India vs New Zealand Test: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತದ ಈ 3 ಆಟಗಾರರಿಗೆ ಕೊನೇ ಚಾನ್ಸ್

India vs New Zealand: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿ ಟೀಮ್ ಇಂಡಿಯಾದಲ್ಲಿರುವ ಕೆಲ ಆಟಗಾರರಿಗೆ ಮುಖ್ಯವಾಗಿದೆ. ಪ್ರಮುಖವಾಗಿ ಈ ಮೂವರು ಆಟಗಾರರ ಕ್ರಿಕೆಟ್ ಭವಿಷ್ಯ ಈ ಸರಣಿ ಮೇಲೆ ನಿಂತಿದೆ.

India vs New Zealand Test: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತದ ಈ 3 ಆಟಗಾರರಿಗೆ ಕೊನೇ ಚಾನ್ಸ್
ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಇದ್ದು, ಹೀಗಾಗಿ ರೋಹಿತ್ ಶರ್ಮಾ ಅಲಭ್ಯತೆಯ ನಡುವೆಯೂ ತಂಡದ ಅನುಭವಿ ಆಟಗಾರರು ಸೆಂಚುರಿಯನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಬಹುದು.
Follow us
TV9 Web
| Updated By: Vinay Bhat

Updated on: Nov 23, 2021 | 9:35 AM

ಟಿ20 ಗುಂಗಿನಿಂದ ಹೊರಬಂದಿರುವ ಟೀಮ್ ಇಂಡಿಯಾ (Team India) ಟೆಸ್ಟ್ ಕ್ರಿಕೆಟ್​ಗೆ ಮತ್ತೆ ಮರಳುತ್ತಿದೆ. ಇಂಗ್ಲೆಂಡ್ ವಿರುದ್ಧದ ಅಪೂರ್ಣ ಟೆಸ್ಟ್ ಸರಣಿಯ ಬಳಿಕ ಭಾರತ ಈಗ ತವರಿನಲ್ಲಿ ನ್ಯೂಜಿಲೆಂಡ್ (India vs New Zealad) ವಿರುದ್ಧ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿದೆ. ಇದೇ ನವೆಂಬರ್ ನವೆಂಬರ್ 25 ರಿಂದ ಕಾನ್ಪುರದಲ್ಲಿ ಇಂಡೋ- ಕಿವೀಸ್ ನಡುವಣ ಮೊದಲ ಟೆಸ್ಟ್ (India vs New Zealand Test) ಪಂದ್ಯ ಆರಂಭವಾಗಲಿದೆ. ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat kohli) ವಿಶ್ರಾಂತಿ ಪಡೆದಿರುವ ಕಾರಣ ಭಾರತ ಟೆಸ್ಟ್‌ ತಂಡದ ನಾಯಕತ್ವದ ಜವಾಬ್ದಾರಿಯನ್ನು ಅಜಿಂಕ್ಯಾ ರಹಾನೆ (Ajinkya Rahane) ಹೊತ್ತಿದ್ದಾರೆ. ಉಪ ನಾಯಕನ ಪಟ್ಟ ಚೇತೇಶ್ವರ್ ಪೂಜಾರ (Cheteshwar Pujara) ಅವರಿಗೆ ಸಿಕ್ಕಿದೆ. ಈ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತದಲ್ಲಿನ ಕೆಲ ಆಟಗಾರರಿಗೆ ಮುಖ್ಯವಾಗಿದೆ. ಪ್ರಮುಖವಾಗಿ ಈ ಮೂವರು ಆಟಗಾರರ ಕ್ರಿಕೆಟ್ ಭವಿಷ್ಯ ಈ ಸರಣಿ ಮೇಲೆ ನಿಂತಿದೆ.

