BCCI: ಬಿಸಿಸಿಐ ಬಿಗ್​ಬಾಸ್ ಹುದ್ದೆಗೆ ಸ್ಪರ್ಧಿಸಲು ಗಂಗೂಲಿ ಹಿಂದೇಟು..! ಕನ್ನಡಿಗನಿಗೆ ಒಲಿಯುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ?

| Updated By: ಪೃಥ್ವಿಶಂಕರ

Updated on: Oct 07, 2022 | 9:45 PM

BCCI: ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐನ ಮುಂದಿನ ಅಧ್ಯಕ್ಷರ ರೇಸ್‌ನಲ್ಲಿ ಇಬ್ಬರು ಸ್ಪರ್ಧಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮಾಜಿ ವಿಶ್ವಕಪ್ ತಂಡದ ಸದಸ್ಯ ರೋಜರ್ ಬೆನ್ನಿ, ಇನ್ನೊಬ್ಬರು ಪ್ರಸ್ತುತ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ.

BCCI: ಬಿಸಿಸಿಐ ಬಿಗ್​ಬಾಸ್ ಹುದ್ದೆಗೆ ಸ್ಪರ್ಧಿಸಲು ಗಂಗೂಲಿ ಹಿಂದೇಟು..! ಕನ್ನಡಿಗನಿಗೆ ಒಲಿಯುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ?
Ganguly, Roger Binny
Follow us on

ಬಿಸಿಸಿಐನಲ್ಲಿ (BCCI) ತನ್ನ ಹುದ್ದೆಗೆ ಧಕ್ಕೆ ಬರುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್​ ಮೊರೆ ಹೋಗಿ, ಜಯಶೀಲರಾಗುವುದರಲ್ಲಿ ಯಶಸ್ವಿಯಾಗಿದ್ದ ಟೀಂ ಇಂಡಿಯಾದ (Team India) ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಅಕ್ಟೋಬರ್ 18 ರಂದು ನಡೆಯಲಿರುವ ಬಿಸಿಸಿಐ ಅಧ್ಯಕ್ಷ ಚುನಾವಣೆಯಲ್ಲಿ ಸೌರವ್ ಗಂಗೂಲಿ ಸ್ಪರ್ಧಿಸುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮ ದೈನಿಕ್ ಜಾಗರಣ್ ಈ ಕುರಿತು ಲೇಖನವನ್ನು ಪ್ರಕಟಿಸಿದೆ. ಜೊತೆಗೆ ಮಾಧ್ಯಮದ ಮೂಲಗಳ ಪ್ರಕಾರ, ಮಂಡಳಿಯ ಮೆಗಾ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು, ಈ ಪೈಕಿ ಸೌರವ್ ಅವರು ಚುನಾವಣೆಯಲ್ಲಿ ಭಾಗವಹಿಸದಿರುವುದು ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ.

ಬಿಸಿಸಿಐ ಆಡಳಿತ ಮಂಡಳಿ ಸಭೆ ಸೇರಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದೆ. ಬಿಸಿಸಿಐ ಅಧ್ಯಕ್ಷ ಗಂಗೂಲಿ, ಕಾರ್ಯದರ್ಶಿ ಜೇಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮ್ಮಲ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಚಾರಗಳಲ್ಲಿ ಒಂದು, ಅಕ್ಟೋಬರ್ 18 ರಂದು ನಡೆಯಲಿರುವ ಬಿಸಿಸಿಐ ಅಧ್ಯಕ್ಷರ ಚುನಾವಣೆಯಲ್ಲಿ ಗಂಗೂಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂಬುದಾಗಿದೆ. ಆದರೆ ಜೈ ಶಾ ಮತ್ತೊಮ್ಮೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹಾಗಾಗಿ ಒಂದು ವೇಳೆ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಮುಂದಿನ ಅಧ್ಯಕ್ಷರು ಯಾರು? ಇದು ಎಲ್ಲರಲ್ಲೂ ಮೂಡುವ ಪ್ರಶ್ನೆಯಾಗಿದೆ. ಈಗಾಗಲೇ ಈ ಪ್ರಶ್ನೆಗೆ ಕೆಲವು ಹೆಸರುಗಳ ಉತ್ತರ ಸಿಕ್ಕಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐನ ಮುಂದಿನ ಅಧ್ಯಕ್ಷರ ರೇಸ್‌ನಲ್ಲಿ ಇಬ್ಬರು ಸ್ಪರ್ಧಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮಾಜಿ ವಿಶ್ವಕಪ್ ತಂಡದ ಸದಸ್ಯ ರೋಜರ್ ಬೆನ್ನಿ, ಇನ್ನೊಬ್ಬರು ಪ್ರಸ್ತುತ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ. ಇಬ್ಬರಲ್ಲಿ ಒಬ್ಬರು ಮುಂದಿನ ಬಿಸಿಸಿಐ ಅಧ್ಯಕ್ಷರಾದರೆ, ಮತ್ತೊಬ್ಬರು ಐಪಿಎಲ್ ಅಧ್ಯಕ್ಷರಾಗಲಿದ್ದಾರೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ. 2023 ರ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಗಂಗೂಲಿ ಅವರನ್ನು ICC ತನ್ನ ಆಡಳಿತ ಮಂಡಳಿಯ ಭಾಗವಾಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಆದರೆ ಈ ಎಲ್ಲಾ ವದಂತಿಗಳು ಕೇವಲ ಊಹಾತ್ಮಕವಾಗಿದ್ದು, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಾದರೆ ಅಧಿಕೃತ ಘೋಷಣೆಗೆ ಕಾಯಲೇಬೇಕು.

Published On - 9:43 pm, Fri, 7 October 22