಗರಾಗಿ ಹೊರನಡೆದರು.
ಈ ವೇಳೆ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಿಟೋರಿಯಾ ಕ್ಯಾಪಿಟಲ್ಸ್ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಕ್ಲಾಸೆನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದರು. ಪರಿಣಾಮ 6 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿದರು.
ಹೆನ್ರಿಕ್ ಕ್ಲಾಸೆನ್ (104) ಅವರ ಈ ಅಜೇಯ ಶತಕದೊಂದಿಗೆ ಡರ್ಬನ್ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು.
255 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸೂಪರ್ ಜೈಂಟ್ಸ್ ಬೌಲರ್ಗಳು ಯಶಸ್ವಿಯಾದರು. ಪರಿಣಾಮ ತಂಡದ ಮೊತ್ತ 51 ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
ಮಾರಕ ದಾಳಿ ಸಂಘಟಿಸಿದ ಜೂನಿಯರ್ ಡಾಲ 3 ವಿಕೆಟ್ ಕಬಳಿಸಿ ಮಿಂಚಿದರು. ಡ್ವೈನ್ ಪ್ರಿಟೋರಿಯಸ್ ಹಾಗೂ ವಿಯಾನ್ ಮುಲ್ಡರ್ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಕ್ಯಾಪಿಟಲ್ಸ್ ಬ್ಯಾಟರ್ಗಳು ಪರದಾಡಿದರು. ಅಂತಿಮವಾಗಿ 13.5 ಓವರ್ಗಳಲ್ಲಿ 103 ರನ್ಗಳಿಗೆ ಸರ್ವಪತನ ಕಾಣುವ ಮೂಲಕ ಪ್ರಿಟೋರಿಯಾ ಕ್ಯಾಪಿಟಲ್ಸ್ 151 ರನ್ಗಳಿಂದ ಹೀನಾಯ ಸೋಲೊಪ್ಪಿಕೊಂಡಿತು.
It took Heinrich Klaasen just 43 balls. Sit back and enjoy his amazing innings ?#Betway #SA20 #PCvDSG @Betway_India pic.twitter.com/jtmDkSsahZ
— Betway SA20 (@SA20_League) February 5, 2023
44 ಎಸೆತಗಳಲ್ಲಿ 10 ಫೋರ್ ಹಾಗೂ 6 ಭರ್ಜರಿ ಸಿಕ್ಸ್ ಸಿಡಿಸಿ ಅಜೇಯ 104 ಬಾರಿಸಿ ಮಿಂಚಿದ್ದ ಡರ್ಬನ್ ಸೂಪರ್ ಜೈಂಟ್ಸ್ ಆಟಗಾರ ಹೆನ್ರಿಕ್ ಕ್ಲಾಸೆನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.