ಟಿ20 ವಿಶ್ವಕಪ್ ಫೈನಲ್ಗಾಗಿ (T20 World Cup 2021) ವೇದಿಕೆ ಸಿದ್ಧವಾಗಿದೆ. ದುಬೈನಲ್ಲಿ ಇಂದು (ನ.14) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ (Australia vs New Zealand) ಮುಖಾಮುಖಿಯಾಗಲಿದೆ. ಉಭಯ ತಂಡಗಳಿಗೂ ಇದು ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ. ಹೀಗಾಗಿ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇತ್ತ ಈ ರೋಚಕ ಹಣಾಹಣಿಯಲ್ಲಿ ಗೆಲ್ಲುವ ಫೇವರೇಟ್ ತಂಡ ಯಾವುದೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ.
ಶಾರ್ಜಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, “ಕ್ರಿಕೆಟ್ ಜಗತ್ತಿನಲ್ಲಿ ನ್ಯೂಜಿಲೆಂಡ್‌ಗೆ ಇದು ಒಳ್ಳೆಯ ಕಾಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಕೆಲವು ತಿಂಗಳ ಹಿಂದೆಯಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಉತ್ತಮ ತಂಡವಾದರೂ ಕಠಿಣ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ. ಕ್ರಿಕೆಟ್ ವಿಷಯದಲ್ಲಿ ಆಸ್ಟ್ರೇಲಿಯಾ ತಂಡವು ಉತ್ತಮವಾಗಿದ್ದರೂ, ನ್ಯೂಜಿಲೆಂಡ್ ತಂಡ ಹೆಚ್ಚು ಧೈರ್ಯ ಮತ್ತು ಸಾಮರ್ಥ್ಯಗಳನ್ನು ಹೊಂದಿದೆ. ಹೀಗಾಗಿ ಇದು ನ್ಯೂಜಿಲೆಂಡ್‌ಗೆ ಸಕಾಲ ಎಂದು ಭಾವಿಸುತ್ತೇನೆ ಎಂದು ಗಂಗೂಲಿ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಟಿ20 ವಿಶ್ವ ಚಾಂಪಿಯನ್ ಪಟ್ಟ ನ್ಯೂಜಿಲೆಂಡ್‌ಗೆ ಒಲಿಯಲಿದೆ ಎಂದು ಗಂಗೂಲಿ ಪರೋಕ್ಷವಾಗಿ ತಿಳಿಸಿದ್ದಾರೆ.
ಇದೇ ವೇಳೆ ಟಿ20 ವಿಶ್ವಕಪ್‌ನಲ್ಲಿ ಭಾರತದ ವೈಫಲ್ಯದ ಬಗ್ಗೆಯೂ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. “ಕೆಲವು ಕೆಟ್ಟ ಪಂದ್ಯಗಳಿಂದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಹೊರಗುಳಿಯಿತು. ಆದರೆ ಮುಂಬರುವ ಸರಣಿಯಲ್ಲಿ ಭಾರತವು ಬಲವಾಗಿ ಮರಳುತ್ತದೆ. ನಿರೀಕ್ಷೆಗಳು ನಿಸ್ಸಂದೇಹವಾಗಿ ಹೆಚ್ಚಿದ್ದವು. ಆದರೆ ಜನರು ನಿರಾಶೆಯ ನಡುವೆಯೂ ಫಲಿತಾಂಶವನ್ನು ಸ್ವೀಕರಿಸಿದ್ದಾರೆ. ಅಭಿಮಾನಿಗಳು ಅಸಮಾಧಾನಗೊಂಡರು, ಆ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲಿಲ್ಲ ಎಂಬುದು ಸಾಮಾಧಾನಕರ ಎಂದು ಗಂಗೂಲಿ ತಿಳಿಸಿದರು.
ಬುಮ್ರಾ, ಶಮಿ, ರೋಹಿತ್ ಮತ್ತು ಕೊಹ್ಲಿ ಎಲ್ಲರೂ ಮನುಷ್ಯರೇ. ಅದು ಕೇವಲ ಎರಡು ಕೆಟ್ಟ ಪಂದ್ಯಗಳು. ಕೆಟ್ಟ ಕ್ರಿಕೆಟ್‌ನ 40 ಓವರ್‌ಗಳು. ಹೀಗಾಗಿ ಟೀಮ್ ಇಂಡಿಯಾ ಕಂಬ್ಯಾಕ್ ಮಾಡುತ್ತಾರೆ.ಒಂದು ವರ್ಷದೊಳಗೆ ಇದೇ ಹುಡುಗರು ಟ್ರೋಫಿಗಳನ್ನು ಎತ್ತುವುದನ್ನು ನಾವು ನೋಡುತ್ತೇವೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದರು.
2020 ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಕೊರೋನಾ ಕಾರಣದಿಂದ 2022 ಕ್ಕೆ ಮುಂದೂಡಲಾಗಿದೆ. ಅದರಂತೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಅದರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ದಾದಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
(Sourav Ganguly Picks Winner of T20 World Cup 2021 Final Between New Zealand vs Australia)