Duleep Trophy: ಸತತ ಎರಡನೇ ಫೈನಲ್​ನಲ್ಲಿ ಶತಕ ಸಿಡಿಸಿದ ಸರ್ಫರಾಜ್ ಖಾನ್..! ಗೆಲುವಿನ ಸನಿಹದಲ್ಲಿ ಪಶ್ಚಿಮ ವಲಯ

Duleep Trophy: ಪಶ್ಚಿಮ ವಲಯ ಎರಡನೇ ಇನಿಂಗ್ಸ್​ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 585 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಸರ್ಫರಾಜ್ ಔಟಾಗದೆ 127 ರನ್ ಗಳಿಸಿದರು.

Duleep Trophy: ಸತತ ಎರಡನೇ ಫೈನಲ್​ನಲ್ಲಿ ಶತಕ ಸಿಡಿಸಿದ ಸರ್ಫರಾಜ್ ಖಾನ್..! ಗೆಲುವಿನ ಸನಿಹದಲ್ಲಿ ಪಶ್ಚಿಮ ವಲಯ
Sarfaraz Khan
Follow us
TV9 Web
| Updated By: ಪೃಥ್ವಿಶಂಕರ

Updated on:Sep 24, 2022 | 7:42 PM

ದೇಶೀ ಟೂರ್ನಿಗಳಲ್ಲಿ ಅಬ್ಬರಿಸುತ್ತಿರುವ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ (Sarfaraz Khan) ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ದುಲೀಪ್ ಟ್ರೋಫಿಯ (Duleep Trophy) ಫೈನಲ್‌ನಲ್ಲಿ ಶತಕ ಸಿಡಿಸಿದ್ದು, ಈ ಶತಕದ ಆಧಾರದ ಮೇಲೆ ಪಶ್ಚಿಮ ವಲಯ ತಂಡ ಬೃಹತ್ ಟಾರ್ಗೆಟ್ ನೀಡಿದೆ. ಇದರಿಂದಾಗಿ ದಕ್ಷಿಣ ವಲಯ ತಂಡದ ವಿರುದ್ಧ ಪಶ್ಚಿಮ ವಲಯ ತಂಡದ ಗೆಲುವು ಬಹುತೇಕ ಖಚಿತವಾಗಿದೆ. ಪಂದ್ಯದ ನಾಲ್ಕನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ 529 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ವಲಯ ಆರು ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದೆ.

ಪಶ್ಚಿಮ ವಲಯ ಎರಡನೇ ಇನಿಂಗ್ಸ್​ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 585 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಸರ್ಫರಾಜ್ ಔಟಾಗದೆ 127 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ, ಈ ಯುವ ಬ್ಯಾಟ್ಸ್‌ಮನ್ 178 ಎಸೆತಗಳನ್ನು ಎದುರಿಸಿ, 11 ಬೌಂಡರಿಗಳ ಜೊತೆಗೆ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಜೊತೆಗೆ ಹೆಟ್ ಪಟೇಲ್ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್‌ನಲ್ಲಿ 61 ಎಸೆತಗಳನ್ನು ಎದುರಿಸಿದ ಪಟೇಲ್, ಏಳು ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು. ಇದಕ್ಕೂ ಮುನ್ನ ಮುಂಬೈ ಪರ ರಣಜಿ ಟ್ರೋಫಿ ಫೈನಲ್‌ ಆಡಿದ್ದ ಸರ್ಫರಾಜ್, ಮಧ್ಯಪ್ರದೇಶ ವಿರುದ್ಧ ಶತಕ ಬಾರಿಸಿದ್ದರು, ಆದರೆ ಈ ಪಂದ್ಯದಲ್ಲಿ ಮುಂಬೈ ಸೋಲನುಭವಿಸಿತ್ತು. ಆದರೆ ದುಲೀಪ್ ಟ್ರೋಫಿಯ ಫೈನಲ್​ನಲ್ಲಿ ಶತಕ ಬಾರಿಸಿರುವ ಸರ್ಫರಾಜ್, ತಂಡದ ಗೆಲುವನ್ನು ಬಹುತೇಕ ಖಚಿತಪಡಿಸಿದ್ದಾರೆ.

