IND vs WI: ಚೊಚ್ಚಲ ಪಂದ್ಯದಲ್ಲೇ ರವಿ ಬಿಷ್ಣೋಯ್ ಎಡವಟ್ಟು! ನಂತರ ಒಂದೇ ಓವರ್​ನಲ್ಲಿ 2 ವಿಕೆಟ್

Ravi Bishnoi: ಬಿಷ್ಣೋಯ್ ತಮ್ಮ ಎರಡನೇ ಓವರ್‌ನಲ್ಲಿ ರೋಸ್ಟನ್ ಚೇಸ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಭಾರತಕ್ಕೆ ಮೂರನೇ ಯಶಸ್ಸನ್ನು ನೀಡಿದರು. ಅದೇ ಓವರ್‌ನಲ್ಲಿ ಬಿಷ್ಣೋಯ್ ಅಪಾಯಕಾರಿ ಬ್ಯಾಟ್ಸ್‌ಮನ್ ರೋವ್‌ಮನ್ ಪೊವೆಲ್ ಅವರ ವಿಕೆಟ್ ಪಡೆದು ಮಿಂಚಿದರು.

IND vs WI: ಚೊಚ್ಚಲ ಪಂದ್ಯದಲ್ಲೇ ರವಿ ಬಿಷ್ಣೋಯ್ ಎಡವಟ್ಟು! ನಂತರ ಒಂದೇ ಓವರ್​ನಲ್ಲಿ 2 ವಿಕೆಟ್
ರವಿ ಬಿಷ್ಣೋಯ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 16, 2022 | 8:44 PM

ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T20 ಪಂದ್ಯದಲ್ಲಿ (India vs West Indies 1st T20), ಭಾರತ ತಂಡದಲ್ಲಿ ಹೊಸ ಆಟಗಾರ ಎಂಟ್ರಿ ಕೊಟ್ಟಿದ್ದಾನೆ. 21 ವರ್ಷದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ (Ravi Bishnoi) ಅವರು ಮೊದಲ ಬಾರಿಗೆ ಟೀಂ ಇಂಡಿಯಾದ (Team India) ಪ್ಲೇಯಿಂಗ್ XI ಗೆ ಸೇರ್ಪಡೆಗೊಂಡಿದ್ದಾರೆ. ಅಂಡರ್-19 ವಿಶ್ವಕಪ್ ಮತ್ತು ಐಪಿಎಲ್‌ನಲ್ಲಿ ಅತ್ಯುತ್ತಮ ಲೆಗ್ ಬ್ರೇಕ್ ಮತ್ತು ಗೂಗ್ಲಿಗಳ ಮೂಲಕ ಎಲ್ಲರ ಗಮನ ಸೆಳೆದ ಈ ಯುವ ಲೆಗ್ ಸ್ಪಿನ್ನರ್, ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಪಂದ್ಯದಲ್ಲಿ ಬಿಷ್ಣೋಯ್ ಉತ್ತಮ ಆರಂಭವನ್ನು ನಿರೀಕ್ಷಿಸಿದ್ದರು, ಆದರೆ ಬೌಲಿಂಗ್ ಮಾಡುವ ಬದಲು ಮೈದಾನದಲ್ಲಿ ಅವರ ಮೊದಲ ಆಕ್ಷನ್ ಫೀಲ್ಡಿಂಗ್‌ನಲ್ಲಿ ಬಂದಿತು. ಇಲ್ಲಿ ಬಿಷ್ಣೋಯ್ ಮಾಡಿದ ತಪ್ಪು ಎಲ್ಲರನ್ನು ಆಶ್ಚರ್ಯಗೊಳಿಸಿತು.

ಈಡನ್ ಗಾರ್ಡನ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ರವಿ ಬಿಷ್ಣೋಯ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಎಸೆತವನ್ನು ಬೌಲ್ ಮಾಡಲು 8 ನೇ ಓವರ್‌ವರೆಗೆ ಕಾಯಬೇಕಾಯಿತು. ಆದರೆ ಅದಕ್ಕೂ ಮೊದಲು ಎಲ್ಲರ ಗಮನ ಅವರತ್ತ ಸೆಳೆಯಿತು. ಬೌಲಿಂಗ್‌ನ ಹೊರತಾಗಿ, ತಮ್ಮ ಅತ್ಯುತ್ತಮ ಫೀಲ್ಡಿಂಗ್‌ನಿಂದ ಗುರುತಿಸಲ್ಪಟ್ಟ ಬಿಷ್ಣೋಯ್, ಏಳನೇ ಓವರ್‌ನ ಮೊದಲ ಎಸೆತದಲ್ಲಿ ಕ್ಯಾಚ್ ಹಿಡಿಯುವ ಅವಕಾಶವನ್ನು ಪಡೆದರು. ಜೊತೆಗೆ ಯಶಸ್ವಿ ಕ್ಯಾಚ್ ಕೂಡ ಪಡೆದರು, ಆದರೆ ನಂತರದ ತಪ್ಪೊಂದು ಅವರು ತಪ್ಪೊಂದನ್ನು ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾದರು.

