
ಭಾರತದ ಯುವ ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ತಮ್ಮ ಆಕರ್ಷಕ ಬ್ಯಾಟಿಂಗ್ನಿಂದಲ್ಲ ಎಂಬುದಷ್ಟೇ ವ್ಯತ್ಯಾಸ. ಅಂದರೆ ಈ ಬಾರಿ ಗಿಲ್ ಹೊಸ ಸಂಗಾತಿಯ ವಿಷಯದಿಂದ ಲೈಮ್ಲೈಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನಿಂದಲೂ ಗಿಲ್ ಜತೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಹೆಸರು ತಳುಕು ಹಾಕಿಕೊಂಡಿತ್ತು.
ಇದಾಗ್ಯೂ ಶುಭ್ಮನ್ ಗಿಲ್ ಎಲ್ಲೂ ಕೂಡ ತಾನು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀನಿ ಎಂದು ಬಹಿರಂಗವಾಗಿ ಹೇಳಿರಲಿಲ್ಲ. ಆದರೀಗ ಗಿಲ್ ನೀಡಿದ ಸಂದರ್ಶನವೊಂದರ ಹಳೆಯ ವಿಡಿಯೋ ತುಣುಕು ವೈರಲ್ ಆಗಿದೆ.
ಈ ಸಂದರ್ಶನದಲ್ಲಿ ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂಬ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಗಿಲ್ ಅಡ್ಡ ಗೋಡೆ ಮೇಲೆ ‘ಪ್ರೀತಿ’ ಇಟ್ಟಿರುವುದೇ ವಿಶೇಷ. ಅಂದರೆ ಅತ್ತ ಇಲ್ಲ ಅಂದಿಲ್ಲ. ಇತ್ತ ಹೌದು ಕೂಡ ಅಂದಿಲ್ಲ. ಬದಲಾಗಿ ಬಹುಶಃ ಮಾಡುತ್ತಿರಬಹುದು ಎಂಬಾರ್ಥದಲ್ಲಿ ಉತ್ತರ ನೀಡಿದ್ದಾರೆ.
ಈ ಮೂಲಕ ಶುಭ್ಮನ್ ಗಿಲ್ ಪರೋಕ್ಷವಾಗಿ ಸಾರಾ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಅಭಿಮಾನಿಗಳಿಂದಲೂ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
शुभमन गिल सारा का “सारा” है यही लग रहा 🤣 pic.twitter.com/MemagDtSKZ
— Anshika Singh Yadav (@Anshika_in) February 25, 2025
ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ಶುಭ್ಮನ್ ಗಿಲ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 101 ರನ್ ಬಾರಿಸಿದ್ದ ಗಿಲ್, ಪಾಕಿಸ್ತಾನ್ ವಿರುದ್ಧ 46 ರನ್ಗಳ ಕೊಡುಗೆ ನೀಡಿದ್ದರು.
ಇದನ್ನೂ ಓದಿ: ICC ODI Rankings: ಟಾಪ್-10 ನಲ್ಲಿ ಟೀಮ್ ಇಂಡಿಯಾದ ನಾಲ್ವರು ಬ್ಯಾಟರ್ಗಳು
ಈ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಶುಭ್ಮನ್ ಗಿಲ್ ವೈಯುಕ್ತಿಕ ವಿಷಯದಿಂದ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ.
Published On - 2:30 pm, Thu, 27 February 25