IND vs BAN: ಟಿ20 ಸರಣಿ ವೇಳೆ ಟೀಮ್ ಇಂಡಿಯಾದ ಮೂವರಿಗೆ ವಿಶ್ರಾಂತಿ ಸಾಧ್ಯತೆ

|

Updated on: Sep 15, 2024 | 1:29 PM

India vs Bangladesh: ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಅಕ್ಟೋಬರ್ 7 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗೆ ಟೀಮ್ ಇಂಡಿಯಾದ ಮೂವರು ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ.

IND vs BAN: ಟಿ20 ಸರಣಿ ವೇಳೆ ಟೀಮ್ ಇಂಡಿಯಾದ ಮೂವರಿಗೆ ವಿಶ್ರಾಂತಿ ಸಾಧ್ಯತೆ
Team India
Follow us on

ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯಿಂದ ಟೀಮ್ ಇಂಡಿಯಾದ ಮೂವರು ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಗಮನದಲ್ಲಿಟ್ಟುಕೊಂಡು ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

ಅದರಂತೆ ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಪಂದ್ಯಗಳಿಗೆ ಶುಭ್​ಮನ್ ಗಿಲ್ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಈ ಸರಣಿಯ ವೇಳೆ ವೇಗಿಗಳಾದ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್​ಗೂ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ರಿಷಭ್ ಪಂತ್ ಈ ಸರಣಿಯಿಂದ ಹೊರಗುಳಿದರೆ ವಿಕೆಟ್​ ಕೀಪರ್ ಆಗಿ ಇಶಾನ್ ಕಿಶನ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಈ ಮೂಲಕ ನ್ಯೂಝಿಲೆಂಡ್ ವಿರುದ್ಧದ ಮಹತ್ವದ ಸರಣಿಗೂ ಮುನ್ನ ಭಾರತ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

ಭಾರತ ಮತ್ತು ಬಾಂಗ್ಲಾದೇಶ್ ಸರಣಿ ಯಾವಾಗ ಶುರು?

ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಅಕ್ಟೋಬರ್ 7 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ಭಾರತ vs ಬಾಂಗ್ಲಾದೇಶ್ ಸರಣಿ ವೇಳಾಪಟ್ಟಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಗುರುವಾರ, 19 ಸೆಪ್ಟೆಂಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಶುಕ್ರವಾರ, 27 ಸೆಪ್ಟೆಂಬರ್ 2024 9:30 AM ಕಾನ್ಪುರ
1ನೇ ಟಿ20, ಭಾರತ vs ಬಾಂಗ್ಲಾದೇಶ ಸೋಮವಾರ, 7 ಅಕ್ಟೋಬರ್ 2024 7 PM ಗ್ವಾಲಿಯರ್
2ನೇ ಟಿ20, ಭಾರತ vs ಬಾಂಗ್ಲಾದೇಶ ಗುರುವಾರ, 10 ಅಕ್ಟೋಬರ್ 2024 7 PM ದೆಹಲಿ
3ನೇ ಟಿ20, ಭಾರತ vs ಬಾಂಗ್ಲಾದೇಶ ಭಾನುವಾರ, 13 ಅಕ್ಟೋಬರ್ 2024 7 PM ಹೈದರಾಬಾದ್

ಭಾರತ vs ನ್ಯೂಝಿಲೆಂಡ್ ಸರಣಿ:

ಬಾಂಗ್ಲಾದೇಶ್ ವಿರುದ್ಧ ಸರಣಿಯ ಬಳಿಕಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯ ವೇಳಾಪಟ್ಟಿ ಇಲ್ಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಬುಧವಾರ, 16 ಅಕ್ಟೋಬರ್ 2024 9:30 AM ಬೆಂಗಳೂರು
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಗುರುವಾರ, 24 ಅಕ್ಟೋಬರ್ 2024 9:30 AM ಪುಣೆ
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಶುಕ್ರವಾರ, 1 ನವೆಂಬರ್ 2024 9:30 AM ಮುಂಬೈ