5 ಸಿಕ್ಸರ್, 7 ಬೌಂಡರಿ, 78 ರನ್! ಸಿಎಸ್​ಕೆ ಬೌಲರ್​ ಬೆವರಿಳಿಸಿದ ಐರಿಶ್ ಬ್ಯಾಟರ್; ಆದರೂ ಗೆದ್ದ ಹರಿಣಗಳು

ನಾಯಕ ಆಂಡ್ರ್ಯೂ ಬಲ್ಬಿರ್ನಿ ಔಟಾದ ಬಳಿಕ ಕ್ರೀಸ್‌ಗೆ ಕಾಲಿಟ್ಟ ಟಕರ್ ಅವರು ಬಂದ ಕೂಡಲೇ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು. ಬಲಗೈ ಬ್ಯಾಟ್ಸ್‌ಮನ್ ಪವರ್‌ಪ್ಲೇಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಪಂದ್ಯದಲ್ಲಿ 5 ಸಿಕ್ಸರ್‌ ಮತ್ತು 7 ಬೌಂಡರಿಗಳನ್ನು ಬಾರಿಸಿದರು.

5 ಸಿಕ್ಸರ್, 7 ಬೌಂಡರಿ, 78 ರನ್! ಸಿಎಸ್​ಕೆ ಬೌಲರ್​ ಬೆವರಿಳಿಸಿದ ಐರಿಶ್ ಬ್ಯಾಟರ್; ಆದರೂ ಗೆದ್ದ ಹರಿಣಗಳು
Follow us
TV9 Web
| Updated By: ಪೃಥ್ವಿಶಂಕರ

Updated on: Aug 04, 2022 | 3:06 PM

ಬ್ರಿಸ್ಟಲ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಐರ್ಲೆಂಡ್ (South Africa vs hosts Ireland) ನಡುವಿನ T20I ಸರಣಿಯ ಮೊದಲ ಪಂದ್ಯದಲ್ಲಿ ಆಫ್ರಿಕಾ ತಂಡ 21 ರನ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಐರ್ಲೆಂಡ್ ವಿರುದ್ಧ 211 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಉತ್ತರವಾಗಿ ಐರ್ಲೆಂಡ್ 190 ರನ್ ಗಳಿಸಿ ಉತ್ತಮ ಪ್ರಯತ್ನ ನಡೆಸಿತು. ಆದರೆ ಕೊನೆಗೆ ಸೋಲಬೇಕಾಯಿತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ 53 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು. ಇದಲ್ಲದೇ ಐಡೆನ್ ಮಾರ್ಕ್ರಾಮ್ 27 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಿತ 56 ರನ್ ಗಳಿಸಿ ಅಮೋಘ ಇನಿಂಗ್ಸ್ ಆಡಿದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಕೂಡ 11 ಎಸೆತಗಳಲ್ಲಿ 24 ರನ್ ಗಳಿಸಿದರು ಮತ್ತು ಪ್ರಿಟೋರಿಯಸ್ 7 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರು.

ಹೆಂಡ್ರಿಕ್ಸ್ ಮೂರನೇ ವಿಕೆಟ್‌ಗೆ ಮಾರ್ಕ್ರಾಮ್ ಜೊತೆ 112 ರನ್ ಜೊತೆಯಾಟ ನಡೆಸಿದರು. ಸ್ಪಿನ್ ಬೌಲರ್ ಗರೆಥ್ ಡೆಲಾನಿ 16ನೇ ಓವರ್‌ನಲ್ಲಿ ಹೆಂಡ್ರಿಕ್ಸ್ ಮತ್ತು ಮಾರ್ಕ್ರಾಮ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು.

ಗುರಿ ಬೆನ್ನತ್ತಿದ ಐರ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಲೋರ್ಕನ್ ಟಕರ್ 38 ಎಸೆತಗಳಲ್ಲಿ 78 ರನ್‌ಗಳೊಂದಿಗೆ ವೇಗದ ಇನ್ನಿಂಗ್ಸ್ ಆಡಿದರೆ, ಜಾರ್ಜ್ ಡಾಕ್ರೆಲ್ 43 ರನ್ ಗಳಿಸಿದರು. ಆದರೆ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ವೇಳೆ ಕೇಶವ್ ಮಹಾರಾಜ್, ವೇಯ್ನ್ ಪಾರ್ನೆಲ್ ಮತ್ತು ತಬ್ರೇಜ್ ಶಮ್ಸಿ ತಲಾ 2 ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ಡ್ವೇನ್ ಪ್ರಿಟೋರಿಯಸ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ
Image
IND Vs WI T20: ಭಾರತ- ವಿಂಡೀಸ್ ಕೊನೆಯ 2 ಟಿ20 ಪಂದ್ಯಗಳು ನಡೆಯುವುದು ಅನುಮಾನ..!
Image
Asia Cup 2022: ಕೊಹ್ಲಿ, ರಾಹುಲ್ ರೀ ಎಂಟ್ರಿ; ಏಷ್ಯಾಕಪ್​ಗೆ ಸಂಭಾವ್ಯ ಟೀಂ ಇಂಡಿಯಾ ಹೀಗಿದೆ
Image
Asia Cup 2022: ಏಷ್ಯಾಕಪ್​ನಲ್ಲಿ ಬರೋಬ್ಬರಿ 3 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕಿಸ್ತಾನ..! ಹೇಗೆ ಗೊತ್ತಾ?

