ಬೇಡ ಕಣೋ… ಶುಭ್ಮನ್ ಗಿಲ್ ಜಗಳ ಬಿಡಿಸಲು ಮುಂದಾದ ಅಭಿಷೇಕ್ ಶರ್ಮಾ
IPL 2025 GT vs SRH: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡ 38 ರನ್ಗಳ ಜಯ ಸಾಧಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 51ನೇ ಪಂದ್ಯದಲ್ಲಿ ಅಂಪೈರ್ ಜೊತೆ ಗುಜರಾತ್ ಟೈಟಾನ್ಸ್ (GT) ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಮಾತಿನ ಚಕಮಕಿ ನಡೆಸಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 224 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಬಿರುಸಿನ ಇನಿಂಗ್ಸ್ನೊಂದಿಗೆ ಎದುರಾಳಿ ಬೌಲರ್ಗಳನ್ನು ದಂಡಿಸುತ್ತಿದ್ದ ಅಭಿಷೇಕ್ ವಿಕೆಟ್ ಗುಜರಾತ್ ಟೈಟಾನ್ಸ್ ಪಾಲಿಗೆ ಅನಿವಾರ್ಯವಾಗಿತ್ತು. ಅದರಂತೆ ಪ್ರಸಿದ್ಧ್ ಕೃಷ್ಣ ಎಸೆದ 14ನೇ ಓವರ್ನಲ್ಲಿ ಚೆಂಡು ಅಭಿಷೇಕ್ ಶರ್ಮಾ ಅವರ ಶೂಸ್ಗೆ ಬಡಿಯಿತು.
ಈ ವೇಳೆ ಗುಜರಾತ್ ಟೈಟಾನ್ಸ್ ಆಟಗಾರರು ಎಲ್ಬಿಡಬ್ಲ್ಯೂಗಾಗಿ ಬಲವಾದ ಮನವಿ ಮಾಡಿದ್ದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಹೀಗಾಗಿ ಶುಭ್ಮನ್ ಗಿಲ್ ರಿವ್ಯೂ ತೆಗೆದುಕೊಂಡರು. ಮೂರನೇ ಅಂಪೈರ್ ಪರಿಶೀಲಿಸಿ ನಾಟೌಟ್ ಎಂದು ತೀರ್ಪು ನೀಡಿದ್ದರು. ಈ ವೇಳೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಅಂಪೈರ್ ಜೊತೆ ವಾದಕ್ಕಿಳಿದರು.
ಬಾಲ್ ಟ್ರ್ಯಾಕಿಂಗ್ ಪರಿಶೀಲನೆ ಹಾಗೂ ಫೀಲ್ಡ್ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡಿದ್ದ ಶುಭ್ಮನ್ ಗಿಲ್ ಮಾತಿನ ಚಕಮಕಿಗೆ ಇಳಿದರು. ಕುತೂಹಲಕಾರಿ ವಿಷಯ ಎಂದರೆ, ಗೆಳೆಯ ಅಂಪೈರ್ ಜೊತೆ ವಾಕ್ಸಮರಕ್ಕೆ ಇಳಿಯುತ್ತಿದ್ದಂತೆ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಗಿಲ್ ಅವರನ್ನು ಸಮಾಧಾನಪಡಿಸಲು ಮುಂದಾದರು.
ಇದಾಗ್ಯೂ ಸಿಟ್ಟಿನಿಂದಲೇ ವಾದ ಮುಂದುವರೆಸಿದ್ದ ಶುಭ್ಮನ್ ಗಿಲ್ ಅವರ ಹಿಂದೆಯೇ ಸಾಗುತ್ತಿದ್ದ ಅಭಿಷೇಕ್ ಶರ್ಮಾ ಬೇಡ, ಬಿಡು ಕಣೋ ಎಂಬಾರ್ಥದಲ್ಲಿ ಗೆಳೆಯನನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇಬ್ಬರ ಗೆಳೆತನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಶುಭ್ಮನ್ ಗಿಲ್ – ಅಭಿಷೇಕ್ ಶರ್ಮಾ ವಿಡಿಯೋ:
Chaos at the centre! 😳#ShubmanGill and #AbhishekSharma in discussion with the umpires! A review going #SRH’s way has sparked some serious drama! 🧐
Watch the LIVE action ➡ https://t.co/RucOdyBo4H#IPLonJioStar 👉 #GTvSRH | LIVE NOW on Star Sports 1, Star Sports 1 Hindi, &… pic.twitter.com/KX68eec2ZB
— Star Sports (@StarSportsIndia) May 2, 2025
ಗೆದ್ದು ಬೀಗಿದ ಗುಜರಾತ್ ಟೈಟಾನ್ಸ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭ್ಮನ್ ಗಿಲ್ 38 ಎಸೆತಗಳಲ್ಲಿ 76 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಈ ಕಠಿಣ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 41 ಎಸೆತಗಳಲ್ಲಿ 74 ರನ್ ಬಾರಿಸಿದ್ದರು. ಇದಾಗ್ಯೂ ಎಸ್ಆರ್ಹೆಚ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 38 ರನ್ಗಳ ಜಯ ಸಾಧಿಸಿದೆ.