ಮತ್ತೆ ನಾಯಕತ್ವ ಬದಲಾವಣೆ; ಪಂಜಾಬ್ ನಾಯಕತ್ವದಿಂದ ಕನ್ನಡಿಗ ಮಯಾಂಕ್ ಔಟ್..! ಧವನ್​ಗೆ ಕಿಂಗ್ಸ್ ಕಮಾಂಡ್

IPL 2023: ಕಳೆದ ವರ್ಷವಷ್ಟೇ ಕೆಎಲ್ ರಾಹುಲ್ ತಂಡವನ್ನು ತೊರೆದಿದ್ದರಿಂದ ಪಂಜಾಬ್ ಮಯಾಂಕ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿತ್ತು.

ಮತ್ತೆ ನಾಯಕತ್ವ ಬದಲಾವಣೆ; ಪಂಜಾಬ್ ನಾಯಕತ್ವದಿಂದ ಕನ್ನಡಿಗ ಮಯಾಂಕ್ ಔಟ್..! ಧವನ್​ಗೆ ಕಿಂಗ್ಸ್ ಕಮಾಂಡ್
Punjab Kings
Follow us
TV9 Web
| Updated By: ಪೃಥ್ವಿಶಂಕರ

Updated on:Nov 03, 2022 | 11:34 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಂದಿನ ಸೀಸನ್‌ಗೆ ಸಿದ್ಧತೆಗಳು ಈಗಿನಿಂದಲೇ ಆರಂಭವಾಗಿವೆ. ಒಂದೆಡೆ, ಬಿಸಿಸಿಐ (BCCI) ಐಪಿಎಲ್-2023 ರ ಹರಾಜಿಗೆ ವ್ಯವಸ್ಥೆ ಮಾಡುತ್ತಿದ್ದರೆ, ಈ ಕಡೆ ಫ್ರಾಂಚೈಸಿಗಳು ತಮ್ಮ ತಂಡಗಳ ಬಗ್ಗೆ ತಂತ್ರಗಳನ್ನು ರೂಪಿಸುತ್ತಿವೆ. ಈ ನಡುವೆ ಪಂಜಾಬ್ ಕಿಂಗ್ಸ್ (Punjab Kings) ಮಹತ್ವದ ನಿರ್ಧಾರ ಕೈಗೊಂಡಿದ್ದು, ತಮ್ಮ ತಂಡದ ನಾಯಕತ್ವವನ್ನು ಬದಲಾಯಿಸಿದೆ. ಕಳೆದ ಸೀಸನ್​ನಲ್ಲಿ ತಂಡದ ನಾಯಕರಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಬದಲಿಗೆ, ಭಾರತ ಏಕದಿನ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಅವರನ್ನು ತಂಡದ ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಪಂಜಾಬ್ ಕಿಂಗ್ಸ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಅದೇ ಸಮಯದಲ್ಲಿ, ಬುಧವಾರ ನಡೆದ ಫ್ರಾಂಚೈಸಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ESPNcricinfo ತನ್ನ ವರದಿಯಲ್ಲಿ ತಿಳಿಸಿದೆ. ಈಗ ಪಂಜಾಬ್ ಹರಾಜಿಗೂ ಮುನ್ನ ಮಯಾಂಕ್ ಅವರನ್ನು ತನ್ನೊಂದಿಗೆ ಉಳಿಸಿಕೊಳ್ಳಲಿದೆಯೇ ಅಥವಾ ಅವರನ್ನು ಬಿಡುಗಡೆ ಮಾಡುತ್ತದೆಯೇ ಎಂದು ಕಾದು ನೋಡಬೇಕಿದೆ. ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಮಂಡಳಿಗೆ ಸಲ್ಲಿಸಲು ಫ್ರಾಂಚೈಸಿಗಳಿಗೆ ನವೆಂಬರ್ 15 ರ ವರೆಗೆ ಅವಕಾಶವಿದೆ.

