ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ (Sarfaraz Khan) ಭಾರತಕ್ಕಾಗಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಬಲಗೈ ಬ್ಯಾಟರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಇಂಗ್ಲೆಂಡ್ ಬೌಲರ್‌ಗಳ ಬೆಂಡೆತ್ತಿದರು. ಕೆಲ ದಾಖಲೆ ಕೂಡ ನಿರ್ಮಾಣ ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯುತ್ತಮ ಸರಾಸರಿಯಲ್ಲಿ ರನ್ ಕಲೆಹಾಕಿ ಆ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ ವಿಶೇಷ ಸಾಧಕರ ಪಟ್ಟಿಗೆ ಸರ್ಫರಾಜ್ ಸೇರ್ಪಡೆಯಾದರು. ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಕೂಡ ಸಿಡಿಸಿದರು. ಈ ಸಂದರ್ಭ ಅವರ ಪತ್ನಿ ರೊಮಾನಾ ಜಹೂರ್ ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗುತ್ತಿದೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ವೇಗವಾಗಿ ಅರ್ಧ ಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ದಾಖಲೆ ಸರ್ಫರಾಜ್ ನಿರ್ಮಿಸಿದ್ದಾರೆ. ಈ ಮೈಲಿಗಲ್ಲನ್ನು ತಲುಪಿದ ನಂತರ, ಅವರು ತಮ್ಮ ತಂದೆ ಮತ್ತು ಹೆಂಡತಿ ಕುಳಿತಿದ್ದ ಸ್ಟ್ಯಾಂಡ್‌ನ ಕಡೆಗೆ ತಮ್ಮ ಬ್ಯಾಟ್ ಅನ್ನು ಎತ್ತಿ ತೋರಿಸಿದರು. ತನ್ನ ಪತಿ ಚೊಚ್ಚಲ ಟೆಸ್ಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದನ್ನು ನೋಡಿ, ರೋಮಾನಾ ಜಹೂರ್ ಪ್ರೇಕ್ಷಕ ಗ್ಯಾಲರಿಯಿಂದಲೇ ಸರ್ಫರಾಜ್‌ಗೆ ಫ್ಲೈಯಿಂಗ್ ಕಿಸ್ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?
— Nihari Korma (@NihariVsKorma) February 15, 2024
ಸರ್ಫರಾಜ್ ಖಾನ್ ಕೇವಲ 66 ಎಸೆತಗಳಲ್ಲಿ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 62 ರನ್ ಗಳಿಸಿದರು. ರವೀಂದ್ರ ಜಡೇಜಾ ಅವರ ತಪ್ಪಾದ ಕರೆಯಿಂದ ದುರದೃಷ್ಟವಶಾತ್ ನಾನ್ ಸ್ಟ್ರೈಕರ್ನಲ್ಲಿ ರನೌಟ್ ಆಗಬೇಕಾಯಿತು. ಈ ಮೂಲಕ 65 ವರ್ಷಗಳ ನಂತರ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಅರ್ಧಶತಕ ಗಳಿಸಿದ ನಂತರ ರನೌಟ್ ಆದ ಮೊದಲ ಭಾರತೀಯರಾದರು.
ಪಂದ್ಯ ನೋಡಲು ಬರಲ್ಲ ಎಂದಿದ್ದ ಸರ್ಫರಾಜ್ ತಂದೆ: ಬರುವಂತೆ ಮಾಡಿದ್ದು ಸೂರ್ಯಕುಮಾರ್
ಮೊದಲ ದಿನದ ಆರಂಭದಲ್ಲಿ ಭಾರತವು 33 ರನ್‌ಗಳಿಗೆ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು 200 ರನ್‌ಗಳ ಜೊತೆಯಾಟ ಸಹಾಯ ಮಾಡಿತು. ರೋಹಿತ್ 131 ರನ್ ಗಳಿಸಿ ಔಟಾದರೆ, ಜಡೇಜಾ ಕೂಡ ದಿನದ ಅಂತ್ಯದ ವೇಳೆಗೆ ಶತಕ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