5,6,4,8,6.. 32 ರನ್..! 5 ಎಸೆತಗಳಲ್ಲಿ ಪಂದ್ಯದ ದಿಕ್ಕು ಬದಲಿಸಿದ ಇಂಗ್ಲೆಂಡ್ ವೇಗಿ
The Hundred: ಓವಲ್ ಇನ್ವಿನ್ಸಿಬಲ್ಸ್ ತಂಡವು ದಿ ಹಂಡ್ರೆಡ್ ಲೀಗ್‌ನ 23ನೇ ಪಂದ್ಯದಲ್ಲಿ ಟ್ರೆಟ್ ರಾಕೆಟ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು. ಟ್ರೆಟ್ ರಾಕೆಟ್ಸ್‌ನ ಸ್ಯಾಮ್ ಕುಕ್ 5 ಎಸೆತಗಳಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟು ತಂಡದ ಸೋಲಿಗೆ ಕಾರಣರಾದರು. ಇದು ದಿ ಹಂಡ್ರೆಡ್ ಲೀಗ್‌ನ ಇತಿಹಾಸದಲ್ಲೇ ಅತಿ ದುಬಾರಿ ಓವರ್ ಆಗಿದೆ. ಓವಲ್ ಇನ್ವಿನ್ಸಿಬಲ್ಸ್ ಗೆಲುವಿಗೆ ಸನಿಹದಲ್ಲಿದ್ದರೂ, ಕುಕ್ ಅವರ ಕಳಪೆ ಬೌಲಿಂಗ್ ಟ್ರೆಟ್ ರಾಕೆಟ್ಸ್‌ಗೆ ಸೋಲು ತಂದಿತು.

ದಿ ಹಂಡ್ರೆಡ್ (The Hundred) ಲೀಗ್‌ನ 23 ನೇ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಹಾಗೂ ಟ್ರೆಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಓವಲ್ ಇನ್ವಿನ್ಸಿಬಲ್ಸ್ ತಂಡ 6 ವಿಕೆಟ್ಗಳಿಂದ ಗೆದ್ದುಕೊಂಡಿತು. ಒಂದು ಹಂತದಲ್ಲಿ ಗೆಲುವಿನ ಸನಿಹದಲ್ಲಿದ್ದ ಟ್ರೆಟ್ ರಾಕೆಟ್ಸ್ ತಂಡ, ವೇಗಿ ಸ್ಯಾಮ್ ಕುಕ್ ಮಾಡಿದ ಅದೊಂದು ದುಬಾರಿ ಓವರ್ನಿಂದಾಗಿ ಸೋಲಿಗೆ ಶರಣಾಗಬೇಕಾಯಿತು. ವಾಸ್ತವವಾಗಿ ಈ ಪಂದ್ಯದಲ್ಲಿ ಸ್ಯಾಮ್ ಕುಕ್ ಕೇವಲ 5 ಎಸೆತಗಳಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟು ತಂಡದ ಸೋಲಿಗೆ ಕಾರಣರಾದರು.
ಇದು ಮಾತ್ರವಲ್ಲದೆ ಸ್ಯಾಮ್ ಕುಕ್, ಇಷ್ಟೊಂದು ರನ್ ಬಿಟ್ಟುಕೊಡುವ ಮೂಲಕ ದಿ ಹಂಡ್ರೆಡ್ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಅನಗತ್ಯ ದಾಖಲೆಯನ್ನು ನಿರ್ಮಿಸಿದರು. ಸ್ಯಾಮ್ ಕುಕ್ ಬೌಲಿಂಗ್ ಮಾಡಲು ಬಂದಾಗ, ನೀತಾ ಅಂಬಾನಿ ಒಡೆತನದ ಓವಲ್ ಇನ್ವಿನ್ಸಿಬಲ್ಸ್ ತಂಡಕ್ಕೆ ಗೆಲ್ಲಲು 35 ಎಸೆತಗಳಲ್ಲಿ 83 ರನ್‌ಗಳು ಬೇಕಾಗಿದ್ದವು. ಆದರೆ ಸ್ಯಾಮ್ ಕುಕ್ ಕೇವಲ 5 ಎಸೆತಗಳಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟು ತಮ್ಮ ಟ್ರೆಟ್ ರಾಕೆಟ್ಸ್ ತಂಡವನ್ನು ಗೆಲುವಿನಿಂದ ದೂರ ಸರಿಸಿದರು.
