ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರನ್ನು ಟಿವಿ ಕಾರ್ಯಕ್ರಮ ವೇಳೆದ ಹೊರನಡೆಯುವಂತೆ ತಿಳಿಸಿ ಇದೀಗ ನಿರೂಪಕ ವಿವಾದಕ್ಕೆ ತಿಳಿಸಿದ್ದಾರೆ. ಪಾಕಿಸ್ತಾನ್-ನ್ಯೂಜಿಲೆಂಡ್ ನಡುವಣ ಪಂದ್ಯದ ಬಳಿಕ ಸರ್ಕಾರಿ ಸ್ವಾಮ್ಯದ ಪಿಟಿವಿಯಲ್ಲಿ ಕ್ರಿಕೆಟ್ ವಿಶ್ಲೇಷಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಶೋಯೆಬ್ ಅಖ್ತರ್ ಅವರ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಿರೂಪಕ ಡಾ ನೊಮಾನ್ ಅವರು ಕಾರ್ಯಕ್ರಮದಿಂದ ಹೊರನಡೆಯುವಂತೆ ಸೂಚಿಸಿದ್ದರು. ಇದರಿಂದ ಮುಜುಗರಕ್ಕೊಳಗಾದ ಅಖ್ತರ್ ವೀಕ್ಷಕರಲ್ಲಿ ಕ್ಷಮೆಯಾಚಿಸಿ ಅರ್ಧದಲ್ಲೇ ಕಾರ್ಯಕ್ರಮವನ್ನು ತೊರೆದಿದ್ದರು.
ಪಿಟಿವಿಯ ಪ್ಯಾನೆಲ್ ಡಿಸ್ಕಷನ್ನಲ್ಲಿ ಮುಖ್ಯ ಅತಿಥಿಗಳಾಗಿ ಶೋಯೆಬ್ ಅಖ್ತರ್, ಸರ್ ವಿವಿಯನ್ ರಿಚರ್ಡ್ಸ್, ಡೇವಿಡ್ ಗೋವರ್, ರಶೀದ್ ಲತೀಫ್, ಉಮರ್ ಗುಲ್, ರಶೀದ್ ಲತೀಫ್, ಅಕಿಬ್ ಜಾವೇದ್ ಮತ್ತು ಪಾಕಿಸ್ತಾನ ಮಹಿಳಾ ತಂಡದ ನಾಯಕಿ ಸನಾ ಮಿರ್ ಕಾಣಿಸಿಕೊಂಡಿದ್ದರು. ಚರ್ಚೆಯ ನಡುವೆ ಪಾಕ್ ವೇಗಿ ಹ್ಯಾರಿಸ್ ರೌಫ್ ವಿಚಾರವನ್ನು ಪ್ರಸ್ತಾಪಿಸಿ ಅಖ್ತರ್, ಪಾಕಿಸ್ತಾನ್ ಪ್ರೀಮಿಯರ್ ಲೀಗ್ನ ಲಾಹೋರ್ ಕಲಂದರ್ಸ್ ತಂಡವನ್ನು ಹೊಗಳಿದ್ದರು.
ನ್ಯೂಜಿಲೆಂಡ್ ವಿರುದ್ದ 4 ವಿಕೆಟ್ ಪಡೆದು ಮಿಂಚಿದ್ದ ಹ್ಯಾರಿಸ್ ರೌಫ್ ಅವರನ್ನು ಲಾಹೋರ್ ಕಲಂದರ್ಸ್ ತಂಡ ಗುರುತಿಸಿತ್ತು. ಅವರನ್ನು ಗುರುತಿಸಿ ಬೆಂಬಲಿಸಿದ ತಂಡ ಹಾಗೂ ತರಬೇತುದಾರ ಅಕಿಬ್ಗೆ ಎಲ್ಲಾ ಕ್ರೆಡಿಟ್ ಹೋಗಬೇಕೆಂದು ಅಖ್ತರ್ ತಿಳಿಸಿದ್ದರು. ಇದೇ ವೇಳೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಕುಪಿತಗೊಂಡ ನಿರೂಪಕ ನೊಮಾನ್, ನೀವು ಓವರ್ಸ್ಮಾರ್ಟ್ ಅನಿಸಿಕೊಳ್ಳಲು ಯತ್ನಿಸುವುದಾದರೆ ನೀವು ಹೊರಹೋಗಬಹುದು ಎಂದು ಆಕ್ರೋಶದಿಂದ ನುಡಿದರು. ಅಷ್ಟೇ ಅಲ್ಲದೆ ಕೂಡಲೇ ಬ್ರೇಕ್ ತೆಗೆದುಕೊಂಡರು.
