ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿಯಿಂದ ಏನನ್ನು ನಿರೀಕ್ಷಿಸಬಹುದು? ಸಚಿನ್ ತೆಂಡೂಲ್ಕರ್ ಹೇಳಿದ್ದೇನು?

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿಯಿಂದ ಏನನ್ನು ನಿರೀಕ್ಷಿಸಬಹುದು? ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅದ್ಭುತ ಜೋಡಿ. ಇಬ್ಬರೂ ತಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ತಯಾರಿ ಮಾಡುತ್ತಾರೆ ಎಂದು ನನಗೆ ತಿಳಿದಿದೆ.

TV9kannada Web Team

| Edited By: Zahir PY

Jan 27, 2022 | 10:03 PM

ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ. ರವಿ ಶಾಸ್ತ್ರಿ ಕಳೆದ ವರ್ಷ ನವೆಂಬರ್‌ನಲ್ಲಿ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಹೊಸ ಯುಗ ಶುರುವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಇದೀಗ ಕೋಚ್ ಹಾಗೂ ನಾಯಕನಿಗೆ ಹೊಸ ಸವಾಲಾಗಿದೆ. ಏಕೆಂದರೆ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದ ಸರಣಿಯಲ್ಲಿ ಹೀನಾಯವಾಗಿ ಸೋತಿದೆ. ಸದ್ಯ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಭರ್ಜರಿ ಗೆಲುವಿನ ಅಗತ್ಯವಿದೆ. ಹೀಗಾಗಿಯೇ ವಿಂಡೀಸ್ ವಿರುದ್ದ ದ್ರಾವಿಡ್-ರೋಹಿತ್ ಜೋಡಿ ಯಾವ ರೀತಿಯ ತಂತ್ರ ಹೆಣೆಯಲ್ಲಿದ್ದಾರೆ ಕಾದು ನೋಡಬೇಕಿದೆ.ಇತ್ತ ಹೊಸ ಕೋಚ್ ಹಾಗೂ ಹೊಸ ನಾಯಕನ ಮೇಲೆ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇಂತಹ ನಿರೀಕ್ಷೆಗಳನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಹೊಂದಿರುವುದು ವಿಶೇಷ.

ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಆರಂಭ ಉತ್ತಮವಾಗಿಲ್ಲ. ಅವರು ರೋಹಿತ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ T20 ಸರಣಿಯನ್ನು ಗೆದ್ದಿದ್ದರು. ಹಾಗೆಯೇ ವಿರಾಟ್ ನಾಯಕತ್ವದಲ್ಲಿ ನ್ಯೂಜಿಲೆಂಡ್‌ನಿಂದ ಟೆಸ್ಟ್ ಸರಣಿಯಲ್ಲೂ ಜಯ ಸಾಧಿಸಿತು. ಆದರೆ, ತಮ್ಮ ಮೊದಲ ವಿದೇಶಿ ಪ್ರವಾಸವಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಆದಾಗ್ಯೂ, ಈ ಎರಡೂ ಸರಣಿಗಳಲ್ಲಿ, ದ್ರಾವಿಡ್ ವಿಭಿನ್ನ ನಾಯಕರೊಂದಿಗೆ ಕೆಲಸ ಮಾಡಬೇಕಾಗಿತ್ತು. ಆದರೆ ಈಗ ರೋಹಿತ್ ಮರಳುವುದರೊಂದಿಗೆ, ಇಬ್ಬರೂ ಮತ್ತೊಮ್ಮೆ ಯಾವ ರೀತಿಯಲ್ಲಿ ಕಾರ್ಯತಂತ್ರ ರೂಪಿಸಲಿದ್ದಾರೆ ಎಂಬುದೇ ಕುತೂಹಲ.

