Sai Sudarshan: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಗಟ್ಟಿದ ಸಾಯಿ ಸುದರ್ಶನ್: ಏನಿದು ಸಾಧನೆ ನೋಡಿ

GT vs SRH, IPL 2025: ಈ ಋತುವಿನಲ್ಲಿ ಸಾಯಿ ಸುದರ್ಶನ್ ಆಡಿದ 10 ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ ಐಪಿಎಲ್‌ನ 18 ನೇ ಋತುವಿನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟರ್ ಆಗಿದ್ದಾರೆ. ಅದೇ ಸಮಯದಲ್ಲಿ, ಸಾಯಿ ಹೈದರಾಬಾದ್ ವಿರುದ್ಧ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

Sai Sudarshan: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಗಟ್ಟಿದ ಸಾಯಿ ಸುದರ್ಶನ್: ಏನಿದು ಸಾಧನೆ ನೋಡಿ
Sai Sudarshan And Sachin Tendulkar

Updated on: May 03, 2025 | 8:57 AM

ಬೆಂಗಳೂರು (ಮೇ. 03): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League) 51 ನೇ ಪಂದ್ಯವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಆತಿಥೇಯ ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು 38 ರನ್‌ಗಳಿಂದ ಗೆದ್ದುಕೊಂಡಿತು. ಈ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಜಿಟಿ ತಂಡದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಈ ಪಂದ್ಯದಲ್ಲಿ ಕೂಡ ಕಮಾಲ್ ಮಾಡಿದರು. ಈ ಸೀಸನ್​ನ ಪ್ರತಿ ಪಂದ್ಯದಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿದೆ, ಅದು ಹೈದರಾಬಾದ್ ವಿರುದ್ಧವೂ ಮುಂದುವರೆಯಿತು. ಸುದರ್ಶನ್ ಕೇವಲ 23 ಎಸೆತಗಳಲ್ಲಿ 9 ಬೌಂಡರಿಗಳಿಂದ 48 ರನ್ ಚಚ್ಚಿದರು.

ಇದರೊಂದಿಗೆ, ಅವರು ಈ ಋತುವಿನಲ್ಲಿ ಸುದರ್ಶನ್ ಆಡಿದ 10 ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ ಐಪಿಎಲ್‌ನ 18 ನೇ ಋತುವಿನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟರ್ ಆಗಿದ್ದಾರೆ. ಅದೇ ಸಮಯದಲ್ಲಿ, ಸಾಯಿ ಹೈದರಾಬಾದ್ ವಿರುದ್ಧ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಸಾಯಿ ಸುದರ್ಶನ್ ಹೆಸರಿನಲ್ಲಿ ದೊಡ್ಡ ದಾಖಲೆ ನಿರ್ಮಾಣ:

23 ವರ್ಷದ ಸಾಯಿ ಸುದರ್ಶನ್ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ದೊಡ್ಡ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸುದರ್ಶನ್ ಪಾತ್ರರಾದರು. ಇವರು 54 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಸಚಿನ್ 59 ಇನ್ನಿಂಗ್ಸ್‌ಗಳಲ್ಲಿ ಟಿ20ಯಲ್ಲಿ 2000 ರನ್ ಪೂರೈಸಿದ್ದಾರೆ. 2011 ರಲ್ಲಿ ಈ ಸಾಧನೆ ಮಾಡಿದ್ದರು. ಸುದರ್ಶನ್ ಟಿ20 ಮಾದರಿಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುದರ್ಶನ್ 1000 ರನ್‌ಗಳಿಂದ 2000 ರನ್‌ಗಳನ್ನು ತಲುಪಲು ಕೇವಲ 22 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.

ಇದನ್ನೂ ಓದಿ
ಇಂದು ಆರ್​ಸಿಬಿ ಗೆದ್ದರೆ ಏನಾಗಲಿದೆ?: ಪಾಯಿಂಟ್ಸ್ ಟೇಬಲ್ ಅಲ್ಲೋಲ-ಕಲ್ಲೋಲ
ಹೈದರಾಬಾದ್‌ ವಿರುದ್ಧ 38 ರನ್​ಗಳಿಂದ ಗೆದ್ದ ಗುಜರಾತ್
ಆರ್​ಸಿಬಿ ಪ್ಲೇಆಫ್ ಹಾದಿಗೆ ಅಡ್ಡಿಯಾಗ್ತಾನಾ ವರುಣ?
ಆರ್​ಸಿಬಿ- ಸಿಎಸ್​ಕೆ ನಡುವೆ ಈ ಸೀಸನ್​ನ ಕೊನೆಯ ಮುಖಾಮುಖಿ

RCB vs CSK, IPL 2025: ಇಂದು ಆರ್​ಸಿಬಿ ಗೆದ್ದರೆ ಏನಾಗಲಿದೆ?: ಪಾಯಿಂಟ್ಸ್ ಟೇಬಲ್ ಅಲ್ಲೋಲ-ಕಲ್ಲೋಲ

53 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮಾತ್ರ ಅವರಿಗಿಂತ ಮುಂದಿದ್ದಾರೆ. ಸಾಯಿ ಭಾರತೀಯ ತಂಡಕ್ಕೂ ಪಾದಾರ್ಪಣೆ ಮಾಡಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅವರು ಟೀಮ್ ಇಂಡಿಯಾ ಪರ 3 ಏಕದಿನ ಮತ್ತು 1 ಟಿ20 ಪಂದ್ಯವನ್ನೂ ಆಡಿದ್ದಾರೆ. ಕಳೆದ ಋತುವಿನಲ್ಲಿ ಸುದರ್ಶನ್ ಐಪಿಎಲ್ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು, ಕೇವಲ 25 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು, ಸಚಿನ್ ಮತ್ತು ರುತುರಾಜ್ ಗಾಯಕ್ವಾಡ್ ಜಂಟಿಯಾಗಿ ಈ ದಾಖಲೆಯನ್ನು ಹೊಂದಿದ್ದರು.

ಟಿ20ಯಲ್ಲಿ ವೇಗವಾಗಿ 2000 ರನ್ ಪೂರೈಸಿದ ಆಟಗಾರ

  • 53 – ಶಾನ್ ಮಾರ್ಷ್
  • 54 – ಸಾಯಿ ಸುದರ್ಶನ್*
  • 58 – ಬ್ರಾಡ್ ಹಾಡ್ಜ್ / ಮಾರ್ಕಸ್ ಟ್ರೆಸ್ಕೋಥಿಕ್ / ಮೊಹಮ್ಮದ್ ವಾಸಿಮ್
  • 59 – ಸಚಿನ್ ತೆಂಡೂಲ್ಕರ್ / ಡಾರ್ಸಿ ಶಾರ್ಟ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