Shreyas Iyer: ಸತತ ಐದನೇ ಸೋಲು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಗರಂ: ಏನು ಹೇಳಿದ್ರು ಕೇಳಿ
DC vs KKR, IPL 2022: ಐಪಿಎಲ್ 2022 ರಲ್ಲಿ ಕೋಲ್ಕತ್ತಾ ತಂಡದ ಮುಂದಿನ ಹಾದಿ ಮತ್ತಷ್ಟು ದುರ್ಗಮಗೊಂಡಿದೆ. ಡೆಲ್ಲಿ ವಿರುದ್ಧದ ಪಂದ್ಯ ಮುಗಿದ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡಿ.
ಐಪಿಎಲ್ 2022 ರಲ್ಲಿ (IPL 2022) ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸೋಲಿನ ಪಯಣ ಮುಂದುವರೆದಿದೆ. ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆದ್ದು ಉಳಿದ ಆರು ಪಂದ್ಯಗಳಲ್ಲಿ ಸೋಲುಂಡು ಪಾಯಿಂಟ್ ಟೇಬಲ್ನಲ್ಲಿ ಎಂಟನೇ ಸ್ಥಾನದಲ್ಲಿದೆ. ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು 4 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ (DC vs KKR) ಮಣಿಸಿತು. ಕುಲ್ದೀಪ್ ದಾಳಿಗೆ ನಲುಗಿದ ಕೆಕೆಆರ್ 9 ವಿಕೆಟ್‌ಗೆ 146 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ 19 ಓವರ್‌ಗಳಲ್ಲಿ 6 ವಿಕೆಟ್‌ಗೆ 150 ರನ್ ಗಳಿಸಿ ಜಯಿಸಿತು. ಈ ಸೋಲಿನ ಬಳಿಕ ಇದೀಗ ಐಪಿಎಲ್ 2022 ರಲ್ಲಿ ಅಯ್ಯರ್ ಬಳಗದ ಮುಂದಿನ ಹಾದಿ ಮತ್ತಷ್ಟು ದುರ್ಗಮಗೊಂಡಿದೆ. ಪಂದ್ಯ ಮುಗಿದ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡಿ.
“ನಮ್ಮ ಆರಂಭ ತುಂಬಾ ನಿಧಾನವಾಗಿತ್ತು, ಇದರ ಜೊತೆಗೆ ವಿಕೆಟ್ಗಳನ್ನು ಕೂಡ ಕಳೆದುಕೊಂಡೆವು. ಹೀಗಾಗಿ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಇದಕ್ಕೆ ಕ್ಷಮೆಯಿಲ್ಲ, ಎಲ್ಲಿ ತಪ್ಪಾಗಿದೆಯೆಂದು ಹುಡುಕಿ ಅದನ್ನು ಸರಿಪಡಿಸಿಕೊಳ್ಳಬೇಕು. ಇಂಜುರಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿರುವುದರಿಂದ ನಮ್ಮ ಟಾಪ್ ಆರ್ಡರ್ನಲ್ಲಿ ಬದಲಾವಣೆ ಆಗುತ್ತಲೇ ಇದೆ. ಇದು ಆಟಗಾರರನ್ನು ಸೆಟ್ ಆಗಲು ಬಿಡುತ್ತಿಲ್ಲ. ನಾವು ಒಂದು ನಿರ್ಧಾರಕ್ಕೆ ಬದ್ಧರಾಗಬೇಕಿದೆ. ಭಯ ಬಿಟ್ಟು ಆಡಬೇಕು. ಇನ್ನೂ ಐದು ಪಂದ್ಯಗಳು ಬಾಕಿಯಿದೆ. ಅದನ್ನು ಚೆನ್ನಾಗ ಆಡಬೇಕಿದೆ. ಮ್ಯಾನೇಜ್ಮೆಂಟ್ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಹಿಂದಿನದು ಮರೆತು ಹೊಸ ಆರಂಭ ಮಾಡುತ್ತೇವೆ,” ಎಂದು ಹೇಳಿದ್ದಾರೆ.
“ಈ ಸೋಲಿನ ಬಗ್ಗೆ ಕೂತು ಯೋಚಿಸಬೇಕಿದೆ. ನಾವು ಎಡವಿದ್ದೆಲ್ಲಿ?, ಇದು ಅತಿಯಾದ ಆತ್ಮವಿಶ್ವಾಸವಲ್ಲ. ನಮ್ಮ ಬೆಸ್ಟ್ ಅನ್ನು ನೀಡಬೇಕಿದೆ. ಉಮೇಶ್ ಯಾದವ್ ಮೊದಲ ಬಾಲ್ನಲ್ಲೇ ವಿಕೆಟ್ ಕಿತ್ತರು ಆದರೆ ಅದೇ ಓವರ್ನಲ್ಲಿ 11 ರನ್ ನೀಡಿದರು. ಅಲ್ಲಿ ಎಲ್ಲವೂ ಬದಲಾಯಿತು. ಅವರು ನಮ್ಮ ತಂಡಕ್ಕೆ ಈ ಸೀಸನ್ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಪ್ರದರ್ಶನ ಹಿಂದಿನ ಪಂದ್ಯಗಳಲ್ಲಿ ಅತ್ಯುತ್ತಮವಾಗಿತ್ತು,” ಎಂಬುದು ಅಯ್ಯರ್ ಮಾತು.
ಗೆದ್ದ ತಂಡದ ನಾಯಕ ರಿಷಭ್ ಪಂತ್ ಮಾತನಾಡಿ, “ಪಂದ್ಯವನ್ನು ಕೊನೆಯ ಹಂತದ ವರೆಗೂ ಕೊಂಡೊಯ್ಯಿದರೆ ಗೆಲುವು ಸಾಧಿಸಬಹುದು ಎಂದು ನಾವು ಅಂದುಕೊಂಡಿದ್ದೆವು, ಅದರಂತೆ ಆಯಿತು. ಕೋವಿಡ್ನಿಂದ ಗುಣಮುಖರಾಗಿ ಮಿಚೆಲ್ ಮಾರ್ಶ್ ತಂಡ ಸೇರಿಕೊಂಡಿರುವುದು ಸಂತಸ ತಂದಿದೆ. ನಮ್ಮದು ಬಲಿಷ್ಠ ಪ್ಲೇಯಿಂಗ್ XI ಇದು ಎಂಬುದು ನಾನು ಅಂದುಕೊಂಡಿರಲಿಲ್ಲ. ಖಲೀಲ್ ಇಂಜುರಿಗೆ ತುತ್ತಾದರು. ಅವರು ತಂಡಕ್ಕೆ ಕಮ್ಬ್ಯಾಕ್ ಮಾಡಿದರೆ ಇನ್ನೂ ಬಲಿಷ್ಠವಾಗುತ್ತೇವೆ. ಪೋವೆಲ್ಗೆ ಫಿನಿಶರ್ ಸ್ಥಾನ ನೀಡಿದ್ದೆವೆ. ಆದರೆ, ಇಂದು ಬೇಗನೆ ವಿಕೆಟ್ ಕಳೆದುಕೊಂಡಿದ್ದರಿಂದ ಸ್ಥಿತಿ ಬದಲಾಯಿತು. ಪೋವೆಲ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನಮ್ಮ ಗೇಮ್ ಪ್ಲಾನ್ ಇನ್ನಷ್ಟು ಉತ್ತಮವಾಗಿರಬೇಕು. ಇದರಲ್ಲಿ ಬದಲಾವಣೆ ಮಾಡಬೇಕಿದೆ. ಪಂದ್ಯದ ಕೊನೆಯ ಓವರ್ ಕುಲ್ದೀಪ್ ಯಾದವ್ಗೆ ಕೊಡುವ ಬಗ್ಗೆ ಪ್ಲಾನ್ ಇತ್ತು. ಆದರೆ, ಆ ಹೊತ್ತಿಗೆ ಚೆಂಡು ಸಂಪೂರ್ಣ ಒದ್ದೆಯಾಗಿತ್ತು. ಹೀಗಾಗಿ ವೇಗಿಗಳಿಗೆ ನೀಡಿದೆ. ಆದರೆ, ಅದು ಅಂದುಕೊಂಡ ರೀತಿ ಕಾರ್ಯರೂಪಕ್ಕೆ ಬರಲಿಲ್ಲ,” ಎಂದು ಹೇಳಿದ್ದಾರೆ.
DC vs KKR: ಬರೋಬ್ಬರಿ 8 ಆಟಗಾರರಿಗೆ ಬೌಲಿಂಗ್ ನೀಡಿದ ಶ್ರೇಯಸ್: ಆದರೂ ಗೆಲ್ಲಲಿಲ್ಲ ಕೆಕೆಆರ್