ವಿರಾಟ್ ಕೊಹ್ಲಿಗೆ 100 ಕೋಟಿ ರೂ: ಶುಭ್ಮನ್ ಗಿಲ್ಗೆ ಎಷ್ಟು?
MRF ಕಂಪೆನಿಯು ಹಲವು ಬ್ಯಾಟರ್ಗಳಿಗೆ ಪ್ರಾಯೋಕತ್ವ ನೀಡಿದೆ. ಈ ಪಟ್ಟಿಯಲ್ಲಿ ಮೊದಲಿಗರು ಸಚಿನ್ ತೆಂಡೂಲ್ಕರ್. ಆ ಬಳಿಕ ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ಸ್ಟೀವ್ ವಾ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ಸೌತ್ ಆಫ್ರಿಕಾ) ಅವರ ಬ್ಯಾಟ್ಗೆ ಪ್ರಾಯೋಕತ್ವ ನೀಡಿತ್ತು. ಆ ನಂತರ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಶಿಖರ್ ಧವನ್ ಎಂಆರ್ಎಫ್ ಬ್ಯಾಟ್ನೊಂದಿಗೆ ಕಾಣಿಸಿಕೊಂಡಿದ್ದಾರೆ.

ಎಂಆರ್ಎಫ್ ಬ್ಯಾಟ್ ಎಂದರೆ ಕಣ್ಮುಂದೆ ಬರುವ ಮೊದಲ ಚಿತ್ರವೆಂದರೆ ಸಚಿನ್ ತೆಂಡೂಲ್ಕರ್. ಇದಾರ ಬಳಿಕ ಈ ಪರಂಪರೆಯನ್ನು ವಿರಾಟ್ ಕೊಹ್ಲಿ ಮುಂದುವರೆಸಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಶುಭ್ಮನ್ ಗಿಲ್. ಮದ್ರಾಸ್ ರಬ್ಬರ್ ಫ್ಯಾಕ್ಟರಿ (MRF) ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಜೊತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ ಇನ್ಮುಂದೆ ಗಿಲ್ ಬಳಸುವ ಬ್ಯಾಟ್ ಮೇಲೆ ಎಂಆರ್ಎಫ್ ಸ್ಟಿಕ್ಕರ್ ಕಾಣಿಸಿಕೊಳ್ಳಲಿದೆ.
ನ್ಯೂಝಿಲೆಂಡ್ ವಿರುದ್ಧದ ಪಂದ್ಯದವರೆಗೂ ಶುಭ್ಮನ್ ಗಿಲ್ ಸಿಯೆಟ್ ಕಂಪೆನಿಯ ಪ್ರಾಯೋಜಕತ್ವ ಹೊಂದಿರುವ ಬ್ಯಾಟ್ ಬಳಸಿದ್ದರು. ಇದೀಗ ಸಿಯೆಟ್ ಜೊತೆಗಿನ ಒಪ್ಪಂದ ಕೊನೆಗೊಂಡಿದ್ದು, ಇದರ ಬೆನ್ನಲ್ಲೇ ಎಂಆರ್ಎಫ್ ಕಂಪೆನಿಯು ಶುಭ್ಮನ್ ಗಿಲ್ ಜೊತೆ ಡೀಲ್ ಕುದುರಿಸಿದ್ದಾರೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಎಂಆರ್ಎಫ್ ಬ್ಯಾಟ್ನೊಂದಿಗೆ ಕಾಣಿಸಿಕೊಂಡಿದ್ದರು.
ಆದರೆ ಇಲ್ಲಿ ಗಿಲ್ ಜೊತೆ ಎಂಆರ್ಎಫ್ ಕಂಪೆನಿಯು ಎಷ್ಟು ಕೋಟಿಗೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಆದರೆ ಪ್ರಸ್ತುತ ಗಿಲ್ ಅವರ ಮಾರ್ಕೆಟ್ ಮೌಲ್ಯವನ್ನು ಪರಿಗಣಿಸಿದರೆ ಕೋಟಿ ಮೊತ್ತದ ಡೀಲ್ ನಡೆದಿರುವುದು ಖರೆ ಎನ್ನಬಹುದು.
