ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನ (T20 World Cup) 18ನೇ ಪಂದ್ಯದಲ್ಲಿ ತೆಂಬಾ ಬವುಮಾ (Temba Bavuma) ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಕೀರನ್ ಪೊಲಾರ್ಡ್ (Kieron Pollard) ನೇತೃತ್ವದ ವೆಸ್ಟ್ ಇಂಡೀಸ್ (South Africa vs West Indies) ವಿರುದ್ದ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಬವುಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಎವಿನ್ ಲೂಯಿಸ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಕಲೆಹಾಕಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಏಡೆನ್ ಮಾರ್ಕ್ರಾಮ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 18.2 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 144 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ಸತತ 2 ಪಂದ್ಯಗಳಲ್ಲಿ ಪರಾಜಯಗೊಂಡಂತಾಗಿದೆ.
ಟಿ20 ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 16 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ ಗೆದ್ದರೆ, ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಪಂದ್ಯ ಶ್ರೇಷ್ಠ: ಅನ್ರಿಕ್ ನೋಕಿಯಾ
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ 11): ತೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ತಬ್ರೇಜ್ ಶಮ್ಸಿ
ವೆಸ್ಟ್ ಇಂಡೀಸ್ (ಪ್ಲೇಯಿಂಗ್ 11): ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಖೀಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್
ರಸೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಮಾರ್ಕ್ರಾಮ್
ಗೆಲ್ಲಲು 2 ಓವರ್ನಲ್ಲಿ 7 ರನ್ಗಳ ಅವಶ್ಯಕತೆ
ಕೊನೆಯ 4 ಓವರ್ನಲ್ಲಿ ದಕ್ಷಿಣ ಆಫ್ರಿಕಾಗೆ 24 ರನ್ಗಳ ಅವಶ್ಯಕತೆ
ಬ್ರಾವೊ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಮತ್ತೊಂದು ಬಾರಿಸಿದ ಡುಸ್ಸೆನ್
ಬ್ರಾವೊ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಾಸ್ಸಿ ಡುಸ್ಸೆನ್
ರವಿರಾಂಪಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಏಡೆನ್ ಮಾರ್ಕ್ರಾಮ್
ಗೆಲ್ಲಲು 6 ಓವರ್ನಲ್ಲಿ 44 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಡುಸ್ಸೆನ್ ಹಾಗೂ ಮಾರ್ಕ್ರಾಮ್ ಬ್ಯಾಟಿಂಗ್
ಪೊಲಾರ್ಡ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಏಡೆನ್ ಮಾರ್ಕ್ರಾಮ್
ವಾಲ್ಷ್ ಎಸೆತದಲ್ಲಿ ಬಿಗ್ ಸಿಕ್ಸ್ ಸಿಡಿಸಿದ ಏಡೆನ್ ಮಾರ್ಕ್ರಾಮ್
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡುಸೆನ್ – ಏಡೆನ್ ಮಾರ್ಕ್ರಾಮ್ ಬ್ಯಾಟಿಂಗ್
ಅಖಿಲ್ ಹೊಸೈನ್ ಎಸೆತದಲ್ಲಿ ಹೆಟ್ಮೆಯರ್ಗೆ ಕ್ಯಾಚ್ ನೀಡಿ ಹೊರನಡೆದ ಹೆಟ್ಮೆಯರ್ (39)
ಬ್ರಾವೊ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಹೆಂಡ್ರಿಕ್ಸ್
ಕ್ರೀಸ್ನಲ್ಲಿ ಹೆಂಡ್ರಿಕ್ಸ್-ಡುಸ್ಸೆನ್ ಬ್ಯಾಟಿಂಗ್
ವೆಸ್ಟ್ ಇಂಡೀಸ್ ಪರ ಎವಿನ್ ಲೂಯಿಸ್ 56 ರನ್
ದಕ್ಷಿಣ ಆಫ್ರಿಕಾ ಪರ 3 ವಿಕೆಟ್ ಪಡೆದ ಡ್ವೈನ್ ಪ್ರಿಟೋರಿಯಸ್
ಆಫ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಡ್ವೇನ್ ಬ್ರಾವೊ
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಹೊರನಡೆ ಹೇಡನ್ ವಾಲ್ಷ್ (0)
ಕ್ಯಾಚ್ ನೀಡಿ ಹೊರನಡೆದ ಕೀರನ್ ಪೊಲಾರ್ಡ್ (4)
ಡೇವಿಡ್ ಮಿಲ್ಲರ್ ಉತ್ತಮ ಫೀಲ್ಡಿಂಗ್..ಶಿಮ್ರಾನ್ ಹೆಟ್ಮೆಯರ್ (1) ರನೌಟ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಆಂಡ್ರೆ ರಸೆಲ್ ಕ್ಲೀನ್ ಬೌಲ್ಡ್
ಕೀರನ್ ಪೊಲಾರ್ಡ್ ಬ್ಯಾಟ್ನಿಂದ ಸ್ಟ್ರೈಟ್ ಹಿಟ್ ಬೌಂಡರಿ
ಪ್ರೆಟೊರಿಸ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಕ್ರಿಸ್ ಗೇಲ್ (12)
ರಬಾಡ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಕೀರನ್ ಪೊಲಾರ್ಡ್…ಫೋರ್
ಶಮ್ಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕ್ರಿಸ್ ಗೇಲ್
ಕೀರನ್ ಪೊಲಾರ್ಡ್ ಭರ್ಜರಿ ಹೊಡೆತ…ಶಮ್ಸಿ ಎಸೆತದಲ್ಲಿ ಸಿಕ್ಸ್
ಕಗಿಸೊ ರಬಾಡ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ಲಿಂಡ್ಲ್ ಸಿಮನ್ಸ್ (16)
ಕ್ರೀಸ್ನಲ್ಲಿ ಕ್ರಿಸ್ ಗೇಲ್-ಲಿಂಡ್ಲ್ ಸಿಮನ್ಸ್ ಬ್ಯಾಟಿಂಗ್
ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಡೇವಿಡ್ ಮಿಲ್ಲರ್ ಸೂಪರ್ ಕ್ಯಾಚ್…ಪೂರನ್ (12) ಔಟ್
ಶಮ್ಸಿ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ನಿಕೋಲಸ್ ಪೂರನ್
ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಪ್ರಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಎವಿನ್ ಲೂಯಿಸ್ (56) ಔಟ್.
