Matt Cross: ಇಡೀ ಭಾರತ ದೇಶದ ಬೆಂಬಲ ನಮಗಿದೆ: ನ್ಯೂಜಿಲೆಂಡ್ ಸೋಲಿಸಲು ಸ್ಕಾಟ್ಲೆಂಡ್ ಕೀಪರ್ ಮಾಡಿದ ರಣತಂತ್ರ ನೋಡಿ

| Updated By: Vinay Bhat

Updated on: Nov 04, 2021 | 11:50 AM

Whole India Is Behind You, New Zealand vs Scotland: ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವಾಗ ಬೌಲರ್​ಗಳಿಗೆ ಚಿಯರ್ ಮಾಡಲು ಸ್ಕಾಟ್ಲೆಂಡ್​ನ ವಿಕೆಟ್ ಕೀಪರ್ ಮ್ಯಾಥ್ಯೂ ಕ್ರಾಸ್ ‘ಇಡೀ ಭಾರತ ದೇಶವೇ ನಮ್ಮ ಬೆಂಬಲಕ್ಕಿದೆ’ ಎಂದು ಹೇಳಿದರು.

Matt Cross: ಇಡೀ ಭಾರತ ದೇಶದ ಬೆಂಬಲ ನಮಗಿದೆ: ನ್ಯೂಜಿಲೆಂಡ್ ಸೋಲಿಸಲು ಸ್ಕಾಟ್ಲೆಂಡ್ ಕೀಪರ್ ಮಾಡಿದ ರಣತಂತ್ರ ನೋಡಿ
Scotland wicketkeeper Matthew Cross
Follow us on

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಬುಧವಾರ ನಡೆದ ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ (New Zealand vs Scotland) ನಡುವಣ ಪಂದ್ಯ ಸಾಕಷ್ಟು ಕುತೂಹಲ ಕೆರಳಸಿತ್ತು. ಕೊನೆಯ ಹಂತದ ವರೆಗೂ ಗೆಲುವನ್ನು ಬಿಟ್ಟುಕೊಡದ ಸ್ಕಾಟ್ಲೆಂಡ್ ತಂಡ ಅಂತಿಮ ಕ್ಷಣದ ವರೆಗೂ ಹೋರಾಡಿ ಸೋಲು ಕಂಡಿತು. ನ್ಯೂಜಿಲೆಂಡ್ (New Zealand Cricket Team) 16 ರನ್​ಗಳ ಜಯ ಸಾಧಿಸಿತು. ಪಾಯಿಂಟ್ ಪಟ್ಟಿಯಲ್ಲಿ ಮೇಲೇರಲು ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿತ್ತು. ನ್ಯೂಜಿಲೆಂಡ್ ಗೆಲುವು ಕಂಡಾಗಿದೆ. ಎಲ್ಲದರು ಕಿವೀಸ್ ಸೋತರೆ ಅದು ಭಾರತಕ್ಕೆ ದೊಡ್ಡ ವರದಾನವಾಗುತ್ತಿತ್ತು. ಹೀಗಾಗಿ ಈ ಪಂದ್ಯದಲ್ಲಿ ಭಾರತೀಯರ ಬೆಂಬಲ ಸ್ಕಾಟ್ಲೆಂಡ್ ತಂಡಕ್ಕಿತ್ತು. ಇದನ್ನು ಸ್ಕಾಟ್ಲೆಂಡ್​ನ ವಿಕೆಟ್ ಕೀಪರ್ ಮ್ಯಾಥ್ಯೂ ಕ್ರಾಸ್ (Matt Cross) ಕೂಡ ಉಚ್ಚರಿಸಿದರು.

ಹೌದು, ಟಾಸ್ ಬ್ಯಾಟಿಂಗ್​ಗೆ ಇಳಿದ ನ್ಯೂಜಿಲೆಂಡ್ ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಮಾರ್ಟಿನ್ ಗುಪ್ಟಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಕಲೆಹಾಕಿತು. ಇದರ ನಡುವೆ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವಾಗ ಬೌಲರ್​ಗಳಿಗೆ ಚಿಯರ್ ಮಾಡಲು ಸ್ಕಾಟ್ಲೆಂಡ್​ನ ವಿಕೆಟ್ ಕೀಪರ್ ಮ್ಯಾಥ್ಯೂ ಕ್ರಾಸ್ ‘ಇಡೀ ಭಾರತ ದೇಶವೇ ನಮ್ಮ ಬೆಂಬಲಕ್ಕಿದೆ’ ಎಂದು ಹೇಳಿದರು. ಇವರು ಈರೀತಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಆರಂಭಿಕ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ (93ರನ್, 56 ಎಸೆತ, 6 ಬೌಂಡರಿ, 7 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆ ನೆರವಿನಿಂದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 16 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿತು. ಇದರೊಂದಿಗೆ ಸತತ ಎರಡನೇ ಗೆಲುವು ದಾಖಲಿಸಿದ ಕಿವೀಸ್ ತಂಡ ಸೆಮೀಸ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು.

ಮತ್ತೊಂದೆಡೆ, ಗೆಲುವಿಗಾಗಿ ಕೆಚ್ಚೆದೆಯ ಹೋರಾಟ ತೋರಿದ ಸ್ಕಾಟ್ಲೆಂಡ್ ನಿರ್ವಹಣೆ ಗಮನಸೆಳೆಯಿತು. ನ್ಯೂಜಿಲೆಂಡ್ ತಂಡ ಸತತ 2 ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಭಾರತದ ಸೆಮೀಸ್ ಹಾದಿ ಮತ್ತಷ್ಟು ಕಠಿಣಗೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಪ್ಟಿಲ್ ಅಬ್ಬರದ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 172 ರನ್ ಪೇರಿಸಿತು. ಬಳಿಕ ಮೈಕಲ್ ಲೀಸ್ಕ್ (42*ರನ್, 20 ಎಸೆತ, 3 ಬೌಂಡರಿ, 3 ಸಿಕ್ಸರ್) ಸೇರಿದಂತೆ ಇನ್ನಿತರ ಬ್ಯಾಟರ್‌ಗಳ ಪ್ರತಿಹೋರಾಟದ ನಡುವೆಯೂ ಸ್ಕಾಟ್ಲೆಂಡ್ ತಂಡ 5 ವಿಕೆಟ್‌ಗೆ 156 ರನ್‌ಗಳಿಸಲಷ್ಟೇ ಶಕ್ತವಾಯಿತು. ಟ್ರೆಂಟ್ ಬೌಲ್ಟ್ ಹಾಗೂ ಇಶ್ ಸೋಧಿ ತಲಾ 2 ವಿಕೆಟ್ ಕಬಳಿಸಿದರು.

Ravindra Jadeja: ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು: ನೀವೇ ಹೇಳಿ ಜಡೇಜಾ ಹಿಡಿದ ಕ್ಯಾಚ್ ಔಟ್ ಅಥವಾ ನಾಟೌಟ್?

Virat Kohli: ಅಫ್ಘಾನ್ ವಿರುದ್ಧದ ಜಯದ ಬಳಿಕ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ: ಏನಂದ್ರು ಗೊತ್ತೇ?

(Scotland wicket-keeper Matt Cross said Whole of India is behind you and won the hearts of Indian fans)