ನಾಲ್ಕನೇ ದಿನದಾಟ ಆರಂಭಿಸಿದ ಪಶ್ಚಿಮ ವಲಯ ಮೂರು ವಿಕೆಟ್ ನಷ್ಟಕ್ಕೆ 376 ರನ್ ಗಳಿಸಿತ್ತು. 209 ರನ್​ಗಳಿಂದ ಯಶಸ್ವಿ ಬ್ಯಾಟಿಂಗ್ ಮುಂದುವರೆಸಿದರೆ, ಸರ್ಫರಾಜ್ ತಮ್ಮ ಇನ್ನಿಂಗ್ಸ್ ಅನ್ನು 30 ರನ್‌ಗಳಿಂದ ವಿಸ್ತರಿಸಿದರು. 265 ರನ್ ಗಳಿಸಿ ಔಟಾದ ಜೈಸ್ವಾಲ್, ತಮ್ಮ ಇನ್ನಿಂಗ್ಸ್‌ನಲ್ಲಿ 323 ಎಸೆತಗಳನ್ನು ಎದುರಿಸಿ 30 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಹೊಡೆದರು. ಆ ಬಳಿಕ ಪಶ್ಚಿಮ ವಲಯ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ, ಸರ್ಫರಾಜ್ ಅವರ ಶತಕ ಹಾಗೂ ಪಟೇಲ್ ಅವರ ಅರ್ಧಶತಕದೊಂದಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ದಕ್ಷಿಣ ವಲಯದ ಕಳಪೆ ಬ್ಯಾಟಿಂಗ್

ಪಶ್ಚಿಮ ವಲಯ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ವಲಯದ ಆರಂಭ ಉತ್ತಮವಾಗಿರಲಿಲ್ಲ. ಆಗಾಗ್ಗೆ ವಿಕೆಟ್‌ಗಳನ್ನು ಕೈಚೆಲ್ಲಿದ ತಂಡಕ್ಕೆ ರೋಹನ್ ಕುನುಮಲ್ ಆಸರೆಯಾದರು. ಆದರೆ ಶತಕ ಪೂರೈಸಲು ಸಾಧ್ಯವಾಗದೆ 93 ರನ್ ಗಳಿಸಿ ಔಟಾದರು. ರೋಹನ್ 100 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು. 14 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ರೂಪದಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಹನುಮ ವಿಹಾರಿ ಒಂದು ರನ್​ಗಳಿಗೆ ಸುಸ್ತಾದರು. ಬಾಬಾ ಇಂದರ್‌ಜಿತ್ ನಾಲ್ಕು ರನ್ ಗಳಿಸಿ ಔಟಾದರೆ, ಮನೀಶ್ ಪಾಂಡೆ 14 ರನ್​ಗಳ ಇನಿಂಗ್ಸ್ ಆಡಿದರು. ರಿಕಿ ಭುಯಿ 13 ರನ್ ದಾಟಲು ಸಾಧ್ಯವಾಗಲಿಲ್ಲ. ಸದ್ಯ ಆರ್ ಸಾಯಿ ಕಿಶೋರ್ ಹಾಗೂ ರವಿತೇಜ ಎಂಟು ರನ್ ಗಳಿಸಿ ಕ್ರಿಸ್​ನಲ್ಲಿದ್ದಾರೆ. ಪಶ್ಚಿಮ ವಲಯ ಪರ ಜಯದೇವ್ ಉನದ್ಕತ್, ಅತಿತ್ ಸೇಠ್, ಶಮ್ಸ್ ಮುಲಾನಿ ತಲಾ ಎರಡು ವಿಕೆಟ್ ಪಡೆದರು.

Published On - 7:42 pm, Sat, 24 September 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?