ಕೇಶವ್ ಮಹರಾಜ್ ಎಸೆತದಲ್ಲಿ ಸಖತ್ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್…ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ವಿಂಡೀಸ್ ಆರಂಭಿಕ
ತಬ್ರೇಜ್ ಶಮ್ಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಎವಿನ್ ಲೂಯಿಸ್
ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್
ಕ್ರೀಸ್ನಲ್ಲಿ ಲಿಂಡ್ಲ್ ಸಿಮನ್ಸ್ ಹಾಗೂ ಎವಿನ್ ಲೂಯಿಸ್ ಬ್ಯಾಟಿಂಗ್
ಮೊದಲ 6 ಓವರ್ನಲ್ಲಿ 43 ರನ್ ಕಲೆಹಾಕಿದ ವೆಸ್ಟ್ ಇಂಡೀಸ್ ಆರಂಭಿಕರಾದ ಲಿಂಡ್ಲ್ ಸಿಮನ್ಸ್ ಹಾಗೂ ಎವಿನ್ ಲೂಯಿಸ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಹೊಡೆತ…ಚೆಂಡು ಒಂದು ಪಿಚ್ ಆಗಿ ಬೌಂಡರಿಗೆ…ಫೋರ್
ಲೂಯಿಸ್ ಅಬ್ಬರ ಶುರು…ಮಾರ್ಕ್ರಮ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್…ಕೊನೆಯ ಎಸೆತದಲ್ಲಿ ಮತ್ತೊಂದು ಬೌಂಡರಿ.
ಎವಿನ್ ಲೂಯಿಸ್ ಅಬ್ಬರ…ಮಾರ್ಕ್ರಾಮ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬಿಗ್ ಸಿಕ್ಸ್ ಸಿಡಿಸಿದ ಲೂಯಿಸ್
ರಬಾಡ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್
ರಬಾಡ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಎವಿನ್ ಲೂಯಿಸ್
ಕ್ರೀಸ್ನಲ್ಲಿ ಲಿಂಡ್ಲ್ ಸಿಮನ್ಸ್ ಹಾಗೂ ಎವಿನ್ ಲೂಯಿಸ್ ಬ್ಯಾಟಿಂಗ್
ಆರಂಭಿಕರು: ಲಿಂಡ್ಲ್ ಸಿಮನ್ಸ್, ಎವಿನ್ ಲೂಯಿಸ್
ಮೊದಲ ಓವರ್: ಏಡೇನ್ ಮಾರ್ಕ್ರಾಮ್
ವೆಸ್ಟ್ ಇಂಡೀಸ್ (ಪ್ಲೇಯಿಂಗ್ 11): ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಖೀಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ 11): ತೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ತಬ್ರೇಜ್ ಶಮ್ಸಿ
– ಕ್ವಿಂಟನ್ ಡಿಕಾಕ್ ಬದಲಿಗೆ ರೀಜಾ ಹೆಂಡ್ರಿಕ್ಸ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 15 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ ಗೆದ್ದರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ.
2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯವು ಸಂಜೆ 7.30ಕ್ಕೆ ಶುರುವಾಗಲಿದೆ.
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿದೆ. ಈ ಪಂದ್ಯ 3.30 ಕ್ಕೆ ಶುರುವಾಗಲಿದೆ.
What a feast ?
Predictions for today?#T20WorldCup pic.twitter.com/EHOd3T7Y69
— T20 World Cup (@T20WorldCup) October 26, 2021
Published On - 2:41 pm, Tue, 26 October 21