IND vs BAN: ಚೆನ್ನೈನಲ್ಲಿ ರೋಹಿತ್ ಪಡೆಯ ಸಮರಾಭ್ಯಾಸ ಹೇಗಿದೆ ನೋಡಿ

IND vs BAN: ಚೆನ್ನೈನಲ್ಲಿ ರೋಹಿತ್ ಪಡೆಯ ಸಮರಾಭ್ಯಾಸ ಹೇಗಿದೆ ನೋಡಿ

ಪೃಥ್ವಿಶಂಕರ
|

Updated on:Sep 15, 2024 | 2:47 PM

IND vs BAN: ಟೀಂ ಇಂಡಿಯಾ ಟೆಸ್ಟ್ ಆರಂಭಕ್ಕೆ ವಾರಕ್ಕೂ ಮುಂಚೆಯೇ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲಿ ನಿರತವಾಗಿದೆ. ಅದರಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್​ನಲ್ಲಿ ನಿರತರಾಗಿದ್ದರೆ, ಕುಲ್​ದೀಪ್ ಯಾದವ್, ಸಿರಾಜ್, ಬೂಮ್ರಾ ಬೌಲಿಂಗ್ ಪ್ರಾಕ್ಟೀಸ್ ನಡೆಸಿದ್ದಾರೆ. ಅದರ ವಿಡಿಯೋವನ್ನು ಇದೀಗ ಬಿಸಿಸಿಐ ಶೇರ್ ಮಾಡಿದೆ.

ಭಾರತ ತಂಡ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಸಿದ್ಧವಾಗಿದೆ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಟೆಸ್ಟ್ ಆರಂಭಕ್ಕೆ ವಾರಕ್ಕೂ ಮುಂಚೆಯೇ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲಿ ನಿರತವಾಗಿದೆ. ಅದರಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್​ನಲ್ಲಿ ನಿರತರಾಗಿದ್ದರೆ, ಕುಲ್​ದೀಪ್ ಯಾದವ್, ಸಿರಾಜ್, ಬೂಮ್ರಾ ಬೌಲಿಂಗ್ ಪ್ರಾಕ್ಟೀಸ್ ನಡೆಸಿದ್ದಾರೆ. ಅದರ ವಿಡಿಯೋವನ್ನು ಇದೀಗ ಬಿಸಿಸಿಐ ಶೇರ್ ಮಾಡಿದೆ.

ಬೆವರು ಹರಿಸಿದ ಟೀಂ ಇಂಡಿಯಾ

ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಆಟಗಾರರೆಲ್ಲರು ಅಭ್ಯಾಸ ನಡೆಸುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಮುಖ್ಯ ಕೋಚ್ ಗೌತಮ್ ಗಂಭೀರ್ ಸಹ ಆಟಗಾರರೊಂದಿಗೆ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಕುಲ್ದೀಪ್ ಯಾದವ್ ಮತ್ತು ಆರ್ ಅಶ್ವಿನ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರೆ, ಹೊಸ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಅವರ ಮೇಲ್ವಿಚಾರಣೆಯಲ್ಲಿ ವೇಗದ ಬೌಲರ್‌ಗಳು ಸಾಕಷ್ಟು ಅಭ್ಯಾಸ ಮಾಡಿದರು. ಈ ವೇಳೆ ಆಫ್ರಿಕನ್ ದಂತಕಥೆ ತಂಡದ ಆಟಗಾರರಿಗೆ ವಿಶೇಷ ಸಲಹೆಯನ್ನೂ ನೀಡಿದರು.

ರೋಹಿತ್-ವಿರಾಟ್ ಬ್ಯಾಟಿಂಗ್ ಅಭ್ಯಾಸ

ಚೆನ್ನೈ ಟೆಸ್ಟ್‌ಗೂ ಮುನ್ನ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಸಾಕಷ್ಟು ಬೆವರು ಸುರಿಸಿದ್ದರು. ಬಹಳ ದಿನಗಳ ನಂತರ ಕೊಹ್ಲಿ ಟೆಸ್ಟ್‌ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ 2024ರ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಟೀಂ ಇಂಡಿಯಾದ ಭಾಗವಾಗಿರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅವರು ತಂಡದಿಂದ ರಜೆ ತೆಗೆದುಕೊಂಡಿದ್ದರು. ಆದರೀಗ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡಲು ಸಂಪೂರ್ಣ ಸಿದ್ಧರಾಗಿರುವ ಕೊಹ್ಲಿ, ನೆಟ್ಸ್‌ನಲ್ಲೂ ಸಾಕಷ್ಟು ಬ್ಯಾಟಿಂಗ್‌ ಮಾಡುತ್ತಿರುವುದು ಕಂಡುಬಂದಿದೆ. ರೋಹಿತ್ ಶರ್ಮಾ ಕೂಡ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಈ ವೇಳೆ ಹಿಟ್‌ಮ್ಯಾನ್‌ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಿದರು.

Published on: Sep 15, 2024 02:45 PM