
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ, ಟೀಂ ಇಂಡಿಯಾ (IND vs ENG) ತನ್ನ ಸಿದ್ಧತೆಗಳನ್ನು ಬಲಪಡಿಸಲು ಅಂತರ್-ತಂಡದ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಭಾರತ ಎ ಮತ್ತು ಭಾರತೀಯ ಹಿರಿಯ ತಂಡದ ಆಟಗಾರರು ಭಾಗವಹಿಸಿದ್ದರು. ಈ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಇವರ ಜೊತೆಗೆ ಯುವ ಬ್ಯಾಟರ್ ಸರ್ಫರಾಜ್ ಕೂಡ ಶತಕ ಸಿಡಿಸಿ ಮಿಂಚಿದ್ದರು. ಇದೀಗ ಸರ್ಫರಾಜ್ ಮಾತ್ರವಲ್ಲದೆ ತಂಡದ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಆಂಗ್ಲರ ನೆಲದಲ್ಲಿ ಅಬ್ಬರಿಸಿದ್ದು, ಅಜೇಯ ಶತಕ ಬಾರಿಸಿದ್ದಾರೆ.
ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಶಾರ್ದೂಲ್ ಠಾಕೂರ್ 122 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪ್ರದರ್ಶನವು ತಂಡಕ್ಕೆ ಮಾತ್ರವಲ್ಲದೆ ಇಂಗ್ಲೆಂಡ್ ವಿರುದ್ಧದ ಮುಂಬರುವ ಸವಾಲಿಗೂ ಸಕಾರಾತ್ಮಕ ಸಂಕೇತವಾಗಿದೆ. ಇದು ಮಾತ್ರವಲ್ಲದೆ ಶಾರ್ದೂಲ್ ಠಾಕೂರ್ ಈ ಶತಕದ ಮೂಲಕ ತಮಗೂ ತಂಡದಲ್ಲಿ ಸ್ಥಾನ ನೀಡಬೇಕು ಎಂಬುದನ್ನು ಆಯ್ಕೆದಾರರ ಗಮನಕ್ಕೆ ತಂದಿದ್ದಾರೆ. ವಾಸ್ತವವಾಗಿ ಶಾರ್ದೂಲ್ ಠಾಕೂರ್ 2023 ರಿಂದ ಟೀಂ ಇಂಡಿಯಾ ಪರ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ಅಜೇಯ ಶತಕ ಸಿಡಿಸಿರುವ ಶಾರ್ದೂಲ್ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್‌ಗೆ ಇಳಿದ ಶಾರ್ದೂಲ್ ಠಾಕೂರ್ 10 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದಾದ ನಂತರ ಪಂದ್ಯದ ಕೊನೆಯ ದಿನದಂದು ತಮ್ಮ ಇನ್ನಿಂಗ್ಸ್ ಮುಂದುವರಿಸಿದ ಶಾರ್ದೂಲ್ ಎಲ್ಲಾ ಬೌಲರ್‌ಗಳ ವಿರುದ್ಧ ಮುಕ್ತವಾಗಿ ಬ್ಯಾಟ್ ಬೀಸಿ ಶತಕ ಸಿಡಿಸಿದರು. ಅವರ ಅಜೇಯ ಇನ್ನಿಂಗ್ಸ್ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತವೆಂದು ಸಾಬೀತುಪಡಿಸಿತು.
IND vs ENG Test: ಇಂಟ್ರಾ ಸ್ಕ್ವಾಡ್ ಮ್ಯಾಚ್ನಲ್ಲೂ ರಾಹುಲ್ ಆರ್ಭಟ: ಗಿಲ್-ಶಾರ್ದೂಲ್ ಕೂಡ ಭರ್ಜರಿ ಆಟ
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯು ಭಾರತ ತಂಡಕ್ಕೆ ಕಠಿಣ ಪರೀಕ್ಷೆಯಾಗಲಿದೆ. ಕಳೆದ ಕೆಲವು ವರ್ಷಗಳಿಂದ, ಉಭಯ ತಂಡಗಳ ನಡುವಿನ ಪಂದ್ಯಗಳು ಯಾವಾಗಲೂ ರೋಮಾಂಚಕಾರಿಯಾಗಿರುತ್ತವೆ. ಹೀಗಾಗಿ ಈ ಬಾರಿಯೂ ಅಭಿಮಾನಿಗಳು ರೋಮಾಂಚಕಾರಿ ಕ್ರಿಕೆಟ್ ಅನ್ನು ನಿರೀಕ್ಷಿಸುತ್ತಿದ್ದಾರೆ. 2007 ರಿಂದ ಭಾರತ ಈ ದೇಶದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಶುಭ್‌ಮನ್ ಗಿಲ್ ಈ ಬರವನ್ನು ಕೊನೆಗೊಳಿಸುವ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಇಲ್ಲದೆ ಟೀಂ ಇಂಡಿಯಾ ಈ ಸರಣಿಗೆ ಪ್ರವೇಶಿಸಲಿದ್ದು, ಇದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗದ ಆರಂಭ ಎಂದು ಪರಿಗಣಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