ಮತ್ತೆ ಆರ್ಸಿಬಿ ಸೇರುವ ಸುಳಿವು ನೀಡಿದ ಕೆಎಲ್ ರಾಹುಲ್; ವೈರಲ್ ವಿಡಿಯೋ ನೋಡಿ
KL Rahul: ರಾಹುಲ್ ತಮ್ಮ ಹಳೆಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವ ಬಗ್ಗೆ ಊಹಾಪೋಹಗಳೂ ಹೆಚ್ಚಾಗಿದ್ದು, ಇದೀಗ ಸ್ವತಃ ರಾಹುಲ್ ಅವರೇ ಈ ಬಗ್ಗೆ ದೊಡ್ಡ ಸುಳಿವು ನೀಡಿ ಸಂಚಲನ ಮೂಡಿಸಿದ್ದಾರೆ. ರಾಹುಲ್ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಮತ್ತೆ ಆರ್‌ಸಿಬಿಗೆ ಮರಳುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಪ್ರಸ್ತುತ ಚೆನ್ನೈನಲ್ಲಿ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ. ಆದರೆ ಈ ಎಲ್ಲದರ ನಡುವೆ, ಐಪಿಎಲ್‌ನಲ್ಲಿ ರಾಹುಲ್ ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ವಾಸ್ತವವಾಗಿ ಕಳೆದ 3 ಸೀಸನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ರಾಹುಲ್ ಮುಂದಿನ ಸೀಸನ್‌ನಲ್ಲೂ ಲಕ್ನೋ ತಂಡದಲ್ಲೇ ಉಳಿಯುತ್ತಾರಾ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಅಲ್ಲದೆ ಈ ನಡುವೆ ರಾಹುಲ್ ತಮ್ಮ ಹಳೆಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವ ಬಗ್ಗೆ ಊಹಾಪೋಹಗಳೂ ಹೆಚ್ಚಾಗಿದ್ದು, ಇದೀಗ ಸ್ವತಃ ರಾಹುಲ್ ಅವರೇ ಈ ಬಗ್ಗೆ ದೊಡ್ಡ ಸುಳಿವು ನೀಡಿ ಸಂಚಲನ ಮೂಡಿಸಿದ್ದಾರೆ. ರಾಹುಲ್ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಮತ್ತೆ ಆರ್‌ಸಿಬಿಗೆ ಮರಳುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿಗೆ ಮರಳುವ ಸುಳಿವು ನೀಡಿದ ರಾಹುಲ್
ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ರಾಹುಲ್ ಫ್ರಾಂಚೈಸಿಯನ್ನು ಬದಲಾಯಿಸುವ ಬಗ್ಗೆ ಊಹಾಪೋಹಗಳು ಆಗಿನಿಂದಲೂ ಕೇಳಿಬರುತ್ತಿವೆ. ಇದೀಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಅವರು ಆರ್‌ಸಿಬಿಗೆ ಮರಳುವ ಸುಳಿವು ನೀಡಿದ್ದಾರೆ. ಈ ವೀಡಿಯೋದಲ್ಲಿ ಅಭಿಮಾನಿಯೊಬ್ಬ ರಾಹುಲ್‌ಗೆ, ‘ಆರ್ಸಿಬಿ ಎಂದರೆ ನನಗೆ ತುಂಬ ಇಷ್ಟ. ಬಹಳ ವರ್ಷಗಳಿಂದ ನಾನು ಆರ್ಸಿಬಿಯ ದೊಡ್ಡ ಅಭಿಮಾನಿಯಾಗಿದ್ದೇನೆ. ಹೀಗಾಗಿ ನೀವು ಮತ್ತೊಮ್ಮೆ ಆರ್ಸಿಬಿ ಫ್ರಾಂಚೈಸಿಯಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾನೆ.
ಆದರೆ ಅಭಿಮಾನಿಯ ಈ ಹೇಳಿಕೆಗೆ ರಾಹುಲ್ ಮೊದಲು ಏನನ್ನೂ ಹೇಳಲಿಲ್ಲ. ಇದಾದ ನಂತರ ಅಭಿಮಾನಿ, ನೀವು ಇದಕ್ಕೆ ಪ್ರತಿಕ್ರಿಯಿಸಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ನೀವು ಮತ್ತೊಮ್ಮೆ ಆರ್‌ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾನೆ. ಈ ಬಾರಿ ಪ್ರತಿಕ್ರಿಸಿದ ರಾಹುಲ್, ‘ನಾನು ಕೂಡ ಹಾಗೆ ಆಗಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ. ಈ ಮೂಲಕ ರಾಹುಲ್, ತನಗೂ ಆರ್ಸಿಬಿ ಸೇರುವ ಇಂಗಿತವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