Ranji Trophy: ರಣಜಿಯಲ್ಲಿ ಮಿಂಚಿದ ಆರ್ಸಿಬಿ ಆಲ್ರೌಂಡರ್! ಮೊದಲ ಪಂದ್ಯ ಗೆದ್ದ ಬಂಗಾಳ
Shahbaz Ahmed: ಇವರಿಬ್ಬರು ಏಳನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲ್ಲಿಸಿದರು. ಅಹ್ಮದ್ 100 ಎಸೆತಗಳನ್ನು ಎದುರಿಸಿ ಅವರ ಅಜೇಯ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಬಾರಿಸಿದರು.
ಬಂಗಾಳ ಕ್ರಿಕೆಟ್ ತಂಡ (Bengal Cricket Team)ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy)ಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಿಂದುಳಿದ ನಂತರವೂ ಬರೋಡಾವನ್ನು ಬಂಗಾಳ ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಆಲ್ ರೌಂಡರ್ ಶಹಬಾಜ್ ಅಹ್ಮದ್ (Shahbaz Ahmed)ಬಂಗಾಳದ ಈ ಗೆಲುವಿನ ಹೀರೋ ಆದರು. ಈ ಆಟಗಾರ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಬಲಿಷ್ಠ ಆಟ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಬರೋಡಾ ಮೊದಲ ಇನಿಂಗ್ಸ್‌ನಲ್ಲಿ 181 ರನ್ ಗಳಿಸಿತ್ತು ಆದರೆ ಉತ್ತರವಾಗಿ ಬಂಗಾಳ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 88 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬರೋಡಾ ಬಂಗಾಳಕ್ಕೆ 349 ರನ್‌ಗಳ ಗುರಿ ನೀಡಿತ್ತು. ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಈ ಗುರಿಯನ್ನು ಬೆಂಗಾಲ್ 91.3 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಸಾಧಿಸಿತು.
ಅಹ್ಮದ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಬರೋಡಾದ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದರು. ಆದರೆ ಅವರ ಪ್ರಮುಖ ಕೊಡುಗೆ ಬ್ಯಾಟ್‌ನಿಂದ ಬಂದಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಅಹ್ಮದ್ ಬ್ಯಾಟಿಂಗ್ನಲ್ಲಿ ಅಜೇಯ 71 ರನ್ ಗಳಿಸಿದರು.
ಸಂಕಷ್ಟದಲ್ಲಿದ್ದ ತಂಡವನ್ನು ನಿಭಾಯಿಸಿದರು
ಬಲಿಷ್ಠ ಗುರಿಯ ಮುಂದೆ ಬೆಂಗಾಲ್ ತಂಡ ತತ್ತರಿಸಿತು. ನಾಯಕ ಅಭಿಮನ್ಯು ಈಶ್ವರನ್ 79 ರನ್ ಗಳಿಸಿದರು ಆದರೆ ಅವರು ಪಂದ್ಯದ ನಾಲ್ಕನೇ ಮತ್ತು ಕೊನೆಯ ದಿನದಂದು ಔಟಾದರು. ಅವರ ವಿಕೆಟ್ ಒಟ್ಟು ಸ್ಕೋರ್ 147 ಕ್ಕೆ ಕುಸಿಯಿತು. ಬಂಗಾಳ ಕೂಡ ಆರಂಭದಲ್ಲೇ ಸುದೀಪ್ ಚಟರ್ಜಿ ಮತ್ತು ಅನುಸ್ತಪ್ ಮಜುಂದಾರ್ ವಿಕೆಟ್ ಕಳೆದುಕೊಂಡಿತು. ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ತಮ್ಮ ಅನುಭವವನ್ನು ಬಳಸಿಕೊಂಡು ಅಹ್ಮದ್ ಜೊತೆಗೆ ಉತ್ತಮ ಜೊತೆಯಾಟ ಆಡಿದರು. ಆದರೆ ಮನೋಜ್ 37 ರನ್ ಗಳಿಸಿ ಔಟಾದರು. ಇಲ್ಲಿ ತಂಡದ ಸ್ಕೋರ್ ಆರು ವಿಕೆಟಿಗೆ 242 ಆಗಿತ್ತು. ಬಂಗಾಳದ ಸೋಲು ಖಚಿತ ಎನಿಸಿತು ಆದರೆ ಅಭಿಷೇಕ್ ಪೊರೆಲ್ ಜೊತೆಗೂಡಿ ಅಹ್ಮದ್ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇವರಿಬ್ಬರು ಏಳನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲ್ಲಿಸಿದರು. ಅಹ್ಮದ್ 100 ಎಸೆತಗಳನ್ನು ಎದುರಿಸಿ ಅವರ ಅಜೇಯ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಬಾರಿಸಿದರು. ಅದೇ ಸಮಯದಲ್ಲಿ ಅಭಿಷೇಕ್ ಔಟಾಗದೆ 53 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 70 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳನ್ನು ಬಾರಿಸಿದರು.
RCBಗೆ ಖುಷಿ ವಿಚಾರ
ಈ ಬಾರಿಯ ಐಪಿಎಲ್-2022 ಮೆಗಾ ಹರಾಜಿನಲ್ಲಿ ಅಹ್ಮದ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಅವರು ಇದುವರೆಗೆ ಐಪಿಎಲ್‌ನಲ್ಲಿ ಈ ತಂಡದ ಪರ ಆಡಿದ್ದಾರೆ. ಅಹ್ಮದ್ 2020 ರಲ್ಲಿ IPL ಪಾದಾರ್ಪಣೆ ಮಾಡಿದರು. ಈ ಋತುವಿನಲ್ಲಿ ಅವರು ಕೇವಲ ಎರಡು ಪಂದ್ಯಗಳನ್ನು ಆಡಿ ಅವರ ಹೆಸರಿನಲ್ಲಿ ಎರಡು ವಿಕೆಟ್ಗಳನ್ನು ಪಡೆದರು. 2021ರಲ್ಲಿ ವಿರಾಟ್ ಕೊಹ್ಲಿ ಅವರಿಗೆ 11 ಪಂದ್ಯಗಳಲ್ಲಿ ಅವಕಾಶ ನೀಡಿದ್ದರು. ಈ ಆಟಗಾರ ಒಟ್ಟು 59 ರನ್ ಗಳಿಸಿ ಏಳು ವಿಕೆಟ್ ಕಬಳಿಸಿದರು. ಐಪಿಎಲ್ ನಲ್ಲಿ ಇದುವರೆಗೆ ಒಟ್ಟು 13 ಪಂದ್ಯಗಳನ್ನಾಡಿದ್ದು, 60 ರನ್ ಗಳಿಸುವುದರ ಜೊತೆಗೆ ಒಂಬತ್ತು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:Ranji Trophy: ಚೊಚ್ಚಲ ಪಂದ್ಯದಲ್ಲೇ ಬ್ಯಾಕ್ ಟು ಬ್ಯಾಕ್ ಸೆಂಚುರಿ! ರಣಜಿಯಲ್ಲಿ ದಾಖಲೆ ಬರೆದ ಯಶ್ ಧುಲ್