View this post on Instagram
ಸ್ಯಾಮ್ ಕುಕ್ ಕಳಪೆ ಬೌಲಿಂಗ್
171 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಓವಲ್ ಇನ್ವಿನ್ಸಿಬಲ್ಸ್ ತಂಡಕ್ಕೆ ಒಂದು ಹಂತದಲ್ಲಿ ಗೆಲ್ಲಲು 35 ಎಸೆತಗಳಲ್ಲಿ 83 ರನ್‌ಗಳ ಅಗತ್ಯವಿತ್ತು. ಇದರ ನಂತರ, ಟ್ರೆಟ್ ರಾಕೆಟ್ಸ್‌ನ ವೇಗಿ ಸ್ಯಾಮ್ ಕುಕ್ ಬೌಲಿಂಗ್ ಮಾಡಲು ಬಂದು ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಮೊದಲ ಎಸೆತದಲ್ಲಿ ಅವರು ವೈಡ್ ಜೊತೆಗೆ ಐದು ರನ್ ಬಿಟ್ಟುಕೊಟ್ಟರು. ಎರಡನೇ ಎಸೆತದಲ್ಲಿ ಮತ್ತೆ ವೈಡ್ ಎಸೆದರು. ನಂತರ ಕುಕ್ ಎಸೆದ ಮೂರನೇ ಎಸೆತವನ್ನು ಸ್ಯಾಮ್ ಕರನ್ ಸಿಕ್ಸರ್ ಬಾರಿಸಿದರು. ಎರಡನೇ ಎಸೆತ ಕೂಡ ಮತ್ತೆ ಬೌಂಡರಿ ದಾಟಿತು.
ಇದಾದ ನಂತರ ಕುಕ್ ನೋ ಬಾಲ್ ಎಸೆದರು. ಇದರ ಮೇಲೆ ಸ್ಯಾಮ್ ಕರನ್ ಸಿಕ್ಸರ್ ಬಾರಿಸಿ 8 ರನ್ (ಹಂಡ್ರೆಡ್ ಲೀಗ್ನಲ್ಲಿ ನೋ ಬಾಲ್ಗೆ 2 ರನ್) ಕಲೆಹಾಕಿದರು. ಇದಾದ ನಂತರ ಸ್ಯಾಮ್ ಕರನ್ ಮುಂದಿನ ಎರಡು ಎಸೆತಗಳಲ್ಲಿ ಎಂಟು ರನ್ ಕಲೆಹಾಕಿದರು. ಈ ರೀತಿಯಾಗಿ ಸ್ಯಾಮ್ ಕುಕ್ 5 ಎಸೆತಗಳಲ್ಲಿ 32 ರನ್ ಬಿಟ್ಟುಕೊಟ್ಟರು.
6,6,6,6,6,6,6.. ದಿ ಹಂಡ್ರೆಡ್ ಲೀಗ್ನಲ್ಲಿ ಅಬ್ಬರಿಸಿದ ಮಾಜಿ ಆರ್ಸಿಬಿ ಬೌಲರ್..!
ಟ್ರೆಟ್ ರಾಕೆಟ್ಸ್‌ಗೆ ಸೋಲು
ಸ್ಯಾಮ್ ಕುಕ್ ಅವರ ಈ ಕಳಪೆ ಬೌಲಿಂಗ್ ನಿಂದಾಗಿ , ಟ್ರೆಟ್ ರಾಕೆಟ್ಸ್ ತಂಡವು ಪಂದ್ಯವನ್ನು 6 ವಿಕೆಟ್ಗಳಿಂದ ಸೋತಿತು. ಸ್ಯಾಮ್ ಕುಕ್ ಮೊದಲ 10 ಎಸೆತಗಳಲ್ಲಿ ಕೇವಲ 6 ರನ್‌ಗಳನ್ನು ನೀಡಿದ್ದರು, ಆದರೆ ನಂತರ ಅವರು 5 ಎಸೆತಗಳಲ್ಲಿ 32 ರನ್ ಗಳನ್ನು ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟ್ರೆಟ್ ರಾಕೆಟ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 171 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಓವಲ್ ಇನ್ವಿನ್ಸಿಬಲ್ಸ್ ತಂಡವು 11 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Fri, 22 August 25
