16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಇಂದು ಮಹತ್ವದ ಪಂದ್ಯ ನಡೆಯಲಿದೆ. ಹೈದರಾಬಾದ್ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆ್ಯಡಂ ಮರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ (David Warner) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (SRH vs DC) ಅನ್ನು ಎದುರಿಸಲಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದ್ದು ಡೆಲ್ಲಿ ಆಡಿದ ಆರು ಪಂದ್ಯಗಳ ಪೈಕಿ ಒಂದರಲ್ಲಷ್ಟೇ ಗೆದ್ದು ಕೊನೆಯ ಸ್ಥಾನದಲ್ಲಿದೆ. ಎಸ್ಆರ್ಹೆಚ್ ಆಡಿದ 6 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿ ಒಂಬತ್ತನೇ ಸ್ಥಾನದಲ್ಲಿದೆ.
ಹೈದರಾಬಾದ್:
ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೀನಾಯ ಪ್ರದರ್ಶನ ತೋರಿತ್ತು. ಹ್ಯಾರಿ ಬ್ರೂಕ್ ಒಂದು ಶತಕ ಸಿಡಿಸಿ ಮಂಕಾಗಿದ್ದಾರೆ. ಮಯಾಂಕ್ ಅಗರ್ವಾಲ್ ಫಾರ್ಮ್ ಮುಂದುವರೆಸುವಲ್ಲಿ ಎಡವಿದ್ದಾರೆ. ರಾಹುಲ್ ತ್ರಿಪಾಠಿ, ಮರ್ಕ್ರಮ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಅಬ್ಬರಿಸ ಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಬೌಲಿಂಗ್ನಲ್ಲಿ ಹೈದರಬಾದ್ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ ಮತ್ಯಾರು ಮಾರಕವಾಗಿ ಗೋಚರಿಸುತ್ತಿಲ್ಲ. ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ಮಯಾಂಕ್ ಮಾರ್ಕಂಡೆ ಲಯಕಂಡುಕೊಳ್ಳಬೇಕಿದೆ.
IPL 2023: ಅತ್ಯಂತ ದುಬಾರಿ ಓವರ್: ಅರ್ಜುನ್ ತೆಂಡೂಲ್ಕರ್ ಹೆಸರಿಗೆ ಕೆಟ್ಟ ದಾಖಲೆ ಸೇರ್ಪಡೆ
ಡೆಲ್ಲಿ:
ಡೆಲ್ಲಿ ಆರಂಭದಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಐದರಲ್ಲೂ ಸೋಲುಂಡಿತ್ತು. ಬಳಿಕ ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಖಾತೆ ತೆರೆಯಿತು. ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಮತ್ಯಾರು ರನ್ ಕಲೆಹಾಕುತ್ತಿಲ್ಲ. ಪೃಥ್ವಿ ಶಾ, ಯಶ್ ದುಲ್, ರೋಮನ್ ಪಾವೆಲ್, ಲಲಿತ್ ಯಾದವ್ ಘನೆತೆಗೆ ತಕ್ಕಂತೆ ಆಡುತ್ತಿಲ್ಲ. ಮನೀಶ್ ಪಾಂಡೆ ಕಡೆಯಿಂದ ಒಂದು ಅರ್ಧಶತಕ ಬಂದಿದೆಯಷ್ಟೆ. ಅಕ್ಷರ್ ಪಟೇಲ್ ಮಾತ್ರ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ನಲ್ಲೂ ಮುಖೇಶ್ ಕುಮಾರ್, ಮುಸ್ತಫಿಜುರ್ ರೆಹ್ಮಾನ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಮಾರಕವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಸನ್‌ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಆ್ಯಡಂ ಮರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್, ಆದಿಲ್ ರಶೀದ್, ಅಕೇಲ್ ಹೊಸೈನ್, ಗ್ಲೆನೆನ್ ಫಿಲಿಪ್ಸ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ವಿವ್ರಾಂತ್ ಶರ್ಮಾ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ) , ಪೃಥ್ವಿ ಶಾ, ಫಿಲಿಪ್ ಸಾಲ್ಟ್ , ಮಿಚೆಲ್ ಮಾರ್ಷ್ , ಮನೀಶ್ ಪಾಂಡೆ , ಅಕ್ಷರ್ ಪಟೇಲ್ , ಅಮನ್ ಹಕೀಮ್ ಖಾನ್ , ಲಲಿತ್ ಯಾದವ್ , ಕುಲದೀಪ್ ಯಾದವ್ , ಅನ್ರಿಚ್ ನಾರ್ಟ್ಜೆ , ಇಶಾಂತ್ ಶರ್ಮಾ , ಮುಖೇಶ್ ಕುಮಾರ್, ಯಶ್ ಧುಲ್ , ಸರ್ಫರಾಜ್ ಖಾನ್ , ರಿಪಾಲ್ ಪಟೇಲ್ , ಚೇತನ್ ಸಕರಿಯಾ , ಪ್ರವೀಣ್ ದುಬೆ , ರಿಲೀ ರೋಸೌವ್ , ರೋವ್ಮನ್ ಪೊವೆಲ್ , ಖಲೀಲ್ ಅಹ್ಮದ್ , ಲುಂಗಿ ಎನ್ಗಿಡಿ , ಕಮಲೇಶ್ ನಾಗರಕೋಟಿ , ವಿಕಿ ಓಸ್ತ್ವಾಲ್ , ಮುಸ್ತಫಿಝುರ್ ರೆಹಮಾನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Mon, 24 April 23