BREAKING NEWS: ಸೆಮಿ ಫೈನಲ್​ಗೆ ಪ್ರವೇಶ ಪಡೆದ ಭಾರತ ತಂಡ: ನೆದರ್​ಲೆಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು

South Africa vs Netherlands: ಅಡಿಲೆಡ್​ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್​ಲೆಂಡ್ಸ್ 13 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಆಫ್ರಿಕಾನ್ನರ ಸೆಮಿ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಇತ್ತ ಆಫ್ರಿಕ ಸೋತ ಪರಿಣಾಮ ಟೀಮ್ ಇಂಡಿಯಾ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ.

BREAKING NEWS: ಸೆಮಿ ಫೈನಲ್​ಗೆ ಪ್ರವೇಶ ಪಡೆದ ಭಾರತ ತಂಡ: ನೆದರ್​ಲೆಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು
T20 World Cup
Edited By:

Updated on: Nov 06, 2022 | 9:38 AM

ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಗ್ರೂಪ್ 2ರ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa vs Netherlands) ತಂಡ ಸೋಲು ಕಂಡಿದೆ. ಅಡಿಲೆಡ್​ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್​ಲೆಂಡ್ಸ್ 13 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಆಫ್ರಿಕಾನ್ನರ ಸೆಮಿ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಇತ್ತ ಆಫ್ರಿಕ ಸೋತ ಪರಿಣಾಮ ಟೀಮ್ ಇಂಡಿಯಾ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ. ನೆದರ್​ಲೆಂಡ್ಸ್ ಬೌಲರ್​ಗಳ ಅದ್ಭುತ ಪ್ರದರ್ಶನ ಆಫ್ರಿಕಾ ಸೋಲಿಗೆ ಮುಖ್ಯ ಕಾರಣವಾಯಿತು. ಇದೀಗ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (PAK vs BAN) ನಡುವಣ ಪಂದ್ಯದ ಫಲಿತಾಂಶದ ಮೇಲೆ ಆಫ್ರಿಕಾ ಸೆಮೀಸ್ ಲೆಕ್ಕಚಾರ ನಿಂತಿದೆ. ಪಾಕ್-ಬಾಂಗ್ಲಾ ಪಂದ್ಯ ರದ್ದಾದರಷ್ಟೆ ಸೆಮಿ ಫೈನಲ್ ರೇಸ್​ನಲ್ಲಿ ಆಫ್ರಿಕಾ ಉಳಿಯಲಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಇಳಿದ ನೆದರ್​ಲೆಂಡ್ಸ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿತು. ಓಪನರ್​ಗಳಾದ ಮೈಬರ್ಗ್ ಹಾಗೂ ಮ್ಯಾಕ್ಸ್ ಡೌಡ್ ಅರ್ಧಶತಕದ ಜೊತೆಯಾಟ ಆಡಿದರು. ಮೈಬರ್ಗ್ 30 ಎಸೆತಗಳಲ್ಲಿ 7 ಫೋರ್ ಬಾರಿಸಿ 37 ರನ್ ಗಳಿಸಿದರು. ನಂತರ ಟಾಮ್ ಕೂಪರ್ ಜೊತೆಯಾದ ಡೌಡ್ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಮ್ಯಾಕ್ಸ್ ಡೌಡ್ 31 ಎಸೆತಗಳಲ್ಲಿ 29 ರನ್ ಕಲೆಹಾಕಿದರು. ಇದರ ಬೆನ್ನಲ್ಲೇ ಸ್ಫೋಟಕ ಆಟವಾಡಿದ ಕೂಪರ್ 19 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ 35 ರನ್ ಚಚ್ಚಿದರು.

