ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ರ ತನ್ನ ಏಳನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ದಾಖಲೆಯ 302 ರನ್‌ಗಳ ಅಮೋಘ ಗೆಲುವು ಕಂಡಿತು. ಭಾರತ ಬರೋಬ್ಬರಿ 357 ರನ್ ಸಿಡಿಸಿತು. ಆದರೆ, ಶತಕ ಮಾತ್ರ ಯಾರ ಬ್ಯಾಟ್ನಿಂದಲೂ ಬರಲಿಲ್ಲ. ಮೂವರು ಆಟಗಾರರು ಶತಕದ ಅಂಚಿನಲ್ಲಿ ಎಡವಿದರು. ಅದರಲ್ಲೂ ಶುಭ್ಮನ್ ಗಿಲ್ (Shubman Gill) 92 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. 8 ರನ್‌ಗಳಿಂದ ಶತಕ ವಂಚಿತರಾದ ಗಿಲ್, ಔಟಾದ ಸಂದರ್ಭ ಸ್ಟ್ಯಾಂಡ್ನಲ್ಲಿದ್ದ ಸಾರಾ ತೆಂಡೂಲ್ಕರ್ ಕೊಟ್ಟ ರಿಯಾಕ್ಷನ್ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ಇನ್ನಿಂಗ್ಸ್‌ನ ಆರಂಭದಲ್ಲಿ ಔಟಾದ ನಂತರ, ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 189 ರನ್‌ಗಳ ಜೊತೆಯಾಟ ಆಡಿದರು. ಆದಾಗ್ಯೂ, ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಅವಕಾಶ ಹೊಂದಿದ್ದ ಗಿಲ್ ಕೇವಲ 8 ರನ್‌ಗಳ ಅಂತರದಲ್ಲಿ ಔಟಾದರು. ಪಾಸಿಟಿವ್ ಆಗಿ ಕಂಡಿದ್ದ ಗಿಲ್ ಅನಗತ್ಯ ಶಾಟ್ ಹೊಡೆಯಲು ಹೋಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ದಿಲ್ಶನ್ ಮಧುಶಂಕ ಅವರ ಬೌನ್ಸರ್ ಅನ್ನು ಎದುರಿಸಲು ಹೋಗಿ ಬ್ಯಾಟ್‌ನ ಅಂಚಿಗೆ ಚೆಂಡು ಸಿಕ್ಕಿ ನಿರ್ಗಮಿಸಿದರು.
Virat Kohli: ಶತಕ ಜಸ್ಟ್ ಮಿಸ್..ಆದ್ರೂ 6 ದಾಖಲೆ ಬರೆದ ಕಿಂಗ್ ಕೊಹ್ಲಿ
92 ರನ್ ಗಳಿಸಿದ ನಂತರ, ಗಿಲ್ ಹತಾಶೆಯಿಂದ ನೆಲಕ್ಕೆ ತನ್ನ ಬ್ಯಾಟ್ ಅನ್ನು ಗುದ್ದಿದರು. ಆಗ ಕ್ಯಾಮೆರಾಮ್ಯಾನ್ ಸಾರಾ ತೆಂಡೂಲ್ಕರ್ ಅವರನ್ನು ತೋರಿಸಿದ್ದಾರೆ. ಗಿಲ್ ಅವರ ಗರ್ಲ್ ಫ್ರೆಂಡ್ ಎನ್ನಲಾಗುತ್ತಿರುವ ಸಾರಾ ಅವರು ಶುಭ್ಮನ್ ಔಟಾದಾಗ ತುಂಬಾ ನಿರಾಶೆಗೊಂಡರು. ಬೇಸರದಿಂದ ತಲೆ ಕೆಳಗೆ ಹಾಕಿ ತಮ್ಮ ಮುಖವನ್ನು ಎರಡು ಕೈಗಳಿಂದ ಮರೆಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Sara Tendulkar. 💔😭 #ShubmanGill #INDvsSL pic.twitter.com/xjcfcjIRN3
— Atishay Jain (@AtishayyJain96) November 2, 2023
ಬಳಿಕ ಶುಭ್ಮಾನ್ ಗಿಲ್ ಅವರ ಅದ್ಭುತ ಇನ್ನಿಂಗ್ಸ್‌ಗಾಗಿ ಇಡೀ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದರು. ಅತ್ತ ಸಾರಾ ತೆಂಡೂಲ್ಕರ್ ಕೂಡ ಚಪ್ಪಾಳೆ ತಟ್ಟಿದರು. ಗಿಲ್ ಶ್ರೀಲಂಕಾ ವಿರುದ್ಧ 92 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 92 ರನ್ ಗಳಿಸಿದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜೊತೆ 189 ರನ್ ಜೊತೆಯಾಟ ನಡೆಸಿದರು. ಇದು ಇದುವರೆಗಿನ ಏಕದಿನ ವಿಶ್ವಕಪ್‌ನಲ್ಲಿ ಮನ್ ಅವರ ಗರಿಷ್ಠ ಸ್ಕೋರ್ ಆಗಿದೆ.
ಗಿಲ್ ಅವರಿಗೆ ವಿಶ್ವಕಪ್ ಆರಂಭದ ವೇಳೆ ಡೆಂಗ್ಯೂ ಕಾಣಿಸಿಕೊಂಡಿದ್ದರಿಂದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಮರಳಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ತಮ್ಮ 49ನೇ ಏಕದಿನ ಶತಕವನ್ನು ಕೇವಲ 12 ರನ್‌ಗಳಿಂದ ಕಳೆದುಕೊಂಡರು. ಈ ಮೂಲಕ ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆ ಸರಿಗಟ್ಟಲು ವಿಫಲರಾದರು. ಅತ್ತ ಶ್ರೇಯಸ್ ಅಯ್ಯರ್ ಕೂಡ 56 ಎಸೆತಗಳಲ್ಲಿ 82 ರನ್ಗೆ ಔಟಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