IPL 2022: ನನ್ನ ಗಂಡ ಯಾಕೆ ಹರಾಜಾಗಿಲ್ಲ ಅಂದರೆ..!

| Updated By: ಝಾಹಿರ್ ಯೂಸುಫ್

Updated on: Feb 16, 2022 | 5:30 PM

Shakib al hasan: ಶಕೀಬ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 71 ಪಂದ್ಯಗಳನ್ನು ಆಡಿರುವ ಶಕೀಬ್ 52 ಇನ್ನಿಂಗ್ಸ್‌ಗಳಲ್ಲಿ 124.49 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧಶತಕಗಳನ್ನು ಒಳಗೊಂಡಂತೆ 793 ರನ್ ಗಳಿಸಿದ್ದಾರೆ.

IPL 2022: ನನ್ನ ಗಂಡ ಯಾಕೆ ಹರಾಜಾಗಿಲ್ಲ ಅಂದರೆ..!
Shakib-Umme
Follow us on

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಹರಾಜಾಗದೇ ಉಳಿದಿದ್ದಾರೆ. ಅದರಲ್ಲೂ ಕ್ರಿಕೆಟ್ ಅಂಗಳದ ಸ್ಟಾರ್ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದ ಶಕೀಬ್ ಅಲ್ ಹಸನ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸದಿರುವುದು ಅಚ್ಚರಿಗೆ ಕಾರಣವಾಗಿತ್ತು. 2 ಕೋಟಿ ಮೂಲ ಬೆಲೆ ಹೊಂದಿದ್ದ ಬಾಂಗ್ಲಾದೇಶದ ಆಲ್‌ರೌಂಡರ್ ಖರೀದಿಗೆ ಹಳೆಯ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಮುಂದೆ ಬರಲಿಲ್ಲ. ಇದೀಗ 34 ವರ್ಷಶಕೀಬ್ ಅಲ್ ಹಸನ್​ ಅವರನ್ನು ಯಾಕೆ ಯಾವ ತಂಡ ಕೂಡ ಖರೀದಿಸಿಲ್ಲ ಎಂಬುದಕ್ಕೆ ಪತ್ನಿ ಉಮ್ಮೆ ಅಲ್ ಹಸನ್ ಸ್ಪಷ್ಟನೆ ನೀಡಿದ್ದಾರೆ.

‘ಮೆಗಾ ಹರಾಜಿನ ಮೊದಲು ಅನೇಕ ಫ್ರಾಂಚೈಸಿಗಳು ಇಡೀ ಸೀಸನ್​ನಲ್ಲಿ ಆಟಗಾರರು ಲಭ್ಯವಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಲು ನೇರವಾಗಿ ಸಂಪರ್ಕಿಸಿದ್ದರು. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಬಾಂಗ್ಲಾದೇಶ ತಂಡಕ್ಕೆ ಶ್ರೀಲಂಕಾ ವಿರುದ್ಧ ಸರಣಿ ಇದೆ. ಇದೇ ಕಾರಣಕ್ಕೆ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ ಎಂದು ಉಮ್ಮೆ ಅಲ್ ಹಸನ್ ತಿಳಿಸಿದ್ದಾರೆ.

ಶಕೀಬ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳಲು ಬಯಸಿರುವ ಕಾರಣ ಅವರ ಖರೀದಿಗೆ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಏಕೆಂದರೆ ಐಪಿಎಲ್ ಫ್ರಾಂಚೈಸಿಗಳು ಸಂಪೂರ್ಣ ಟೂರ್ನಿ ಆಡುವ ಆಟಗಾರರನ್ನು ಟಾರ್ಗೆಟ್ ಮಾಡಿತ್ತು. ಇತ್ತ ಬಾಂಗ್ಲಾದೇಶ ಶ್ರೀಲಂಕಾ ವಿರುದ್ದ ಸರಣಿ ಆಡಬೇಕಾಗಿದ್ದ ಕಾರಣ ಶಕೀಬ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಅವರನ್ನು ಸಂಪರ್ಕಿಸಿದ ಐಪಿಎಲ್ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟನೆ ನೀಡಲಾಗಿತ್ತು. ಇದೇ ಕಾರಣದಿಂದಾಗಿ ಶಕೀಲ್ ಅಲ್ ಹಸನ್ ಐಪಿಎಲ್​ನಲ್ಲಿ ಅನ್​ಸೋಲ್ಡ್ ಆಗಿದ್ದಾರೆ ಎಂದು ಉಮ್ಮೆ ಅಲ್ ಹಸನ್ ಸ್ಪಷ್ಟಪಡಿಸಿದ್ದಾರೆ.

ಶಕೀಬ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 71 ಪಂದ್ಯಗಳನ್ನು ಆಡಿರುವ ಶಕೀಬ್ 52 ಇನ್ನಿಂಗ್ಸ್‌ಗಳಲ್ಲಿ 124.49 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧಶತಕಗಳನ್ನು ಒಳಗೊಂಡಂತೆ 793 ರನ್ ಗಳಿಸಿದ್ದಾರೆ. ಅಲ್ಲದೆ ಒಟ್ಟು 63 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಶಕೀಬ್ 360 ಟಿ20 ಪಂದ್ಯಗಳನ್ನು ಆಡಿದ್ದು ಈ ವೇಳೆ 22 ಅರ್ಧಶತಕ ಸೇರಿದಂತೆ ಒಟ್ಟು 5850 ರನ್ ಗಳಿಸಿದ್ದಾರೆ. ಹಾಗೆಯೇ ಸ್ಪಿನ್ ಬೌಲಿಂಗ್‌ ಮೂಲಕ ಒಟ್ಟು 413 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ವೇಳೆ 10 ಬಾರಿ 4 ವಿಕೆಟ್ ಹಾಗೂ 4 ಬಾರಿ 5 ವಿಕೆಟ್ ಪಡೆದು ಮಿಂಚಿದ್ದಾರೆ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Shakib al hasan unsold ipl mega auction 2022 wife Umme Ahmed Shishir give reasons)

Published On - 5:30 pm, Wed, 16 February 22