MS Dhoni: ತನ್ನ ನೆಚ್ಚಿನ ಹನಿಯೊಂದಿಗೆ ಟೀ ಸವಿದ ಧೋನಿ; ಮುದ್ದಿನ ಫೋಟೋ ಹಂಚಿಕೊಂಡ ಪತ್ನಿ ಸಾಕ್ಷಿ

| Updated By: ಪೃಥ್ವಿಶಂಕರ

Updated on: Nov 18, 2021 | 6:03 PM

MS Dhoni: ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿ ಹಂಚಿಕೊಂಡಿರುವ ಚಿತ್ರದಲ್ಲಿ, ಧೋನಿ ಗಿಳಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಮುದ್ದಿನ ಗಿಳಿ ಧೋನಿ ಭುಜದ ಮೇಲೆ ಕುಳಿತಿದೆ ಜೊತೆಗೆ ಮಹಿ ಕೈಯಲ್ಲಿ ಟೀ ಗ್ಲಾಸ್ ಇದೆ.

MS Dhoni: ತನ್ನ ನೆಚ್ಚಿನ ಹನಿಯೊಂದಿಗೆ ಟೀ ಸವಿದ ಧೋನಿ; ಮುದ್ದಿನ ಫೋಟೋ ಹಂಚಿಕೊಂಡ ಪತ್ನಿ ಸಾಕ್ಷಿ
ಕುಟುಂಬದೊಂದಿಗೆ ಧೋನಿ
Follow us on

ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಟೀಂ ಇಂಡಿಯಾ ಈಗ ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸುವಲ್ಲಿ ನಿರತವಾಗಿದೆ. ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದೇ ಸಮಯದಲ್ಲಿ, ವಿಶ್ವಕಪ್‌ನಲ್ಲಿ ತಂಡದ ಮೆಂಟರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ತವರು ರಾಂಚಿಗೆ ಮರಳಿದ್ದಾರೆ. ಈ ದಿನಗಳಲ್ಲಿ, ಅವರು ಮನೆಯಲ್ಲಿ ತಮ್ಮ ‘ಹನಿ’ ಜೊತೆ ಸಮಯ ಕಳೆಯುತ್ತಿದ್ದಾರೆ. ಅದರ ಒಂದು ಫೋಟೋವನ್ನು ಮಾಹಿ ಪತ್ನಿ ಸಾಕ್ಷಿ ಧೋನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವಿರಳವಾಗಿ ಸಕ್ರಿಯರಾಗಿದ್ದಾರೆ. ಆದರೆ ಅವರ ಪತ್ನಿ ಸಾಕ್ಷಿ ಅವರು ಅಭಿಮಾನಿಗಳಿಗೆ ಮಾಹಿ ಕೊರತೆಯನ್ನು ಅನುಭವಿಸಲು ಬಿಡುವುದಿಲ್ಲ ಮತ್ತು ಆಗಾಗ್ಗೆ ಅವರಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ಇದೇ ರೀತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಧೋನಿ ಚಹಾ ಸವಿಯುತ್ತಿದ್ದು ಅವರೊಂದಿಗೆ ಧೋನಿಯ ಹೊಸ ಅತಿಥಿ ಕೂಡ ಇದೆ.

ಹನಿಯೊಂದಿಗೆ ಮಹಿ
ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿ ಹಂಚಿಕೊಂಡಿರುವ ಚಿತ್ರದಲ್ಲಿ, ಧೋನಿ ಗಿಳಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಮುದ್ದಿನ ಗಿಳಿ ಧೋನಿ ಭುಜದ ಮೇಲೆ ಕುಳಿತಿದೆ ಜೊತೆಗೆ ಮಹಿ ಕೈಯಲ್ಲಿ ಟೀ ಗ್ಲಾಸ್ ಇದೆ. ಧೋನಿ ಈಗಾಗಲೇ ತಮ್ಮ ಏಳು ನಾಯಿಗಳು ಸೇರಿದಂತೆ ಹಲವಾರು ಸಾಕುಪ್ರಾಣಿಗಳನ್ನು ಹೊಂದಿದ್ದಾರೆ. ನಾಯಿಗಳನ್ನು ಹೊರತುಪಡಿಸಿ, ಕುದುರೆಗಳು ಅನೇಕ ಪಕ್ಷಿಗಳು ಸಾಕುಪ್ರಾಣಿಗಳು ಅವರೊಂದಿಗೆ ವಾಸಿಸುತ್ತಿವೆ. ಧೋನಿ ತಮ್ಮ ನಾಯಿಗಳೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾರೆ ಮತ್ತು ಸ್ವತಃ ತರಬೇತಿ ನೀಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿ ನಾಯಿಗಳಿಗೆ ತರಬೇತಿ ನೀಡುವ ವೀಡಿಯೊಗಳನ್ನು ಸಹ ನೀವು ನೋಡಬಹುದು.

ಧೋನಿಯ ಜನಪ್ರಿಯತೆ ಕಡಿಮೆಯಾಗಿಲ್ಲ
ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಆದಾಗ್ಯೂ, ಅವರು ಕೆಲವು ಕಾರಣಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವನ ನೋಟದ ಬಗ್ಗೆ ಮತ್ತು ಕೆಲವೊಮ್ಮೆ ಅವರ ಬೈಕಿನ ಬಗ್ಗೆ. ಅಭಿಮಾನಿಗಳು ಈಗಲೂ ಮಹಿಯನ್ನು ಅಷ್ಟೇ ಪ್ರೀತಿಸುತ್ತಾರೆ. ಈ ವರ್ಷ ಐಪಿಎಲ್‌ನಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದಿತ್ತು. ಇದಾದ ನಂತರ, ಧೋನಿ ಟೀಮ್ ಇಂಡಿಯಾದೊಂದಿಗೆ ಟಿ20 ವಿಶ್ವಕಪ್‌ಗೆ ಮೆಂಟರ್ ಆಗಿ ಸೇರಿಕೊಂಡರು.