Shakib Al Hasan: ಸಂಸದನಾಗಿ ಹೊಸ ಇನಿಂಗ್ಸ್​ ಆರಂಭಿಸಿದ ಶಕೀಬ್ ಅಲ್ ಹಸನ್

| Updated By: ಝಾಹಿರ್ ಯೂಸುಫ್

Updated on: Jan 08, 2024 | 9:13 AM

Shakib Al Hasan: ಬಾಂಗ್ಲಾದೇಶ್ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 66 ಟೆಸ್ಟ್, 247 ಏಕದಿನ ಮತ್ತು 117 ಟಿ20 ಪಂದ್ಯಗಳನ್ನು ಆಡಿರುವ ಶಕೀಬ್ ಅಲ್ ಹಸನ್ ಟೆಸ್ಟ್​ನಲ್ಲಿ 4,454 ರನ್​ ಮತ್ತು 233 ವಿಕೆಟ್‌ಗಳನ್ನು ಪಡೆದರು. ಹಾಗೆಯೇ 247 ಏಕದಿನ ಪಂದ್ಯಗಳಲ್ಲಿ 37ರ ಸರಾಸರಿಯಲ್ಲಿ 7,570 ರನ್​ಗಳಿಸಿ, 317 ವಿಕೆಟ್ ಪಡೆದಿದ್ದಾರೆ.

Shakib Al Hasan: ಸಂಸದನಾಗಿ ಹೊಸ ಇನಿಂಗ್ಸ್​ ಆರಂಭಿಸಿದ ಶಕೀಬ್ ಅಲ್ ಹಸನ್
Shakib Al Hasan
Follow us on

ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಡಳಿತಾರೂಢ ಅವಾಮಿ ಲೀಗ್ ಪಕ್ಷದಿಂದ ಮಗೂರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಕೀಬ್ 150,000 ಕ್ಕೂ ಅಧಿಕ ಮತಗಳಿಂದ ಪ್ರಚಂಡ ಜಯ ಸಾಧಿಸಿದ್ದಾರೆ. ಈ ಬಾರಿಯ ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ಶಕೀಬ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಅದರಲ್ಲೂ ಆಡಳಿರೂಢ ಪಕ್ಷದಿಂದ ಸ್ಪರ್ಧಿಸಿದ್ದ ಕಾರಣ ಮಗೂರ ಕ್ಷೇತ್ರವು ಕುತೂಹಲದ ಕೇಂದ್ರವಾಗಿತ್ತು. ಅದರಂತೆ ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ತಮ್ಮ ಸಮೀಪದ ಸ್ಪರ್ಧಿ ಖಾಜಿ ರೆಜಾಲ್ ಹುಸೇನ್ ವಿರುದ್ಧ 1,50,000 ಮತಗಳ ಭಾರಿ ಬಹುಮತದಿಂದ ಶಕೀಬ್ ಜಯಗಳಿಸಿದ್ದಾರೆ.

36 ವರ್ಷದ ಶಕೀಬ್ ಅಲ್ ಹಸನ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿಲ್ಲ ಎಂಬುದು ವಿಶೇಷ. ಅಂದರೆ ಕ್ರಿಕೆಟ್​ನ ಜೊತೆಗೆ ರಾಜಕೀಯದಲ್ಲೂ ಹೊಸ ಇನಿಂಗ್ಸ್ ಆರಂಭಿಸುವಲ್ಲಿ ಶಕೀಬ್ ಯಶಸ್ವಿಯಾಗಿದ್ದಾರೆ.

ಬಾಂಗ್ಲಾದೇಶ್ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 66 ಟೆಸ್ಟ್, 247 ಏಕದಿನ ಮತ್ತು 117 ಟಿ20 ಪಂದ್ಯಗಳನ್ನು ಆಡಿರುವ ಶಕೀಬ್ ಅಲ್ ಹಸನ್ ಟೆಸ್ಟ್​ನಲ್ಲಿ 4,454 ರನ್​ ಮತ್ತು 233 ವಿಕೆಟ್‌ಗಳನ್ನು ಪಡೆದರು. ಹಾಗೆಯೇ 247 ಏಕದಿನ ಪಂದ್ಯಗಳಲ್ಲಿ 37ರ ಸರಾಸರಿಯಲ್ಲಿ 7,570 ರನ್​ಗಳಿಸಿ, 317 ವಿಕೆಟ್ ಪಡೆದಿದ್ದಾರೆ.

ಇನ್ನು ಟಿ20ಯಲ್ಲಿ 23ರ ಸರಾಸರಿಯಲ್ಲಿ 2,382 ರನ್ ಗಳಿಸಿರುವ ಶಕೀಬ್ ಬೌಲಿಂಗ್ ನಲ್ಲಿ 140 ವಿಕೆಟ್ ಪಡೆದಿದ್ದಾರೆ. ಸದ್ಯ ಸಂಸದರಾಗಿ ಆಯ್ಕೆಯಾಗಿರುವ ಶಕೀಬ್ ಅಲ್ ಹಸನ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮುಂದುವರೆಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: India T20 Squad: ಭಾರತ ತಂಡದಿಂದ 10 ಆಟಗಾರರು ಹೊರಕ್ಕೆ..!

ಜಯಭೇರಿ ಬಾರಿಸಿದ ಅವಾಮಿ ಲೀಗ್ ಪಕ್ಷ:

ಭಾನುವಾರ ನಡೆದ 300 ಸಂಸದೀಯ ಸ್ಥಾನಗಳ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ವಿರೋಧ ಪಕ್ಷಗಳ ಚುನಾವಣಾ ಬಹಿಷ್ಕಾರ ನಡುವೆ ನಡೆದಿದ್ದ ಈ ಎಲೆಕ್ಷನ್​ನಲ್ಲಿ ಶೇ. 40 ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ಇದಾಗ್ಯೂ ಹಾಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವು 200 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಪಕ್ಷ ಸತತ ಐದನೇ ಬಾರಿಗೆ ಅಧಿಕಾರಕ್ಕೇರಿವುದು ವಿಶೇಷ.