ವೃದ್ದಿಮಾನ್ ಸಾಹ: 2010 ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ವೃದ್ದಿಮಾನ್ ಸಾಹ ಈವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇವರ ಜಾಗಕ್ಕೆ ರಿಷಭ್ ಪಂತ್ ಆಯ್ಕೆಯಾದರು. ಪಂತ್ ಅನೇಕ ಬಾರಿ ಭಾರತಕ್ಕೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ, ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಸಾಹ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬೇಕಾದರೆ ಈ ಸರಣಿಯಲ್ಲಿ ಸಾಹ ಅವರಿಂದ ದೊಡ್ಡ ಇನ್ನಿಂಗ್ಸ್ ಬರಲೇಬೇಕಿದೆ. ಸಾಹ ಈ ಬಾರಿಯೂ ವಿಫಲರಾದರೆ ತಂಡದಿಂದ ಹೊರಗುಳಿಯುವುದು ಖಚಿತ. ಇವರ ಜಾಗಕ್ಕೆ ಕೆಎಸ್ ಭರತ್ ಕೂಡ ಕಾದುಕುಳಿತಿದ್ದಾರೆ.

ಚೇತೇಶ್ವರ್ ಪೂಜಾರ: ಮೊದಲ ಟೆಸ್ಟ್​ನಿಂದ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಕೊಹ್ಲಿ ಅವರ ಅಲಭ್ಯತೆಯಲ್ಲಿ ತಂಡದ ರನ್ ಗತಿಯನ್ನು ಏರಿಸುವ ಜವಾಬ್ದಾರಿ ಚೇತೇಶ್ವರ್ ಪೂಜಾರ ಮೇಲಿದೆ. ಕಳೆದ ಕೆಲವು ಸಮಯದಿಂದ ಪೂಜಾರ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಜನವರಿ 2019ರ ಬಳಿಕ ಇವರ ಕಡೆಯಿಂದ ಒಂದೇ ಒಂದು ಶತಕ ಕೂಡ ಬಂದಿಲ್ಲ. ಇವರ ಜಾಗ ತುಂಬಲು ಟೀಮ್ ಇಂಡಿಯಾದಲ್ಲಿ ಅನೇಕ ಯುವ ಆಟಗಾರರು ಕಾದು ಕುಳಿತಿದ್ದಾರೆ. ಹೀಗಾಗಿ ಈ ಸರಣಿಯಲ್ಲೂ ಇವರು ವೈಫಲ್ಯ ಅನುಭವಿಸಿದರೆ ಗೇಟ್ ಪಾಸ್ ಗ್ಯಾರಂಟಿ.

ಅಜಿಂಕ್ಯಾ ರಹಾನೆ: ಮೊದಲ ಟೆಸ್ಟ್​ಗೆ ವಿರಾಟ್ ಕೊಹ್ಲಿ ಇಲ್ಲದ ಕಾರಣ ರಹಾನೆ ಅವರು ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಕೊನೇ 15 ಟೆಸ್ಟ್ ಪಂದ್ಯಗಳಲ್ಲಿ ಇವರು ಗಳಿಸಿರುವುದು ಕೇವಲ 644 ರನ್​ಗಳನ್ನಷ್ಟೆ. ಇವರ ಕಡೆಯಿಂದಲೂ ದೊಡ್ಡ ಇನ್ನಿಂಗ್ಸ್​ನ ಅಗತ್ಯವಿದೆ. ಅಲ್ಲದೆ ನಾಯಕನ ಜವಾಬ್ದಾರಿಯಲ್ಲಿರುವ ಕಾರಣ ಪಂದ್ಯವನ್ನು ಗೆಲ್ಲಿಸಿ ಕೊಡಬೇಕಾದ ಒತ್ತಡ ಕೂಡ ಇವರ ಮೇಲಿದೆ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ರಹಾನೆ ಕಳಪೆ ಪ್ರದರ್ಶನದಿಂದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರಿಗೆ ಸರಿಯಾದ ಉತ್ತರ ಕೊಟ್ಟರೆ ಮಾತ್ರ ತಂಡದಲ್ಲಿ ಅವಕಾಶ.

IPL 2022 Auction: ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್​ನ ಬಹುದೊಡ್ಡ ನಿರ್ಧಾರ ರಿವೀಲ್ ಮಾಡಿದ ಆರ್. ಅಶ್ವಿನ್

Gautam Gambhir: ಟೀಮ್ ಇಂಡಿಯಾದಲ್ಲಿ ಈತ ಇನ್ನೂ ಸ್ಥಾನ ಪಡೆದಿರುವುದು ಅದೃಷ್ಟವೇ ಸರಿ ಎಂದ ಗೌತಮ್ ಗಂಭೀರ್

(India vs New Zealand Test series is the last chance for Pujara Saha and Ajinkya Rahane)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್