ಕೊಹ್ಲಿಗಿಂತ ಈತ ಬೆಸ್ಟ್! ಟೀಂ ಇಂಡಿಯಾವನ್ನು ತೆಗಳುವ ಒಬ್ಬ ಪಾಕಿಸ್ತಾನಿಯೂ ಇಲ್ಲ; ಶೋಯೆಬ್ ಅಖ್ತರ್

ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ರೋಹಿತ್ ಶರ್ಮಾ ಕೊಹ್ಲಿಗಿಂತಲೂ ಶ್ರೇಷ್ಠ. ಆತ ಭಾರತದ ಇಂಜಮಾಮ್-ಉಲ್-ಹಕ್ ಎಂದಿದ್ದಾರೆ.

ಕೊಹ್ಲಿಗಿಂತ ಈತ ಬೆಸ್ಟ್! ಟೀಂ ಇಂಡಿಯಾವನ್ನು ತೆಗಳುವ ಒಬ್ಬ ಪಾಕಿಸ್ತಾನಿಯೂ ಇಲ್ಲ; ಶೋಯೆಬ್ ಅಖ್ತರ್
ಅಖ್ತರ್

ಪ್ರಸ್ತುತ ಕ್ರಿಕೆಟ್ ಯುಗದಲ್ಲಿ, ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಎಣಿಸಲ್ಪಡುತ್ತಾರೆ. ಅವರ ಬ್ಯಾಟಿಂಗ್ ಶೈಲಿಯನ್ನು ಇಡೀ ಪ್ರಪಂಚ ಮೆಚ್ಚಿದೆ. ಅದೇ ಸಮಯದಲ್ಲಿ, ಬೌಲರ್‌ಗಳು ಸಹ ಕೊಹ್ಲಿ ಹೆಸರನ್ನು ಕೇಳಿದರೆ ಹೆದರುತ್ತಾರೆ. ಕೊಹ್ಲಿ ಅಭಿಮಾನಿಗಳು ಪಾಕಿಸ್ತಾನ ಸೇರಿದಂತೆ ಇಡೀ ಪ್ರಪಂಚದಾದ್ಯಂತ ಇದ್ದಾರೆ. ಆದರೆ ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿಭಿನ್ನ ಸಂಗತಿ ಹೊರಗಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ನಿಸ್ಸಂದೇಹವಾಗಿ ವಿರಾಟ್ ಅಭಿಮಾನಿಗಳಿದ್ದಾರೆ ಆದರೆ ನಮ್ಮ ದೇಶದಲ್ಲಿ ವಿರಾಟ್​ಗಿಂತ ಹೆಚ್ಚು ಪೂಜಿಸಲ್ಪಡುವ ಇನ್ನೊಬ್ಬ ಭಾರತೀಯ ಬ್ಯಾಟ್ಸ್‌ಮನ್ ಇದ್ದಾರೆ ಎಂದು ಅಖ್ತರ್ ಹೇಳಿದ್ದಾರೆ. ಅಖ್ತರ್ ಪ್ರಕಾರ, ಪಾಕಿಸ್ತಾನದ ಜನರು ವಿರಾಟ್ ಅವರಿಗಿಂತ ಹೆಚ್ಚಾಗಿ, ಇನ್ನೊಬ್ಬ ಭಾರತೀಯ ಬ್ಯಾಟ್ಸ್‌ಮನ್‌ಗೆ ಅಭಿಮಾನಿಗಳಿದ್ದಾರೆ ಎಂದಿದ್ದಾರೆ. ಆ ಬ್ಯಾಟ್ಸ್‌ಮನ್ ಮತ್ತ್ಯಾರು ಅಲ್ಲ, ಅವರೆ ನಮ್ಮ ರೋಹಿತ್ ಶರ್ಮಾ.

ಅಕ್ಟೋಬರ್ 24 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ 20 ವಿಶ್ವಕಪ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಈ ವಿಚಾರದ ಬಗ್ಗೆ ಸುದ್ದಿ ಚಾನೆಲ್ ಜೀ ನ್ಯೂಸ್​ ನಲ್ಲಿ ಮಾತನಾಡುತ್ತಾ ಅಖ್ತರ್, ಇಂದಿನ ಯುಗದಲ್ಲಿ ಭಾರತದ ತಂಡ ಉತ್ತಮವಾಗಿಲ್ಲ ಎಂದು ಹೇಳುವ ಒಬ್ಬ ಪಾಕಿಸ್ತಾನಿಯೂ ಇಲ್ಲ. ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತೇನೆ. ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ರೋಹಿತ್ ಶರ್ಮಾ ಕೊಹ್ಲಿಗಿಂತಲೂ ಶ್ರೇಷ್ಠ. ಆತ ಭಾರತದ ಇಂಜಮಾಮ್-ಉಲ್-ಹಕ್ ಎಂದಿದ್ದಾರೆ.

ನಾನು ತುಂಬಾ ಅದೃಷ್ಟವಂತ
ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ನಿರಂತರವಾಗಿ ಕ್ರಿಕೆಟ್ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲಿ ಅವರು ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ನಾನು ಹಣ ಗಳಿಸಲು ಹೇಳಿಕೆಗಳನ್ನು ನೀಡುತ್ತೇನೆ ಎಂದು ಜನರು ಹೇಳುತ್ತಾರೆ. ಇದು ಸರಿಯಲ್ಲ. ನನಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ನಾನು ಭಾರತದಲ್ಲಿ ಸಾಕಷ್ಟು ಪ್ರೀತಿಯನ್ನು ಪಡೆದಿರುವ ಅದೃಷ್ಟವಂತ ಪಾಕಿಸ್ತಾನಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ನನ್ನನ್ನು ಅಥವಾ ಅವರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದಿದ್ದಾರೆ.

ವಿಶ್ವಕಪ್‌ನಲ್ಲಿ ಉತ್ತಮ ಪಂದ್ಯ
ಅಕ್ಟೋಬರ್ 24 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಟಿ 20 ವಿಶ್ವಕಪ್ ಪಂದ್ಯ ನಡೆಯಲಿದೆ. ವಿಶ್ವಕಪ್ ಇತಿಹಾಸದಲ್ಲಿ ಇಲ್ಲಿಯವರೆಗೆ ಪಾಕಿಸ್ತಾನ, ಭಾರತವನ್ನು ಸೋಲಿಸಲು ಸಾಧ್ಯವಾಗಿಲ್ಲ. ಏಳು ಬಾರಿ ಅವರು ಏಕದಿನ ವಿಶ್ವಕಪ್‌ನಲ್ಲಿ ಮತ್ತು ಐದು ಬಾರಿ ಟಿ 20 ವಿಶ್ವಕಪ್‌ನಲ್ಲಿ ಭಾರತದ ಎದುರು ಸೋತಿದ್ದಾರೆ. ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ತನ್ನ ಮೊದಲ ಟಿ 20 ವಿಶ್ವಕಪ್ ಗೆದ್ದಿತು. ವಿಶ್ವಕಪ್ -2019 ರಲ್ಲಿ ಈ ಎರಡು ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು.

Click on your DTH Provider to Add TV9 Kannada