India vs New Zealand 1st Test: ಟೆಸ್ಟ್ ಆರಂಭಕ್ಕೂ ಮುನ್ನ ಭಾರತದಲ್ಲಿ ದೊಡ್ಡ ಬೆಳವಣಿಗೆ: ಮಧ್ಯಮ ಕ್ರಮಾಂಕ ಫುಲ್ ಚೇಂಜ್
Shubman Gill: ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಯುವ ಭರವಸೆಯ ಆಟಗಾರ ಶುಭ್ಮನ್ ಗಿಲ್‌ಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ.
ನ್ಯೂಜಿಲೆಂಡ್ (New Zealand Cricket Team) ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿ ವಿಜಯೋತ್ಸವದಲ್ಲಿರುವ ಭಾರತ ತಂಡ (India vs New Zealand Test) ಸದ್ಯ ಟೆಸ್ಟ್ ಸರಣಿಗೆ ಸಜ್ಜಾಗಬೇಕಿದೆ. ಹೆಚ್ಚು ದಿನಗಳ ಕಾಲ ವಿರಾಮ ನೀಡದೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ನವೆಂಬರ್ 25 ರಂದು ಕಾನ್ಪುರದಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲೇ ಈ ಮೊದಲ ಟೆಸ್ಟ್ ಪಂದ್ಯ ಕೂಡ ಜರುಗಲಿದೆ. ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ರಿಷಭ್ ಪಂತ್ (Rishabh Pant) ಅಲಭ್ಯರಾಗಿದ್ದಾರೆ. ಅಜಿಂಕ್ಯಾ ರಹಾನೆ (Ajinkya Raha) ತಂಡವನ್ನು ಮುನ್ನಡೆಸಲಿದ್ದು, ಕೊಹ್ಲಿ ಅಂತಿಮ 2ನೇ ಟೆಸ್ಟ್ಗೆ ತಂಡ ಸೇರಿಕೊಳ್ಳಲಿದ್ದಾರೆ. ಹೀಗಿರುವಾಗ ಭಾರತ ತಂಡದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ದೊಡ್ಡ ಬೆಳವಣಿಗೆ ಆಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಈವರೆಗೆ ಆಡದ ಆಟಗಾರ ಸ್ಥಾನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಹೌದು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯುವ ಭರವಸೆಯ ಆಟಗಾರ ಶುಭ್ಮನ್ ಗಿಲ್‌ಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ. ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್‌ರನ್ನ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲು ಟೀಂ ಇಂಡಿಯಾ ಆಡಳಿತ ಮಂಡಳಿ ಮುಂದಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ಶುಭ್ಮನ್ ಗಿಲ್ ದ್ರಾವಿಡ್ ಗರಡಿಯಿಂದ ಬಂದಂತಹ ಪ್ರತಿಭೆ. ಅಂಡರ್-19 ತಂಡದ ಮೂಲಕ ತಮ್ಮ ಚಾಪನ್ನ ಮೂಡಿಸಿ ಐಪಿಎಲ್‌ಗೆ ಕಾಲಿಟ್ಟ ಗಿಲ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆತನನ್ನ ಮಧ್ಯಮ ಕ್ರಮಾಂಕದಲ್ಲಿ ಆಡುವಂತೆ ಮನವೊಲಿಸಲಾಗಿದೆಯಂತೆ. ಈ ಬಗ್ಗೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಜತಿನ್ ಪರಾಂಜಪೆ ಮಾತನಾಡಿದ್ದು, “ತಂಡದ ಆಯ್ಕೆಯಲ್ಲಿ ಯಾವಾಗಲೂ ಒಂದೇ ರೀತಿಯಲ್ಲಿ ಇರುವುದು ಸಹಾಯ ಮಾಡುವುದಿಲ್ಲ ಎಂದು ನಾನು ಯಾವಾಗಲೂ ನಂಬುತ್ತೇನೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಗಿಲ್ ಆಡುವುದು ತಂಡಕ್ಕೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಿರ್ದಿಷ್ಟ ಪ್ರಮಾಣದ ಫ್ಲೆಕ್ಸಿಬಲಿಟಿ ಯಾವಾಗಲೂ ಸಹಾಯ ಮಾಡುತ್ತದೆ” ಎಂದು ಪರಾಂಜಪೆ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಭಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ (ಎರಡನೇ ಟೆಸ್ಟ್ಗೆ ಲಭ್ಯ), ರೋಹಿತ್ ಶರ್ಮಾ, ರಿಷಭ್ ಪಂತ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಶಾರ್ದೂಲ್ ಠಾಕೂರ್ ವಿಶ್ರಾಂತಿಗಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಲಿದೆ. ಇದರ ಜೊತೆಗೆ ಸೂರ್ಯಕುಮಾರ್ ಯಾದವ್ ಹೊಸದಾಗಿ ಟೆಸ್ಟ್ ತಂಡ ಸೇರಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:
ಅಜಿಂಕ್ಯಾ ರಹಾನೆ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ (ಉಪ – ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.
India vs New Zealand: ಇಶಾನ್ ಕಿಶನ್ ಮಾಡಿದ ರನೌಟ್ ಕಂಡು ಫೀಲ್ಡಿಂಗ್ ಕೋಚ್ಗೆ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ
India vs New Zealand Test: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತದ ಈ 3 ಆಟಗಾರರಿಗೆ ಕೊನೇ ಚಾನ್ಸ್
(Shubman Gill to bat in the middle-order in the upcoming India vs New Zealand Test series)