Asia Cup 2022: ಏಷ್ಯಾಕಪ್ನಲ್ಲಿ ಬರೋಬ್ಬರಿ 3 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕಿಸ್ತಾನ..! ಹೇಗೆ ಗೊತ್ತಾ?
Asia Cup 2022: ವಿಶೇಷವೆಂದರೆ ಈ ಮೂರೂ ಪಂದ್ಯಗಳು ಕೂಡ ಒಂದೇ ಮೈದಾನದಲ್ಲಿ ನಡೆಯಲಿದ್ದು, ಎಲ್ಲಾ ಮೂರು ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಮತ್ತು ಈ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30 ರಿಂದ ಆರಂಭವಾಗುತ್ತವೆ.
ಭಾರತ ತಂಡ ಇದೀಗ ವೆಸ್ಟ್ ಇಂಡೀಸ್‌ನಲ್ಲಿ ಆಡುತ್ತಿರಬಹುದು. ಅದರ ನಂತರ ಜಿಂಬಾಬ್ವೆಗೆ ಹೋರಡಲಿದೆ. ಮತ್ತೊಂದೆಡೆ, ಪಾಕಿಸ್ತಾನವು ನೆದರ್ಲೆಂಡ್ಸ್‌ನೊಂದಿಗೆ ಆಡುವುದನ್ನು ಕಾಣಬಹುದು. ಆದರೆ ಏಷ್ಯಾಕಪ್ ಆರಂಭವಾದಾಗ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ. ಅದು ಒಮ್ಮೆ ಮಾತ್ರ ಅಲ್ಲ ಬರೋಬ್ಬರಿ 3 ಬಾರಿ ಮುಖಾಮುಖಿಯಾಗುವುದನ್ನು ನಾವು ಕಾಣಬಹುದು. ಒಂದೊಮ್ಮೆ ಭಾರತ ಮತ್ತು ಪಾಕಿಸ್ತಾನ (India-Pakistan) ಮುಖಾಮುಖಿಯಾಗುವುದು ಖಚಿತ. ಅದು ವೇಳಾಪಟ್ಟಿಯಲ್ಲೂ ಖಚಿತವಾಗಿದೆ. ಆದರೆ ಈ ಉಭಯ ತಂಡಗಳು ಏಷ್ಯಾ ಕಪ್‌ನಲ್ಲಿ 3 ಬಾರಿ ಹೇಗೆ ಮುಖಾಮುಖಿಯಾಗುತ್ತವೆ ಎಂಬುದರ ಬಗ್ಗೆ ನಾವೀಗ ನಿಮಗೆ ಹೇಳಲಿದ್ದೇವೆ.
ಮೊದಲ ಹಣಾಹಣಿ ಆಗಸ್ಟ್ 28 ರಂದು ನಡೆಯಲಿದೆ
ಏಷ್ಯಾ ಕಪ್ ಆಗಸ್ಟ್ 27 ರಿಂದ ಆರಂಭವಾಗಲಿದ್ದು, ಈ ಪಂದ್ಯಾವಳಿಯು ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಇದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಆದರೆ ಅದರ ಎರಡನೇ ಪಂದ್ಯವು ಹೈ ವೋಲ್ಟೇಜ್ ಆಗಿದ್ದು, ಇದು ಆಗಸ್ಟ್ 28 ರಂದು ನಡೆಯಲಿದೆ. ಈ ದಿನ, ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನವು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.
ಸೆಪ್ಟೆಂಬರ್ 4 ರಂದು ಎರಡನೇ ಘರ್ಷಣೆ ಸಾಧ್ಯತೆ
ಇದರ ನಂತರ, ಸೆಪ್ಟೆಂಬರ್ 4 ರಂದು ಎರಡೂ ತಂಡಗಳು ಸೂಪರ್ ಫೋರ್ ಸುತ್ತಿನಲ್ಲಿ ಮುಖಾಮುಖಿಯಾಗಬಹುದು. ಏಕೆಂದರೆ ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಇವೆರಡೂ ಆ ಗುಂಪಿನ ಅಗ್ರ ಎರಡು ತಂಡಗಳಾಗಿ ಉಳಿದುಕೊಂಡರೆ, ಅದು ಸಾಧ್ಯತೆಯೂ ಇದೆ, ನಂತರ ಸೆಪ್ಟೆಂಬರ್ 4 ರಂದು ಮತ್ತೊಮ್ಮೆ ಮುಖಾಮುಖಿಯಾಗಬಹುದು.
ಮೂರನೇ ಘರ್ಷಣೆ, ಸೆಪ್ಟೆಂಬರ್ 11 ರ ಫೈನಲ್!
ಈಗ ನೀವು ಭಾರತ-ಪಾಕಿಸ್ತಾನ ಮೂರನೇ ಮುಖಾಮುಖಿಯ ಬಗ್ಗೆ ಯೋಚಿಸುತ್ತಿರಬೇಕು. ಹೀಗಾಗಿ ಸೆ.11ರಂದು ಫೈನಲ್ ಆಗಿಯೇ ನೋಡಬಹುದು. ಸೂಪರ್ ಫೋರ್ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬಲಿಷ್ಠ ಪ್ರದರ್ಶನ ನೀಡುತ್ತಲೇ ಫೈನಲ್ ತಲುಪಿದರೆ ಅದು ಸಾಧ್ಯ. ಅದೇನೇ ಇರಲಿ, ಏಷ್ಯಾದ ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಬಲಿಷ್ಠವಾಗಿವೆ. ಇತ್ತೀಚಿನ ದಿನಗಳಲ್ಲಿ, ಟಿ20 ಮಾದರಿಯಲ್ಲಿ ಈ ಎರಡೂ ತಂಡಗಳ ಪ್ರದರ್ಶನವೂ ಪ್ರಬಲವಾಗಿದೆ. ಹೀಗಿರುವಾಗ ಫೈನಲ್‌ನಲ್ಲಿ ಮುಖಾಮುಖಿಯಾದರೂ ಅಚ್ಚರಿ ಪಡಬೇಕಿಲ್ಲ.
ವಿಶೇಷವೆಂದರೆ ಈ ಮೂರೂ ಪಂದ್ಯಗಳು ಕೂಡ ಒಂದೇ ಮೈದಾನದಲ್ಲಿ ನಡೆಯಲಿದ್ದು, ಎಲ್ಲಾ ಮೂರು ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಮತ್ತು ಈ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30 ರಿಂದ ಆರಂಭವಾಗುತ್ತವೆ.