ಏಕೆಂದರೆ ಈ ಹಿಂದೆ ಶುಭ್ಮನ್ ಗಿಲ್ಗೆ ಸಿಯೆಟ್ ಕಂಪೆನಿ ನೀಡಿರುವುದು 1.8 ಕೋಟಿ ರೂ.. ಅದು ಸಹ 19ನೇ ವಯಸ್ಸಿನಲ್ಲಿ ನಡೆದ ಡೀಲ್ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಅಂಡರ್-19 ಕ್ರಿಕೆಟ್ನಲ್ಲಿ ಮಿಂಚುತ್ತಿದ್ದಂತೆ ಗಿಲ್ ಅವರ ಬ್ಯಾಟ್ಗೆ ಸಿಯೆಟ್ ಕಂಪೆನಿ ಪ್ರಾಯೋಜಕತ್ವ ನೀಡಿತ್ತು.
ಇದೀಗ ಶುಭ್ಮನ್ ಗಿಲ್ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅದರಲ್ಲೂ ಕಿಂಗ್ ಕೊಹ್ಲಿಯ ನಂತರದ ಸ್ಥಾನವನ್ನು ಪ್ರಿನ್ಸ್ ರೂಪದಲ್ಲಿ ತುಂಬಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿಯೇ ಇದೀಗ ಎಂಆರ್ಎಫ್ ಕಂಪೆನಿಯು ಶುಭ್ಮನ್ ಗಿಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವಿರಾಟ್ ಕೊಹ್ಲಿಗೆ 100 ಕೋಟಿ ರೂ:
ಎಂಆರ್ಎಫ್ ಕಂಪೆನಿಯು ವಿರಾಟ್ ಕೊಹ್ಲಿಗೆ ಪಾವತಿಸಿರುವುದು ಬರೋಬ್ಬರಿ 100 ಕೋಟಿ ರೂ. ವರದಿಯಾಗಿದೆ. 2018 ರಲ್ಲಿ ನಡೆದ ಈ ಒಪ್ಪಂದದಂತೆ ಕೊಹ್ಲಿ ಕೊಹ್ಲಿ 8 ವರ್ಷಗಳ ಕಾಲ ಎಂಆರ್ಎಫ್ ಜಾಹೀರಾತಿನ ಬ್ಯಾಟ್ನಲ್ಲಿ ಕಾಣಿಸಿಕೊಳ್ಳಬೇಕು. ಅದರಂತೆ ಇದೀಗ ಕಿಂಗ್ ಕೊಹ್ಲಿ ಎಂಆರ್ಎಫ್ ಬ್ಯಾಟ್ನೊಂದಿಗೆ 8ನೇ ವರ್ಷ ಆಡುತ್ತಿದ್ದಾರೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
ವಿರಾಟ್ ಕೊಹ್ಲಿ ಜೊತೆಗಿನ ಈ ಒಪ್ಪಂದ ಕೊನೆಗೊಳ್ಳುವ ಮುನ್ನವೇ ಎಂಆರ್ಎಫ್ ಕಂಪೆನಿಯು ಶುಭ್ಮನ್ ಗಿಲ್ಗೆ ಪ್ರಾಯೋಜಕತ್ವ ನೀಡಿದೆ. ಈಗಾಗಲೇ ಕೊಹ್ಲಿಗೆ ನೂರು ಕೋಟಿ ರೂ. ನೀಡಿರುವ ಕಾರಣ, ಶುಭ್ಮನ್ ಗಿಲ್ ಅವರ ಪಾಯೋಜಕತ್ವದ ಮೌಲ್ಯವು 50 ಕೋಟಿ ರೂ.ಗಿಂತ ಹೆಚ್ಚಿರಲಿದೆ ಎಂದು ಬಿಸಿನೆಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಬ್ಯಾಟ್ ಪ್ರಾಯೋಜಕತ್ವದ ಮೂಲಕವೇ ಶುಭ್ಮನ್ ಗಿಲ್ ಕೋಟಿ ಕೋಟಿ ಡೀಲ್ ಕುದುರಿಸಿರುವುದಂತು ನಿಜ.