ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಉರುಳಿಸಿದ್ದು ಇಬ್ಬರೇ ಇಬ್ಬರು. ಅವರಲ್ಲಿ ಮೊದಲಿಗರು ಜಿಮ್ಮಿ ಲೇಕರ್ (Jimmy Laker). 1956 ರಲ್ಲಿ ಇಂಗ್ಲೆಂಡ್ ಬೌಲರ್ ಲೇಕರ್ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ 53 ರನ್ ನೀಡಿ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದಿದ್ದರು. ಆ ಬಳಿಕ ಈ ದಾಖಲೆಯನ್ನು ಸರಿಗಟ್ಟಿದ್ದು ಕನ್ನಡಿಗ ಅನಿಲ್ ಕುಂಬ್ಳೆ (Anil Kumble). ಕುಂಬ್ಳೆ 1999 ರಲ್ಲಿ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 74 ರನ್ ನೀಡಿ 10 ವಿಕೆಟ್ ಉರುಳಿಸಿದ್ದರು. ಇದೀಗ ಈ ಪಟ್ಟಿಗೆ ಮೂರನೇ ಸೇರ್ಪಡೆ ದಕ್ಷಿಣ ಆಫ್ರಿಕಾದ 24ರ ಹರೆಯದ ಯುವ ಸ್ಪಿನ್ನರ್ ಸೀನ್ ವೈಟ್ಹೆಡ್ (Sean Whitehead).
ದಕ್ಷಿಣ ಆಫ್ರಿಕಾದ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಸೀನ್ ವೈಟ್ಹೆಡ್ 10 ಪಡೆಯುವ ಮೂಲಕ ಇನಿಂಗ್ಸ್ವೊಂದರಲ್ಲಿ ಎಲ್ಲಾ ವಿಕೆಟ್ ಉರುಳಿಸಿದ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಆಲ್ರೌಂಡರ್ ಆಟವಾಡುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.
ಈಸ್ಟರ್ನ್ ಸ್ಟ್ರೋಮ್ ಹಾಗೂ ಸೌತ್ ವೆಸ್ಟರ್ನ್ ನಡುವಣ ಈ ಪಂದ್ಯದಲ್ಲಿ ಸೀನ್ ವೈಟ್ಹೆಡ್ ವೆಸ್ಟರ್ನ್ ತಂಡದ ಪರ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟರ್ನ್ ತಂಡವು ಮೊದಲ ಇನಿಂಗ್ಸ್ನಲ್ಲಿ 242 ರನ್ಗಳಿಸಿತ್ತು. ಈ ವೇಳೆ ಸೀನ್ ಹೆಡ್ವೈಟ್ ಕಲೆಹಾಕಿದ್ದು 66 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಈಸ್ಟರ್ನ್ ಸ್ಟ್ರೋಮ್ ತಂಡದ 5 ಪ್ರಮುಖ ವಿಕೆಟ್ ಉರುಳಿಸಿದ ಸೀನ್ ವೈಟ್ಹೆಡ್ ತಂಡದ ಮೊತ್ತವನ್ನು 250 ಕ್ಕೆ ನಿಯಂತ್ರಿಸಿದರು.
8 ರನ್ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ವೆಸ್ಟರ್ನ್ ತಂಡವು ಈ ಬಾರಿ ಸೀನ್ ವೈಟ್ಹೆಡ್ ಅವರ 49 ರನ್ಗಳ ಕಾಣಿಕೆಯೊಂದಿಗೆ 193 ರನ್ ಕಲೆಹಾಕಿತು. 185 ರನ್ಗಳ ಸಾಧಾರಣ ಗುರಿ ಪಡೆದ ಈಸ್ಟರ್ನ್ ಸ್ಟ್ರೋಮ್ ತಂಡದ ಲೆಕ್ಕಚಾರಗಳನ್ನು ತಲೆಕೆಳಗಾಗಿಸಿದ್ದು 24 ರ ಹರೆಯದ ಸೀನ್ ಹೆಡ್ವೈಟ್. ಏಕೆಂದರೆ 12.1 ಓವರ್ ಎಸೆದ ಸೀನ್ ವೈಟ್ಹೆಡ್ 36 ರನ್ಗಳಿಗೆ 10 ವಿಕೆಟ್ ಉರುಳಿಸಿದ್ದರು. ಈ ಮೂಲಕ ಈಸ್ಟರ್ನ್ ಸ್ಟ್ರೋಮ್ ತಂಡವನ್ನು ಕೇವಲ 65 ರನ್ಗಳಿಗೆ ಆಲೌಟ್ ಮಾಡಿ 120 ರನ್ಗಳ ಭರ್ಜರಿ ಜಯ ತಂದುಕೊಟ್ಟರು.
ಕೇವಲ 36 ರನ್ಗಳಿಗೆ 10 ವಿಕೆಟ್ ಉರುಳಿಸುವ ಮೂಲಕ ಸೀನ್ ಹೆಡ್ವೈಟ್ ಅತೀ ಕಡಿಮೆ ರನ್ ನೀಡಿದ ಎಲ್ಲಾ ಹತ್ತು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರು. ಅಷ್ಟೇ ಅಲ್ಲದೆ ವಿಶ್ವ ಕ್ರಿಕೆಟ್ನಲ್ಲಿ 10 ವಿಕೆಟ್ ಉರುಳಿಸಿದ ಮೂರನೇ ಬೌಲರ್ ಎನಿಸಿಕೊಂಡರು. ಅಂದಹಾಗೆ ಸೀಸನ್ ವೈಟ್ಹೆಡ್ 2016ರಲ್ಲಿ ದಕ್ಷಿಣ ಆಫ್ರಿಕಾ ಪರ 19 ವರ್ಷದೊಳಗಿನವರ ವಿಶ್ವಕಪ್ ಕೂಡ ಆಡಿದ್ದರು ಎಂಬುದು ವಿಶೇಷ. ಇದೀಗ ಒಂದೇ ಪಂದ್ಯದಲ್ಲಿ 15 ವಿಕೆಟ್ ಹಾಗೂ 115 ರನ್ಗಳನ್ನು ಕಲೆಹಾಕುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
Published On - 4:05 pm, Sun, 21 November 21