ಭಾರತ ತಂಡದಿಂದ ಹೊರಗುಳಿದಿರುವ ಶಿವಂ ದುಬೆ (Shivam Dube) ಅವರಿಗೆ ಭಾನುವಾರ ದುಪ್ಪಟ್ಟು ಸಂತಸ ತಂದಿದೆ. ಭಾನುವಾರ ಪತ್ನಿ ಅರ್ಜು ಮಗನಿಗೆ ಜನ್ಮ ನೀಡಿರುವ ಸಂತಸ ಒಂದಾದರೆ ಅದೇ ಸಮಯದಲ್ಲಿ, ಐಪಿಎಲ್ 2022 ಹರಾಜಿನಲ್ಲಿಯೂ (IPL 2022 Auction) ಅವರು ಬಂಪರ್ ಆಫರ್ ಪಡೆದಿದ್ದಾರೆ. ಶಿವಂ ದುಬೆ ಐಪಿಎಲ್‌ನ 15 ನೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದು, ದುಬೆಗಾಗಿ ಚೆನ್ನೈ ನಾಲ್ಕು ಕೋಟಿಗಳನ್ನು ಖರ್ಚು ಮಾಡಿದೆ. ಶಿವಂ ದುಬೆ ತಂದೆಯಾದ ತಕ್ಷಣ, ಅವರು ಐಪಿಎಲ್‌ನಲ್ಲಿ ಡ್ಯಾಡಿ ಆರ್ಮಿ ಎಂದು ಕರೆಯಲ್ಪಡುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ್ದಾರೆ.
ಶಿವಂ ದುಬೆ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಹೊಸದಾಗಿ ಪ್ರಾರಂಭಿಸಲಾದ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಬಿಡ್ ಮಾಡಲು ಪ್ರಾರಂಭಿಸಿತು. ಇದಾದ ನಂತರ ಪಂಜಾಬ್ ಕಿಂಗ್ಸ್ ಕೂಡ ರೇಸ್‌ಗೆ ಸೇರ್ಪಡೆಗೊಂಡಿತು. ಪಂಜಾಬ್ 2.2 ಕೋಟಿಯೊಂದಿಗೆ ಹಿಂದಿರುಗಿದ ತಕ್ಷಣ, ಚೆನ್ನೈ ಸೂಪರ್ ಕಿಂಗ್ಸ್ ರೇಸ್‌ಗೆ ಸೇರಿಕೊಂಡಿತು. ಇಲ್ಲಿಂದ ಈ ಆಲ್‌ರೌಂಡರ್ ಅನ್ನು ಖರೀದಿಸುವ ಯುದ್ಧ ಇಬ್ಬರ ನಡುವೆ ಪ್ರಾರಂಭವಾಯಿತು. ಅಂತಿಮವಾಗಿ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಕೋಟಿ ಬಿಡ್‌ನೊಂದಿಗೆ ಶಿವಂ ದುಬೆಯನ್ನು ಖರೀದಿಸಿತು.
ಶಿವಂ ದುಬೆ ಅವರ ಐಪಿಎಲ್ ವೃತ್ತಿಜೀವನ
ಐಪಿಎಲ್‌ನಲ್ಲಿ ಶಿವಂ ದುಬೆ ಅವರ ವೃತ್ತಿಜೀವನವು 2019 ರಲ್ಲಿ ಪ್ರಾರಂಭವಾಯಿತು. ಆ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಸ್ಫೋಟಕ ಆಲ್‌ರೌಂಡರ್‌ನನ್ನು 4.40 ಕೋಟಿಗೆ ತಮ್ಮ ತಂಡದಲ್ಲಿ ಸೇರಿಸಿಕೊಂಡಿತು. ಈ ಸಮಯದಲ್ಲಿ ಅವರು ಟೀಂ ಇಂಡಿಯಾಕ್ಕೂ ಆಯ್ಕೆಯಾದರು. ಶಿವಂ ದುಬೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 24 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 120 ಸ್ಟ್ರೈಕ್ ರೇಟ್‌ನೊಂದಿಗೆ 399 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಶಿವಂ ಖಾತೆಯಲ್ಲಿ 4 ವಿಕೆಟ್‌ಗಳು ಕೂಡ ಬಂದಿವೆ.
ಇದನ್ನೂ ಓದಿ:Liam Livingstone, IPL 2022 Auction: 9 ಐಪಿಎಲ್ ಪಂದ್ಯಗಳನ್ನಾಡಿರುವ ಆಟಗಾರನಿಗೆ 11.50 ಕೋಟಿ ಸುರಿದ ಪಂಜಾಬ್!