ಇಂತಹ ಕುತೂಹಲ ಸಚಿನ್ ತೆಂಡೂಲ್ಕರ್ ಅವರಲ್ಲೂ ಇದ್ದು, ಈ ಬಗ್ಗೆ ಮಾತನಾಡಿರುವ ಮಾಸ್ಟರ್ ಬ್ಲಾಸ್ಟರ್, ನಿಸ್ಸಂಶಯವಾಗಿ ಈ ಜೋಡಿಯಿಂದ ಟೀಮ್ ಇಂಡಿಯಾ ಹೊಸ ಯಶಸ್ಸನ್ನು ನಿರೀಕ್ಷಿಸುತ್ತದೆ. ಅದೇ ಸಮಯದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುವ ಮತ್ತು ಪೋಷಿಸುವ ಜವಾಬ್ದಾರಿಯೂ ಇದೆ. ಇಂತಹ ಎಲ್ಲಾ ಸವಾಲನ್ನು ಮೆಟ್ಟಿ ನಿಂತು ಈ ಇಬ್ಬರು ಒಟ್ಟಿಗೆ ಅದ್ಭುತಗಳನ್ನು ಮಾಡುತ್ತಾರೆ ಎಂದು ವಿಶ್ವಾಸ ನನ್ನಲ್ಲೂ ಇದೆ ಎಂದು. ‘ ಬ್ಯಾಕ್‌ಸ್ಟೇಜ್ ವಿತ್ ಬೋರಿಯಾ’ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ಸಚಿನ್ ಹೇಳಿದ್ದಾರೆ.

“ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅದ್ಭುತ ಜೋಡಿ. ಇಬ್ಬರೂ ತಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ತಯಾರಿ ಮಾಡುತ್ತಾರೆ ಎಂದು ನನಗೆ ತಿಳಿದಿದೆ. ಅವರನ್ನು ಬೆಂಬಲಿಸಲು ಸಾಕಷ್ಟು ಜನರಿದ್ದಾರೆ. ಇಂತಹ ಸಮಯದಲ್ಲಿ ಜೊತೆಯಾಗಿ ಸಾಗುವುದು ಬಹಳ ಮುಖ್ಯ. ಹೀಗಾಗಿ ನನ್ನ ಪ್ರಕಾರ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಜೋಡಿ ಮುಂದಿನ ದಿನಗಳಲ್ಲಿ ಕಮಾಲ್ ಮಾಡಲಿದ್ದಾರೆ” ಎಂದು ಸಚಿನ್ ಹೇಳಿದರು.

ಇದೇ ವೇಳೆ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಬಗ್ಗೆ ಮಾತನಾಡಿದ ಸಚಿನ್, ಸೌತ್ ಆಫ್ರಿಕಾ ಟೆಸ್ಟ್​​ ಸಿರೀಸ್​ನಲ್ಲಿ ಮುನ್ನಡೆ ಸಾಧಿಸಿದ ಟೀಮ್ ಇಂಡಿಯಾ ಆ ಬಳಿಕ ಸೋಲನ್ನು ಎದುರಿಸಬೇಕಾಯಿತು. ಅದೇ ಸಮಯದಲ್ಲಿ, ಏಕದಿನ ಸರಣಿಯಲ್ಲಿ ತಂಡವು ಒಂದೇ ಒಂದು ಜಯ ಸಾಧಿಸಲಾಗಲಿಲ್ಲ. ಇಂತಹ ಏರಿಳಿತಗಳು ಸಹಜ. ಇದಾಗ್ಯೂ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ, ಇಬ್ಬರೂ ಆಟದಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ . ಈ ರೀತಿಯ ಏರಿಳಿತಗಳನ್ನು ಹೇಗೆ ಎದುರಿಸಬೇಕೆಂದು ಅವರಿಗೂ ಗೊತ್ತಿದೆ ಎಂದು ಸಚಿನ್ ಹೇಳಿದರು.

“ಪ್ರತಿಯೊಬ್ಬರೂ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಈ ಹಾದಿಯಲ್ಲಿ ಏರಿಳಿತಗಳು ಇದ್ದೇ ಇರುತ್ತವೆ ಎಂಬುದು ರಾಹುಲ್ ಅವರಿಗೆ ಗೊತ್ತಿರುವಷ್ಟು ಕ್ರಿಕೆಟ್ ಆಡಿದ್ದಾರೆ. ಬಿಟ್ಟುಕೊಡದಿರುವುದು ಒಂದೇ ದಾರಿ. ಪ್ರಯತ್ನವನ್ನು ಮುಂದುವರಿಸಿ ಮತ್ತು ಮುಂದುವರಿಯಿರಿ. ” ಎಂದು ಸಚಿನ್ ಇದೇ ವೇಳೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Sachin Tendulkar says Rohit and Rahul’s fantastic pair will give their best)

Follow us on

Related Stories

Most Read Stories

Click on your DTH Provider to Add TV9 Kannada