ಬಿಷ್ಣೋಯ್ ಮಾಡಿದ ತಪ್ಪೇನು?

ಯುಜ್ವೇಂದ್ರ ಚಾಹಲ್ ಅವರ ಓವರ್‌ನ ಮೊದಲ ಎಸೆತವನ್ನು ವಿಂಡೀಸ್ ಎಡಗೈ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಗಾಳಿಯಲ್ಲಿ ಆಡಿದರು. ಲಾಂಗ್ ಆಫ್‌ನಲ್ಲಿ ಪೋಸ್ಟ್ ಮಾಡಿದ ರವಿ ಬಿಷ್ಣೋಯ್ ಬೌಂಡರಿ ಬಳಿ ಎಡಕ್ಕೆ ಹೋಗುವ ಮೂಲಕ ಅದ್ಭುತ ಕ್ಯಾಚ್ ಪಡೆದರು. ಆದರೆ ಬಿಷ್ಣೋಯ್, ಚಹಾಲ್ ಮತ್ತು ಭಾರತ ತಂಡ ವಿಕೆಟ್ ಸಂಭ್ರಮಿಸುವೆ ಮೊದಲೇ ಎಡವಟ್ಟೊಂದನ್ನು ಮಾಡಿದರು. ಅದೇನೆಂದರೆ ಕ್ಯಾಚ್ ಹಿಡಿದ ಬಿಷ್ಣೋಯ್ ತಮ್ಮ ಕಾಲನ್ನು ಬೌಂಡರಿ ಹಗ್ಗಕ್ಕೆ ತಗುಲಿಸಿದರು. ಈ ದೃಶ್ಯ ನೋಡಿ ಎಲ್ಲರೂ ಬೆಚ್ಚಿಬಿದ್ದರು. ಕ್ಯಾಪ್ಟನ್ ರೋಹಿತ್ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದರೆ, ಬಿಷ್ಣೋಯ್ ಕೂಡ ತಲೆಬಾಗಿ ತನ್ನ ತಪ್ಪನ್ನು ಒಪ್ಪಿಕೊಂಡರು.

ಬಿಷ್ಣೋಯ್ ಪುನರಾಗಮನ

ಆದರೆ ಅದೇ ಓವರ್‌ನಲ್ಲಿ ಪೂರನ್ ಬದಲಿಗೆ ಕೈಲ್ ಮೇಯರ್ಸ್ ವಿಕೆಟ್ ಪಡೆಯುವಲ್ಲಿ ಯುಜ್ವೇಂದ್ರ ಚಹಾಲ್ ಯಶಸ್ವಿಯಾದರು. ಚಾಹಲ್ ವಿಂಡೀಸ್ ಓಪನರ್​ನನ್ನು ಎಲ್ ಬಿಡಬ್ಲ್ಯೂ ಮಾಡಿದರು. ಭಾರತಕ್ಕೆ ಇದು ಎರಡನೇ ಯಶಸ್ಸು. ತಂಡದ ಪರ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮೊದಲ ಓವರ್​ನಲ್ಲೇ ಆರಂಭಿಕ ಬ್ರಾಂಡನ್ ಕಿಂಗ್ ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಬಿಷ್ಣೋಯ್ ಶೀಘ್ರದಲ್ಲೇ ತಮ್ಮ ಮೊದಲ ಅಂತರರಾಷ್ಟ್ರೀಯ ವಿಕೆಟ್ ಪಡೆದರು. ಬಿಷ್ಣೋಯ್ ತಮ್ಮ ಎರಡನೇ ಓವರ್‌ನಲ್ಲಿ ರೋಸ್ಟನ್ ಚೇಸ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಭಾರತಕ್ಕೆ ಮೂರನೇ ಯಶಸ್ಸನ್ನು ನೀಡಿದರು. ಅದೇ ಓವರ್‌ನಲ್ಲಿ ಬಿಷ್ಣೋಯ್ ಅಪಾಯಕಾರಿ ಬ್ಯಾಟ್ಸ್‌ಮನ್ ರೋವ್‌ಮನ್ ಪೊವೆಲ್ ಅವರ ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: IND vs WI 1st T20, LIVE Score: ವಿಂಡೀಸ್ 5ನೇ ವಿಕೆಟ್ ಪತನ; ರವಿ 2ನೇ ವಿಕೆಟ್

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