ಇದನ್ನೂ ಓದಿ
IND vs ZIM: ಇಂದು ಭಾರತ- ಜಿಂಬಾಬ್ವೆ ಮುಖಾಮುಖಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರೋಹಿತ್ ಪಡೆ
Ind Vs Zim Probable Playing XI: ನಿರ್ಣಾಯಕ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡ್ತಾರಾ ರೋಹಿತ್..?
‘ಹ್ಯಾಪಿ ಬರ್ತ್​ ಡೇ ಮೈ ಜೋಕರ್’; ಪ್ರೇಯಸಿ ಅಥಿಯಾಗೆ ವಿಶೇಷವಾಗಿ ಶುಭಕೋರಿದ ರಾಹುಲ್
ಸೆಮಿಫೈನಲ್​ಗೆ ನ್ಯೂಜಿಲೆಂಡ್- ಇಂಗ್ಲೆಂಡ್‌; ವಿಶ್ವಕಪ್​ನಿಂದ ಆಸ್ಟ್ರೇಲಿಯಾ ಔಟ್! ಫೈನಲ್ ಪಾಯಿಂಟ್ ಪಟ್ಟಿ ಹೀಗಿದೆ

 

ಅಂತಿಮ ಹಂತದಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಕಾಲಿನ್ ಅಕ್ವರ್​ಮೆನ್ ಕೇವಲ 26 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 41 ರನ್ ಗಳಿಸಿದರು. ನಾಯಕ ಎಡ್ವರ್ಡ್ಸ್ ಅಜೇಯ 7 ರನ್ ಬಾರಿಸಿದರು. ಅಂತಿಮವಾಗಿ ನೆದರ್​ಲೆಂಡ್ಸ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು. ಆಫ್ರಿಕಾ ಪರ ಕೇಶವ್ ಮಹರಾಜ್ 2 ಹಾಗೂ ಆನ್ರಿಚ್ ನಾರ್ಟ್ಜೆ, ಮಾರ್ಕ್ರಮ್ ತಲಾ 1 ವಿಕೆಟ್ ಪಡೆದರು.

159 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ಕ್ವಿಂಟನ್ ಡಿಕಾಕ್ (13) ವಿಕೆಟ್ ಕಳೆದುಕೊಂಡಿತು. ನಾಯಕ ತೆಂಬಾ ಬವುಮಾ 20 ಎಸೆತಗಳಲ್ಲಿ 20 ರನ್ ಗಳಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರಿಲೀ ರೊಸ್ಸೋ 19 ಎಸೆತಗಳಲ್ಲಿ 25 ರನ್ ಬಾರಿಸಿ ಔಟಾದರು. ನಂತರ ಬಂದ ಬ್ಯಾಟರ್​ಗಳು ಯಾರೂ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಆ್ಯಡಂ ಮಾರ್ಕ್ರಮ್ ಹಾಗೂ ಡೇವಿಡ್ ಮಿಲ್ಲರ್ ತಲಾ 17 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಹೆನ್ರಿಚ್ ಕ್ಲಾಸೆನ್ ಹೋರಾಟ 21 ರನ್​ಗೆ ಅಂತ್ಯವಾದರೆ ವೇನ್ ಪರ್ನೆಲ್ ಸೊನ್ನೆ ಸುತ್ತಿದರು. ಕೊನೆಯ 6 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 26 ರನ್​ಗಳ ಅವಶ್ಯಕತೆಯಿತ್ತು. ಆದರೆ, ಕೊನೆಯ ಓವರ್​ನಲ್ಲೂ ವಿಕೆಟ್ ಕಳೆದುಕೊಂಡು ಆಫ್ರಿಕಾ ಸೋಲು ಕಂಡಿತು. ಹರಿಣಗಳು 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 145 ರನ್​ಗಳನ್ನಷ್ಟೆ ಕಲೆಹಾಕಿತು. ನೆದರ್​ಲೆಂಡ್ಸ್ ಪರ ಬ್ರಾಂಡನ್ ಗ್ಲೋವರ್ 2 ಓವರ್​ಗೆ 9 ರನ್ ನೀಡಿ 3 ವಿಕೆಟ್ ಕಿತ್ತರೆ, ಫ್ರೆಡ್ ಕ್ಲಾಸೆನ್ 2 ವಿಕೆಟ್ ಪಡೆದರು.

Published On - 9:12 am, Sun, 6 November 22