ಪಂಜಾಬ್​ಗೆ ಯಶಸ್ಸು ಸಿಗಲಿಲ್ಲ

ಕಳೆದ ವರ್ಷವಷ್ಟೇ ಕೆಎಲ್ ರಾಹುಲ್ ತಂಡವನ್ನು ತೊರೆದಿದ್ದರಿಂದ ಪಂಜಾಬ್ ಮಯಾಂಕ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಮಯಾಂಕ್ ಅವರ ನಾಯಕತ್ವದಲ್ಲಿಯೂ ಈ ತಂಡ ಯಶಸ್ಸನ್ನು ಪಡೆಯಲಾಗದೆ ಮತ್ತೊಮ್ಮೆ ಪ್ಲೇಆಫ್‌ಗೆ ಎಂಟ್ರಿಕೊಡುವಲ್ಲಿ ವಿಫಲವಾಗಿತ್ತು. ಇದಾದ ನಂತರ ಟೀಮ್ ಮ್ಯಾನೇಜ್‌ಮೆಂಟ್ ಕೂಡ ಕೋಚ್ ಅನಿಲ್ ಕುಂಬ್ಳೆ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿತ್ತು. ಕುಂಬ್ಳೆ ಬದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡವನ್ನು ಎರಡು ಬಾರಿ ಐಪಿಎಲ್ ಚಾಂಪಿಯನ್ ಮಾಡಿದ್ದ ಬೇಲಿಸ್ ಅವರನ್ನು ನೂತನ ಕೋಚ್ ಆಗಿ ಆಯ್ಕೆ ಮಾಡಿತ್ತು.

ಇದನ್ನೂ ಓದಿ: 65 ಮೀ. ದೂರದಿಂದ ರಾಹುಲ್ ರಾಕೆಟ್ ಥ್ರೋ; ಪಂದ್ಯದ ದಿಕ್ಕನೇ ಬದಲಾಯಿಸಿದ ಅದೊಂದು ರನೌಟ್..! ವಿಡಿಯೋ

ಇದೀಗ ತಂಡದ ನಾಯಕತ್ವವನ್ನೂ ಬದಲಾಯಿಸಲಾಗಿದ್ದು, ನೂತನ ನಾಯಕನಾಗಿ ಆಯ್ಕೆಯಾಗುವ ಮೂಲಕ ಐಪಿಎಲ್‌ನಲ್ಲಿ ಧವನ್ ಎರಡನೇ ಬಾರಿಗೆ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷವಷ್ಟೇ ಮೆಗಾ ಹರಾಜಿನಲ್ಲಿ ಪಂಜಾಬ್ ಅವರನ್ನು ಖರೀದಿಸಿತ್ತು. ಈ ಹಿಂದೆ ಧವನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು. ಆ ಬಳಿಕ ಈ ಫ್ರಾಂಚೈಸಿಯಿಂದ ದೆಹಲಿ ಕ್ಯಾಪಿಟಲ್ಸ್‌ ಸೇರಿದ್ದ ಧವನ್, ನಂತರ ಪಂಜಾಬ್‌ ತಂಡವನ್ನು ಸೇರಿಕೊಂಡಿದ್ದರು.

ಧವನ್ ಐಪಿಎಲ್ ವೃತ್ತಿಜೀವನ

ಧವನ್ 2008 ರಿಂದ ಐಪಿಎಲ್ ಆಡುತ್ತಿರುವ ಆಟಗಾರ. ಅವರು ಐಪಿಎಲ್ ಮೊದಲ ಸೀಸನ್​ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು. ಆ ಬಳಿಕ ಹೈದರಾಬಾದ್‌ ತಂಡವನ್ನು ಸೇರಿಕೊಂಡಿದ್ದರು. ಧವನ್ ಐಪಿಎಲ್‌ನಲ್ಲಿ ಒಟ್ಟು 11 ಪಂದ್ಯಗಳ ನಾಯಕತ್ವವಹಿಸಿರುವ ಅನುಭವ ಹೊಂದಿದ್ದಾರೆ. ಅವರು 10 ಪಂದ್ಯಗಳಲ್ಲಿ ಹೈದರಾಬಾದ್‌ ಪರ ನಾಯಕತ್ವ ನಿರ್ವಹಿಸಿದ್ದರೆ, ಕಳೆದ ವರ್ಷ ಒಂದು ಪಂದ್ಯದಲ್ಲಿ ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ನಾಯಕನಾಗಿ ಅವರು ಐಪಿಎಲ್‌ನಲ್ಲಿ ನಾಲ್ಕು ಗೆಲುವು ಮತ್ತು ಏಳು ಸೋಲುಗಳನ್ನು ಅನುಭವಿಸಿದ್ದಾರೆ. ಪಂಜಾಬ್ ತಂಡ ಇದುವರೆಗೆ ಒಂದು ಬಾರಿಯೂ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿಲ್ಲ. ಹಾಗಾಗಿ ಈಗ ಧವನ್ ಅವರ ನಾಯಕತ್ವದಲ್ಲಿ ಪಂಜಾಬ್‌ ತಂಡ ಬಹುಕಾಲದಿಂದ ಕಾಯುತ್ತಿರುವ ಯಶಸ್ಸನ್ನು ಪಡೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Thu, 3 November 22

ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