ಲೋರ್ಕನ್ ಟಕರ್ ಅದ್ಭುತ ಆಟ

ಮೂರನೇ ಓವರ್‌ನಲ್ಲಿ ಲೋರ್ಕನ್ ಟಕರ್ ಬ್ಯಾಟಿಂಗ್‌ಗೆ ಬಂದರು. ನಾಯಕ ಆಂಡ್ರ್ಯೂ ಬಲ್ಬಿರ್ನಿ ಔಟಾದ ಬಳಿಕ ಕ್ರೀಸ್‌ಗೆ ಕಾಲಿಟ್ಟ ಟಕರ್ ಅವರು ಬಂದ ಕೂಡಲೇ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು. ಬಲಗೈ ಬ್ಯಾಟ್ಸ್‌ಮನ್ ಪವರ್‌ಪ್ಲೇಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಪಂದ್ಯದಲ್ಲಿ 5 ಸಿಕ್ಸರ್‌ ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಈ ಆಟಗಾರನ ಸ್ಟ್ರೈಕ್ ರೇಟ್ 205ಕ್ಕಿಂತ ಹೆಚ್ಚಿತ್ತು.ಇಂಗ್ಲೆಂಡಿನ ನೆಲದಲ್ಲಿ ಈ ಐರಿಶ್ ಆಟಗಾರ ಮೊದಲ ಬಾರಿಗೆ ಟಿ20 ಪಂದ್ಯ ಆಡುತ್ತಿದ್ದು ಅದರಲ್ಲಿ ತನ್ನ ಶಕ್ತಿ ಪ್ರದರ್ಶಿಸಿದ್ದು ದೊಡ್ಡ ವಿಷಯ.

ಆದರೆ, ಟಕ್ಕರ್​ಗೆ ಇತರ ಬ್ಯಾಟ್ಸ್‌ಮನ್‌ಗಳು ಸಾಥ್ ನೀಡಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಹ್ಯಾರಿ ಟ್ಯಾಕ್ಟರ್ ಮತ್ತು ಡೆಲಾನಿ ಬೇಗನೆ ಔಟಾದರು. ಕರ್ಟಿಸ್ ಕಾನ್ಫರ್ ಕೂಡ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಜಾರ್ಜ್ ಡಾಕ್ರೆಲ್ 28 ಎಸೆತಗಳಲ್ಲಿ 43 ರನ್ ಗಳಿಸಿದರು ಆದರೆ ದಕ್ಷಿಣ ಆಫ್ರಿಕಾದ ಸ್ಕೋರ್ 211 ಐರ್ಲೆಂಡ್ ದಾಟಲು ಸಾಧ್ಯವಾಗಲಿಲ್ಲ. ಟಕರ್ ಅವರು ಭಾರತ ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಿದ್ದರು ಆದರೆ ಎರಡರಲ್ಲೂ ವಿಫಲರಾಗಿದ್ದರು. ಟಕರ್ ಭಾರತದ ವಿರುದ್ಧ 18 ಮತ್ತು 5 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡ್ವೇನ್ ಪ್ರಿಟೋರಿಯಸ್ ಅತ್ಯಂತ ದುಬಾರಿ ಎಂದು ಸಾಬೀತಾಯಿತು. 4 ಓವರ್‌ಗಳಲ್ಲಿ 44 ರನ್‌ ಬಿಟ್ಟುಕೊಟ್ಟರು. ಪ್ರಿಟೋರಿಯಸ್ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಲುಂಗಿ ಎನ್‌ಗಿಡಿ ಕೂಡ 4 ಓವರ್‌ಗಳಲ್ಲಿ 39 ರನ್‌ ನೀಡಿದರು.