ಬ್ರೇಕ್ ಬಳಿಕ ಚರ್ಚೆಯಲ್ಲಿ ಅಖ್ತರ್ ಕಾಣಿಸಿಕೊಂಡರೂ, ನಿರೂಪಕನ ಪ್ರಶ್ನೆಗೆ ಉತ್ತರಿಸದೇ, ನಿಮ್ಮ ನಡೆಯಿಂದ ನಾನು ಅವಮಾನಿತನಾಗಿದ್ದೇನೆ. ಹೀಗಾಗಿ ಚರ್ಚೆಯಲ್ಲಿ ಮುಂದುವರೆಸಲು ಇಚ್ಛಿಸುವುದಿಲ್ಲ. ಹಾಗಾಗಿ ವೀಕ್ಷಕರಲ್ಲಿ ಕ್ಷಮೆಯಾಚಿಸಿ ಅಖ್ತರ್ ಹೊರನಡೆದಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ಅಖ್ತರ್ ಸ್ಪಷ್ಟನೆ ನೀಡಿದ್ದಾರೆ.
Dr Nauman Niaz and Shoaib Akhtar had a harsh exchange of words during live PTV transmission. pic.twitter.com/nE0OhhtjIm
— Kamran Malik (@Kamran_KIMS) October 26, 2021
“ಸಾಮಾಜಿಕ ಮಾಧ್ಯಮದಲ್ಲಿ ಹಲವು ಕ್ಲಿಪ್‌ಗಳು ಹರಿದಾಡುತ್ತಿವೆ. ಹೀಗಾಗಿ ಈ ಬಗ್ಗೆ ನಾನು ಸ್ಪಷ್ಟನೆ ನೀಡಬೇಕೆಂದು ಬಯಸಿದ್ದೇನೆ. ಡಾ ನೊಮಾನ್ ಅಸಹ್ಯಕರ ಮತ್ತು ಅಸಭ್ಯವಾಗಿ ವರ್ತಿಸಿ ನನ್ನನ್ನು ಕಾರ್ಯಕ್ರಮದಿಂದ ಹೊರಹೋಗುವಂತೆ ಕೇಳಿದರು. ಸರ್ ವಿವಿಯನ್ ರಿಚರ್ಡ್ಸ್ ಮತ್ತು ಡೇವಿಡ್ ಗೋವರ್ ಅವರಂತಹ ದಂತಕಥೆಗಳಿರುವ ಸೆಟ್‌ನಲ್ಲಿ, ನನ್ನ ಕೆಲವು ಸಮಕಾಲೀನರು ಮತ್ತು ಹಿರಿಯರು ಮತ್ತು ಲಕ್ಷಾಂತರ ಜನರು ವೀಕ್ಷಿಸುತ್ತಿರುವಾಗ ಈ ರೀತಿಯಾಗಿ ಹೇಳಿದ್ದು ನನಗೆ ಮುಜುಗರವನ್ನು ಉಂಟು ಮಾಡಿದೆ. ಈ ಬಗ್ಗೆ ಕ್ಷಮೆಯಾಚಿಸುವಂತೆ ನಾನು ನೊಮಾನ್ ಬಳಿ ತಿಳಿಸಿದ್ದೆ. ಇದಾಗ್ಯೂ ಅವರು ಅದನ್ನು ನಿರಾಕರಿಸಿದಾಗ ನಾನು ಚರ್ಚೆಯಿಂದ ಹೊರನಡೆಯಬೇಕಾಯಿತು ಎಂದು ಅಖ್ತರ್ ತಿಳಿಸಿದ್ದಾರೆ.
ಇದನ್ನೂ ಓದಿ: T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್ನಿಂದ ಪ್ರಮುಖ ಆಟಗಾರ ಹೊರಕ್ಕೆ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
ಇದನ್ನೂ ಓದಿ: T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್
(Shoaib Akhtar walks out of TV show after being asked to leave)