IND vs NZ: 19 ಬೌಂಡರಿ, ಬರೋಬ್ಬರಿ 9 ಸಿಕ್ಸರ್; ದಾಖಲೆಯ ದ್ವಿಶತಕ ಸಿಡಿಸಿದ ಶುಭ್ಮನ್ ಗಿಲ್!
Shubman Gill: ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಮ್ಮ ಏಕದಿನ ವೃತ್ತಿಜೀವನದ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್ನಲ್ಲಿ ನಡೆಯುತ್ತಿರುವ (India Vs New Zealand) 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ತಮ್ಮ ಏಕದಿನ ವೃತ್ತಿಜೀವನದ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 145 ಎಸೆತಗಳನ್ನು ಎದುರಿಸಿದ 23 ವರ್ಷದ ಗಿಲ್ 8 ಸಿಕ್ಸರ್, 19 ಬೌಂಡರಿಗಳ ಸಹಿತ ದ್ವಿಶತ ಬಾರಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.ಅಂತಿಮವಾಗಿ ಗಿಲ್ ಅವರ ಭರ್ಜರಿ 208 ರನ್ಗಳ ನೆರವಿನಿಂದಾಗಿ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 349 ರನ್ಗಳಿಸಿದೆ.
ಭಾರತ ಪರ ಅತಿ ಹೆಚ್ಚು ಮೂರು ದ್ವಿಶತಕ ಸಿಡಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲು ಈ ಸಾಧನೆ ಮಾಡಿದ್ದು ಸಚಿನ್ ತೆಂಡೂಲ್ಕರ್. ಅವರ ಬಳಿಕ ಸೆಹ್ವಾಗ್ ದ್ವಿಶತಕ ಸಿಡಿಸಿದರೆ, ಕಳೆದ ಬಾಂಗ್ಲಾ ಪ್ರವಾಸದಲ್ಲಿ ಇಶಾನ್ ಕಿಶನ್ ಕೂಡ ದ್ವಿಶತಕ ಸಿಡಿಸಿ ಮಿಂಚಿದ್ದರು.
?.?.?.
?????? ??????? ???
Take a bow, @ShubmanGill ??#INDvNZ pic.twitter.com/wwvQslGTxb
— BCCI (@BCCI) January 18, 2023
ಶುಭ್ಮನ್ ಗಿಲ್ ದಾಖಲೆ
ಕೇವಲ 23 ವರ್ಷ, 132 ದಿನಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸುವುದರೊಂದಿಗೆ ಈ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಗಿಲ್ ಬರೆದಿದ್ದಾರೆ. ಇಶಾನ್ ಕಿಶನ್ ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ್ದರು. ಆಗ ಕಿಶನ್ ವಯಸ್ಸು 24 ವರ್ಷ, 145 ದಿನಗಳಾಗಿದ್ದವು. ಈ ಇಬ್ಬರಿಗೂ ಮುನ್ನ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 26 ವರ್ಷ, 186 ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಬಾರಿಸಿದ್ದರು.
IND vs NZ: 14 ಬೌಂಡರಿ, 2 ಸಿಕ್ಸರ್; ಸತತ ಎರಡನೇ ಏಕದಿನ ಶತಕ ಸಿಡಿಸಿದ ಶುಭಮನ್ ಗಿಲ್!
ಗಿಲ್ ದ್ವಿಶತಕದ ಹಾದಿ
ನಾಯಕ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭ್ಮನ್ ಗಿಲ್ ತಮ್ಮ ಅರ್ಧಶತಕ ಪೂರೈಸಲು 52 ಎಸೆತಗಳನ್ನು ತೆಗೆದುಕೊಂಡರು. ಇದಾದ ಬಳಿಕ 87 ಎಸೆತಗಳಲ್ಲಿ ಶತಕ ಪೂರೈಸಿದ ಗಿಲ್, ಮುಂದಿನ 122 ಎಸೆತಗಳಲ್ಲಿ 150 ರನ್ ಪೂರ್ಣಗೊಳಿಸಿದರು. ಆ ಬಳಿಕ ಮತ್ತಷ್ಟು ಉಗ್ರಾವತಾರ ತಾಳಿದ ಗಿಲ್ ಕೇವಲ 145 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಅಂತಿಮವಾಗಿ149 ಎಸೆತಗಳಲ್ಲಿ 208 ರನ್ ಚಚ್ಚಿದ ಗಿಲ್, 140ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ, 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಹೊಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Wed, 18 January 23