Arjun Tendulkar: ಐಪಿಎಲ್​ನಲ್ಲಿ ಸಿಕ್ಕಿಲ್ಲ ಚಾನ್ಸ್​: ವಿದೇಶಿ ಕ್ಲಬ್ ಪರ ಕಣಕ್ಕಿಳಿದ ಅರ್ಜುನ್ ತೆಂಡೂಲ್ಕರ್

| Updated By: ಝಾಹಿರ್ ಯೂಸುಫ್

Updated on: Jul 20, 2022 | 1:55 PM

Arjun Tendulkar: ಕೌಂಟಿ ಕ್ರಿಕೆಟ್​ ನಲ್ಲಿ ಅಭ್ಯಾಸವನ್ನು ಮುಂದುರೆಸಿರುವ ಆಲ್​ರೌಂಡರ್ ಅರ್ಜುನ್ ತೆಂಡೂಲ್ಕರ್ ತಂಡವೊಂದರ ಪರ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ.

Arjun Tendulkar: ಐಪಿಎಲ್​ನಲ್ಲಿ ಸಿಕ್ಕಿಲ್ಲ ಚಾನ್ಸ್​: ವಿದೇಶಿ ಕ್ಲಬ್ ಪರ ಕಣಕ್ಕಿಳಿದ ಅರ್ಜುನ್ ತೆಂಡೂಲ್ಕರ್
Arjun Tendulkar
Follow us on

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tenudlka) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ದೇಶೀಯ ಕ್ರಿಕೆಟ್​​ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದಾಗ್ಯೂ ಕಳೆದ ಎರಡು ಸೀಸನ್​ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಆಯ್ಕೆಯಾದರೂ, ಅರ್ಜುನ್​ಗೆ ಪ್ಲೇಯಿಂಗ್ ಇಲೆವೆನ್​ ನ ಭಾಗವಾಗುವ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಇತ್ತ ದೇಶೀಯ ತಂಡದಲ್ಲೂ ಇಲ್ಲ, ಅತ್ತ ಐಪಿಎಲ್ ಕೂಡ ನಡೆಯುತ್ತಿಲ್ಲ. ಹೀಗಾಗಿಯೇ ಅರ್ಜುನ್ ತೆಂಡೂಲ್ಕರ್ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಅಲ್ಲೇ ತಮ್ಮ ಕ್ರಿಕೆಟ್ ಅಭ್ಯಾಸವನ್ನು ಮುಂದುವರೆಸಿದ್ದಾರೆ.

ಕೌಂಟಿ ಕ್ರಿಕೆಟ್​ ನಲ್ಲಿ ಅಭ್ಯಾಸವನ್ನು ಮುಂದುರೆಸಿರುವ ಆಲ್​ರೌಂಡರ್ ಅರ್ಜುನ್ ತೆಂಡೂಲ್ಕರ್ ತಂಡವೊಂದರ ಪರ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ. ಕೌಂಟಿ ಕ್ರಿಕೆಟ್​ ತಂಡಗಳ ನಡುವೆ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜುನ್ ಮಿಡ್ಲ್​​ಸೆಕ್ಸ್​ ತಂಡದ ಪರ ಕಣಕ್ಕಿಳಿದಿದ್ದರು. 50 ಓವರ್​ಗಳ ಈ ಪಂದ್ಯದಲ್ಲಿ ಮಿಡ್ಲ್‌ಸೆಕ್ಸ್ ಸೆಕೆಂಡ್ ಇಲೆವೆನ್ ಮತ್ತು ಕ್ಲಬ್ ಕ್ರಿಕೆಟ್ ಕಾನ್ಫರೆನ್ಸ್ ಇಲೆವೆನ್ ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಮಿಡ್ಲ್​ಸೆಕ್ಸ್​ ಪರ ಎಡಗೈ ಮಧ್ಯಮ ವೇಗಿಯಾಗಿ ಕಾಣಿಸಿಕೊಂಡ ಅರ್ಜುನ್ ತೆಂಡೂಲ್ಕರ್  4 ಓವರ್‌ಗಳನ್ನು ಬೌಲ್ ಮಾಡುವ ಅವಕಾಶವನ್ನು ಪಡೆದರು. ಈ ವೇಳೆ ಕೇವಲ 16 ರನ್ ನೀಡಿ ಒಂದು ವಿಕೆಟ್ ಪಡೆದರು. ಅರ್ಜುನ್ ಆಫ್-ಸ್ಟಂಪ್‌ನಲ್ಲಿ ಎಸೆದ ಚೆಂಡನ್ನು ಹೊಡೆಯಲು ಹೋದ  ಐರನ್​ಸೈಡ್​ನ ಬ್ಯಾಟ್‌ ಸವರಿ ಚೆಂಡು ವಿಕೆಟ್‌ಕೀಪರ್‌ನ ಗ್ಲೌಸ್‌ ಸೇರಿತು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಅರ್ಜುನ್ ಸೇರಿದಂತೆ ತಂಡದ ಇತರೆ ಬೌಲರ್‌ಗಳ ಪ್ರಬಲ ಪ್ರದರ್ಶನದಿಂದಾಗಿ ಕ್ಲಬ್ ಕ್ರಿಕೆಟ್ ಇಲೆವೆನ್ ಕೇವಲ 257 ರನ್ ಗಳಿಸಿತು. ಆದರೆ ಚೇಸಿಂಗ್ ವೇಳೆ ಅರ್ಜುನ್​ಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಏಕೆಂದರೆ ಮಿಡ್ಲ್​ಸೆಕ್ಸ್​ನ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳೇ ತಂಡವನ್ನು ಗೆಲುವಿನತ್ತ ಮುನ್ನಡೆಸಿತು. ತಂಡದ ಪರ ಡೆವಿಯೆಸ್ಟ್ 94 ರನ್ ಮತ್ತು ಡಿ ಒಡ್ರಿಸ್ಕೋಲ್ 79 ರನ್ ಬಾರಿಸುವ ಮೂಲಕ 7 ವಿಕೆಟ್‌ಗಳ ಜಯ ತಂದುಕೊಟ್ಟರು. ಸದ್ಯ ಇಂಗ್ಲೆಂಡ್ ಕೌಂಟಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್ ಮುಂದಿನ ಸೀಸನ್​ ಐಪಿಎಲ್​ ಮೂಲಕ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ.