ಒಂದೇ ಮ್ಯಾಚ್​ನಲ್ಲಿ ಬರೋಬ್ಬರಿ 34 ದಾಖಲೆ ಬರೆದ ಶುಭ್​ಮನ್ ಗಿಲ್

Shubman Gill Records: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಶುಭ್​ಮನ್ ಗಿಲ್ ಬರೋಬ್ಬರಿ 34 ದಾಖಲೆಗಳನ್ನು ಬರೆದಿದ್ದಾರೆ. ಅದು ಕೂಡ ತನ್ನ 25ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಈ ದಾಖಲೆಗಳೊಂದಿಗೆ ಗಿಲ್ ನಾಯಕನಾಗಿ ಶುಭಾರಂಭ ಮಾಡಿರುವುದು ವಿಶೇಷ.

ಒಂದೇ ಮ್ಯಾಚ್​ನಲ್ಲಿ ಬರೋಬ್ಬರಿ 34 ದಾಖಲೆ ಬರೆದ ಶುಭ್​ಮನ್ ಗಿಲ್
Shubman Gill

Updated on: Jul 08, 2025 | 8:34 AM

ಎಡ್ಜ್​ಬಾಸ್ಟನ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿತು. ಈ ಭರ್ಜರಿ ಗೆಲುವಿನ ರೂವಾರಿ ಶುಭ್​ಮನ್ ಗಿಲ್. ಏಕೆಂದರೆ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 269 ರನ್ ಬಾರಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್​ನಲ್ಲಿ 161 ರನ್​ ಕಲೆಹಾಕಿದರು. ಈ ಮೂಲಕ ಭಾರತ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ  ಗಿಲ್ ಹಲವು ದಾಖಲೆಗಳನ್ನು ಬರೆದಿರುವುದು ವಿಶೇಷ. ಆ ದಾಖಲೆಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

