ಟಿ20 ವಿಶ್ವಕಪ್ಗೆ 13 ತಂಡಗಳು ಫೈನಲ್: 7 ಸ್ಥಾನಕ್ಕಾಗಿ 22 ತಂಡಗಳ ನಡುವೆ ಪೈಪೋಟಿ
T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಐಸಿಸಿ ಟಿ20 ವಿಶ್ವಕಪ್ ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಈಗಾಗಲೇ 13 ತಂಡಗಳು ಟಿ20 ವಿಶ್ವಕಪ್ 2026 ಕ್ಕೆ ಅರ್ಹತೆ ಪಡೆದುಕೊಂಡಿದ್ದು, ಇನ್ನುಳಿದ ತಂಡಗಳು ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಡಲಿದೆ.

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮುಂಬರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ಇಪ್ಪತ್ತು ತಂಡಗಳಲ್ಲಿ ಈಗಾಗಲೇ 13 ಟೀಮ್ಗಳು ಫೈನಲ್ ಆಗಿವೆ. ಇನ್ನುಳಿದ 7 ಸ್ಥಾನಗಳಿಗಾಗಿ 22 ತಂಡಗಳ ನಡುವೆ ಪೈಪೋಟಿ ಇದೆ. ಈ ಇಪ್ಪೆತ್ತರಡು ತಂಡಗಳಲ್ಲಿ ಏಳು ಟೀಮ್ಗಳು ಮಾತ್ರ ಮುಂಬರುವ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
ಟಿ20 ವಿಶ್ವಕಪ್ 2026 ಕ್ಕೆ ಅರ್ಹತೆ ಪಡೆದ ತಂಡಗಳು:
- ಭಾರತ
- ಶ್ರೀಲಂಕಾ
- ಪಾಕಿಸ್ತಾನ್
- ಬಾಂಗ್ಲಾದೇಶ್
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ವೆಸ್ಟ್ ಇಂಡೀಸ್
- ಐರ್ಲೆಂಡ್
- ನ್ಯೂಝಿಲೆಂಡ್
- ಅಫ್ಘಾನಿಸ್ತಾನ್
- ಸೌತ್ ಆಫ್ರಿಕಾ
- ಯುಎಸ್ಎ
- ಕೆನಡಾ
ಅರ್ಹತಾ ಸುತ್ತಿನಲ್ಲಿರುವ ತಂಡಗಳು:
- ಆಫ್ರಿಕಾ ಪ್ರಾದೇಶಿಕ
- ಬೋಟ್ಸ್ವಾನ
- ಕೀನ್ಯಾ
- ಮಲಾವಿ
- ನಮೀಬಿಯಾ
- ನೈಜೀರಿಯಾ
- ಟಾಂಝನಿಯಾ
- ಉಗಾಂಡಾ
- ಝಿಂಬಾಬ್ವೆ.
ಆಫ್ರಿಕಾ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿರುವ 8 ತಂಡಗಳಲ್ಲಿ ಕೇವಲ ಎರಡು ಟೀಮ್ಗಳು ಮಾತ್ರ ಮುಂಬರುವ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
- ಏಷ್ಯಾ/ಪೂರ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ
- ಜಪಾನ್
- ಕುವೈತ್
- ಮಲೇಷ್ಯಾ
- ನೇಪಾಳ
- ಓಮಾನ್
- ಪಪುವಾ ನ್ಯೂಗಿನಿಯಾ
- ಕತಾರ್
- ಸಮೋವಾ
- ಯುಎಇ
ಏಷ್ಯಾ/ಪೂರ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿರುವ 9 ತಂಡಗಳಲ್ಲಿ ಮೂರು ತಂಡಗಳಿಗೆ ಮುಂಬರುವ ಟಿ20 ವಿಶ್ವಕಪ್ ಆಡುವ ಅವಕಾಶವಿದೆ. ಹೀಗಾಗಿ ಈ 9 ತಂಡಗಳಲ್ಲಿ ಮೂರು ಟೀಮ್ಗಳು ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದೆ.
- ಯುರೋಪ್ ಪ್ರಾದೇಶಿಕ:
- ಗುರ್ನಸಿ
- ಇಟಲಿ
- ಜೆರ್ಸಿ
- ನೆದರ್ಲೆಂಡ್ಸ್
- ಸ್ಕಾಟ್ಲೆಂಡ್.
ಯುರೋಪ್ ಪ್ರಾದೇಶಿ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿರುವ 5 ತಂಡಗಳಲ್ಲಿ 2 ಟೀಮ್ಗಳು ಟಿ20 ವಿಶ್ವಕಪ್ 2026 ರಲ್ಲಿ ಕಾಣಿಸಿಕೊಳ್ಳಲಿದೆ. ಈ ಐದು ಟೀಮ್ಗಳಲ್ಲಿ ನೆದರ್ಲೆಂಡ್ಸ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಬಲಿಷ್ಠವಾಗಿರುವುದರಿಂದ ಈ ಎರಡು ಟೀಮ್ಗಳನ್ನು ಸಹ ಮುಂಬರುವ ವಿಶ್ವಕಪ್ನಲ್ಲಿ ನಿರೀಕ್ಷಿಸಬಹುದು.
ಟಿ20 ವಿಶ್ವಕಪ್ 2026 ಯಾವಾಗ ಶುರು?
ಪ್ರಸ್ತುತ ಮಾಹಿತಿ ಪ್ರಕಾರ, ಟಿ20 ವಿಶ್ವಕಪ್ 2026 ಫೆಬ್ರವರಿ 10 ರಿಂದ ಶುರುವಾಗಲಿದೆ. ಈ ಟೂರ್ನಿಯ ಉದ್ಘಾಟನಾ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮೊದಲ ಮ್ಯಾಚ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2026: ಚೆನ್ನೈ ಸೂಪರ್ ಕಿಂಗ್ಸ್ಗೆ ಸಂಜು ಸ್ಯಾಮ್ಸನ್?
ಇನ್ನು ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಜರುಗಲಿದೆ. ಈ ಪಂದ್ಯವು ಫೆಬ್ರವರಿ 27 ರಂದು ನಡೆಯುವ ಸಾಧ್ಯತೆಯಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 12 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಥವಾ ಕೊಲಂಬೊದಲ್ಲಿ ಆಯೋಜಿಸಲಿದ್ದಾರೆ.