  1. ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್‌ ಪಂದ್ಯದಲ್ಲಿ 400, ಏಕದಿನದಲ್ಲಿ 200, ಟಿ20ಐನಲ್ಲಿ 100 ರನ್ ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಶುಭ್​ಮನ್ ಗಿಲ್ ಪಾಲಾಗಿದೆ. (ಟೆಸ್ಟ್‌ 430, ಏಕದಿನದಲ್ಲಿ 208, ಟಿ20ಐನಲ್ಲಿ 126*)
  2. ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಒಟ್ಟು ಸ್ಕೋರ್ ದಾಖಲೆ ಕೂಡ ಗಿಲ್ ಹೆಸರಿಗೆ ಸೇರ್ಪಡೆಯಾಗಿದೆ. (430 ರನ್ಸ್​)
  3. ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ರೆಕಾರ್ಡ್ ಕೂಡ ಶುಭ್​ಮನ್ ಗಿಲ್ ಪಾಲಾಗಿದೆ. (430 ರನ್ಸ್)
  4. ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಕೂಡ ಶುಭ್​ಮನ್ ಗಿಲ್. (430 ರನ್ಸ್)
  5.  ಟೆಸ್ಟ್‌ನಲ್ಲಿ  ಗರಿಷ್ಠ  ವೈಯಕ್ತಿಕ ಸ್ಕೋರ್ ಕಲೆಹಾಕಿದ ನಾಯಕನೆಂಬ ಹೆಗ್ಗಳಿಕೆಗೂ ಶುಭ್​ಮನ್ ಗಿಲ್ ಪಾತ್ರರಾಗಿದ್ದಾರೆ. (269 ರನ್ಸ್)
  6. SENA ದೇಶಗಳಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯನ ದಾಖಲೆ ಕೂಡ ಗಿಲ್ ಪಾಲಾಗಿದೆ. (269 ರನ್ಸ್) (SENA = ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ)
  7. ಟೆಸ್ಟ್ ಪಂದ್ಯವೊಂದರಲ್ಲಿ ನಾಲ್ಕು ಶತಕಗಳ ಭಾಗವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 200+ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 100+ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.
  8. ಎಡ್ಜ್‌ಬಾಸ್ಟನ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ 50+ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
  9. ಬರ್ಮಿಂಗ್​ಹ್ಯಾಮ್​ನಲ್ಲಿ  ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ 10ನೇ ಆಟಗಾರ ಶುಭ್​​ಮನ್ ಗಿಲ್. (269 ರನ್ಸ್)
  10. ಎಡ್ಜ್​ಬಾಸ್ಟನ್​ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಗಳಿಸಿದ ಗರಿಷ್ಠ ಸ್ಕೋರ್ ದಾಖಲೆ ಸಹ ಗಿಲ್ ಪಾಲಾಗಿದೆ. (269 ರನ್ಸ್​)
  11. ಮೊದಲ ಎರಡು ಟೆಸ್ಟ್‌ಗಳಲ್ಲಿ ಅತ್ಯಧಿಕ ರನ್ ಗಳಿಸಿದ ನಾಯಕ ಶುಭ್​ಮನ್ ಗಿಲ್. (585 ರನ್ಸ್)
  12. ಟೆಸ್ಟ್ ಪಂದ್ಯವೊಂದರಲ್ಲಿ 400-ರನ್‌ಗಳನ್ನು ಕಲೆಹಾಕಿದ ಮೊದಲ ಭಾರತೀಯ ಗಿಲ್. (269 & 161 ರನ್ಸ್)
  13. ಎಡ್ಜ್‌ಬಾಸ್ಟನ್​ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಭಾರತೀಯ ನಾಯಕ ಶುಭ್​ಮನ್ ಗಿಲ್.
  14. ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯ ಬ್ಯಾಟರ್ ಶುಭ್​ಮನ್ ಗಿಲ್. (585 ರನ್ಸ್)
  15. ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ನಾಯಕನೆಂಬ ದಾಖಲೆ ಕೂಡ ಗಿಲ್ ಪಾಲಾಗಿದೆ. (8 ಸಿಕ್ಸರ್‌ಗಳು)
  16. ವಿದೇಶದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಶುಭ್​ಮನ್ ಗಿಲ್.
  17. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್​ಗಳಿಸಿದ ಎರಡನೇ ಬ್ಯಾಟರ್​ ಗಿಲ್. (430)
  18. ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಎರಡನೇ ಅತಿ ಹೆಚ್ಚು ಬೌಂಡರಿ ಬಾರಿಸಿದ ವಿಶ್ವ ದಾಖಲೆ ಶುಭ್​ಮನ್ ಗಿಲ್ ಹೆಸರಿಗೆ ಸೇರ್ಪಡೆಯಾಗಿದೆ. (54 ಫೋರ್)
  19. ಒಂದೇ ಟೆಸ್ಟ್‌ನಲ್ಲಿ ಎರಡು ಬಾರಿ 150+ ಸ್ಕೋರ್‌ಗಳನ್ನು ಗಳಿಸಿದ ವಿಶ್ವ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.
  20. ಇಂಗ್ಲೆಂಡ್‌ನಲ್ಲಿ ಅವಳಿ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
  21. ಇಂಗ್ಲೆಂಡ್‌ನಲ್ಲಿ  3 ಶತಕ ಸಿಡಿಸಿದ 3ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.  (4 ಇನ್ನಿಂಗ್ಸ್‌ಗಳಲ್ಲಿ 3*)
  22. ಟೆಸ್ಟ್ ಪಂದ್ಯದಲ್ಲಿ 250+ & 100+ ಗಳಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ದಾಖಲೆಯನ್ನು ಗಿಲ್ ನಿರ್ಮಿಸಿದ್ದಾರೆ.
  23. ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಬಾರಿಸಿದ 3ನೇ ಭಾರತೀಯ ನಾಯಕ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
  24. ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ 3ನೇ ಕಿರಿಯ ನಾಯಕ ಶುಭ್​ಮನ್ ಗಿಲ್. (25 ವರ್ಷ 291 ದಿನ)
  25. ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವಳಿ ಶತಕಗಳನ್ನು ಬಾರಿಸಿದ ವಿಶ್ವದ 3ನೇ ಕ್ಯಾಪ್ಟನ್ ಶುಭ್​ಮನ್ ಗಿಲ್.
  26. ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲೂ ದ್ವಿಶತಕಗಳನ್ನು ಬಾರಿಸಿದ ವಿಶ್ವದ 5ನೇ ಆಟಗಾರ ಗಿಲ್. (ಟೆಸ್ಟ್‌ಗಳಲ್ಲಿ 269, ODIನಲ್ಲಿ 208)
  27.  ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಬಾರಿಸಿದ 3ನೇ ಭಾರತೀಯ ನಾಯಕನೆಂಬ ದಾಖಲೆ ಗಿಲ್ ಪಾಲಾಗಿದೆ.
  28. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್​ಗಳಿಸಿದ 5ನೇ ಬ್ಯಾಟರ್ ಶುಭ್​ಮನ್ ಗಿಲ್. (269 ರನ್ಸ್)
  29. ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನಿಂದ ಗಳಿಸಿದ 7ನೇ ಅತ್ಯಧಿಕ ವೈಯಕ್ತಿಕ ಸ್ಕೋರ್​ನ ದಾಖಲೆ ಕೂಡ ಗಿಲ್ ಪಾಲಾಗಿದೆ. (269 ರನ್ಸ್)
  30. ಇಂಗ್ಲೆಂಡ್‌ನಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್‌ ಗಳಿಸಿದ 8ನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಶುಭ್​ಮನ್ ಗಿಲ್ ಬ್ಯಾಟ್​ನಿಂದ ಮೂಡಿಬಂದಿದೆ. (269 ರನ್ಸ್)
  31. ಒಂದೇ ಪಂದ್ಯದಲ್ಲಿ 200 ಮತ್ತು 100 ರನ್‌ಗಳಿಸಿದ ವಿಶ್ವ 9ನೇ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್.
  32. ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಬಾರಿಸಿದ 9ನೇ ಭಾರತೀಯ ಬ್ಯಾಟ್ಸ್‌ಮನ್ ಗಿಲ್.
  33. ವಿದೇಶಿ ಟೆಸ್ಟ್ ಪಂದ್ಯವನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ನಾಯಕನೆಂಬ (25 ವರ್ಷ 301 ದಿನ) ದಾಖಲೆ ಶುಭ್​ಮನ್ ಗಿಲ್ ಪಾಲಾಗಿದೆ.
  34. 34. SENA ಟೆಸ್ಟ್‌ಗಳಲ್ಲಿ POTM ಗೆದ್ದ 8ನೇ ಭಾರತೀಯ ನಾಯಕನೆಂಬ ಹಿರಿಮೆಗೂ ಶುಭ್​ಮನ್ ಗಿಲ್ ಪಾತ್ರರಾಗಿದ್ದಾರೆ.