SRH vs PBKS Highlights, IPL 2025: ಅಭಿಷೇಕ್ ಶತಕ; 245 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್
Sunrisers Hyderabad vs Punjab Kings Highlights in Kannada: ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ನಡುವಿನ 171ನ ರನ್‌ಗಳ ಪಾಲುದಾರಿಕೆಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಯಿತು.

ಐಪಿಎಲ್ 2025 ರ 27ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಿತು. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ ಬರೋಬ್ಬರಿ 245 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಅಭಿಷೇಕ್ ಶರ್ಮಾ ಅವರ ದಾಖಲೆಯ ಐಪಿಎಲ್ ಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಈ ಸೀಸನ್ನ ಎರಡನೇ ಗೆಲುವು ದಾಖಲಿಸಿತು.
LIVE NEWS & UPDATES
-
ಹೈದರಾಬಾದ್‌ಗೆ 8 ವಿಕೆಟ್‌ಗಳ ಜಯ
ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡ ಪಂಜಾಬ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 141 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 66 ರನ್ ಗಳಿಸಿದರು. ಮತ್ತೊಂದೆಡೆ, ಪಂಜಾಬ್ ತಂಡದ ಪರ ಯುಜ್ವೇಂದ್ರ ಚಹಾಲ್ ಮತ್ತು ಅರ್ಶ್ದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.
-
ಅಭಿಷೇಕ್ ಇನ್ನಿಂಗ್ಸ್‌ಗೆ ಬ್ರೇಕ್
ಅಭಿಷೇಕ್ ಶರ್ಮಾ ಅವರ ದಾಖಲೆಯ ಇನ್ನಿಂಗ್ಸ್ ಕೊನೆಗೂ ಸ್ಥಗಿತಗೊಂಡಿತು. 17 ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಅಭಿಷೇಕ್ ಅವರನ್ನು ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು.
-
-
ಅಭಿಷೇಕ್ ದಾಖಲೆಯ ಸ್ಕೋರ್
ಅಭಿಷೇಕ್ ಶರ್ಮಾ ಐಪಿಎಲ್‌ನ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ರನ್ ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಭಿಷೇಕ್ ಕೆಎಲ್ ರಾಹುಲ್ ಅವರ 132 ರನ್‌ಗಳ ದಾಖಲೆಯನ್ನು ಮುರಿದರು.
-
ಅಭಿಷೇಕ್ ಶತಕ
ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ಗಳಿಸಿದ್ದಾರೆ. ಅಭಿಷೇಕ್ ಕೇವಲ 40 ಎಸೆತಗಳಲ್ಲಿ ಈ ಶತಕ ಪೂರೈಸಿದ್ದಾರೆ.
-
ಮೊದಲ ವಿಕೆಟ್ ಪತನ
ಕೊನೆಗೂ ಸನ್‌ರೈಸರ್ಸ್‌ನ ಮೊದಲ ವಿಕೆಟ್ ಪತನವಾಯಿತು. 13 ನೇ ಓವರ್‌ನ ಎರಡನೇ ಎಸೆತದಲ್ಲಿ ಯುಜ್ವೇಂದ್ರ ಚಾಹಲ್ ಟ್ರಾವಿಸ್ ಹೆಡ್ ಅವರ ವಿಕೆಟ್ ಪಡೆದರು. ಹೆಡ್ 66 ರನ್ ಗಳಿಸಿದರು.
-
-
ಹೆಡ್ ಅರ್ಧಶತಕ
ಅಭಿಷೇಕ್ ಶರ್ಮಾ ನಂತರ, ಟ್ರಾವಿಸ್ ಹೆಡ್ ಕೂಡ ಅರ್ಧಶತಕ ಗಳಿಸಿದ್ದಾರೆ. ಇದು ಈ ಸೀಸನ್ನಲ್ಲಿ ಹೆಡ್ ಅವರ ಎರಡನೇ ಅರ್ಧಶತಕವಾಗಿದೆ. ಈ ಅರ್ಧಶತಕ 31 ಎಸೆತಗಳಲ್ಲಿ ಬಂದಿತು. ಹೈದರಾಬಾದ್ ಕೇವಲ 11 ಓವರ್‌ಗಳಲ್ಲಿ 150 ರನ್‌ಗಳನ್ನು ಪೂರ್ಣಗೊಳಿಸಿದೆ.
-
ಅಭಿಗೆ 2ನೇ ಜೀವದಾನ
ಅಭಿಷೇಕ್ ಶರ್ಮಾ ಅವರಿಗೆ ಮತ್ತೊಂದು ಜೀವದಾನ ಸಿಕ್ಕಿದೆ. ಯುಜ್ವೇಂದ್ರ ಚಾಹಲ್ ಎಸೆದ 8ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಯಾಚ್ ಸಿಕ್ಕಿತು ಆದರೆ ಚಾಹಲ್ ಸ್ವತಃ ಆ ಕಷ್ಟಕರವಾದ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಕೇವಲ 8 ಓವರ್‌ಗಳಲ್ಲಿ 100 ರನ್ ಗಳಿಸಿದೆ.
-
ಅಭಿ ಅರ್ಧಶತಕ
ಈ ಸೀಸನ್ನಲ್ಲಿ ಅಭಿಷೇಕ್ ಶರ್ಮಾ ಅವರ ಬ್ಯಾಟ್ ಕೊನೆಗೂ ಅಬ್ಬರಿಸಲು ಪ್ರಾರಂಭಿಸಿದೆ. ಈ ಎಡಗೈ ಬ್ಯಾಟ್ಸ್‌ಮನ್ ಈ ಸೀಸನ್ನ ಮೊದಲ ಅರ್ಧಶತಕವನ್ನು ಕೇವಲ 19 ಎಸೆತಗಳಲ್ಲಿ ಗಳಿಸಿದ್ದಾರೆ.
-
5 ಓವರ್ ಪೂರ್ಣ
ವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್‌ಗೆ ಬಿರುಗಾಳಿಯ ಆರಂಭ ನೀಡಿದ್ದಾರೆ. ಇಬ್ಬರೂ ಕೇವಲ 5 ಓವರ್‌ಗಳಲ್ಲಿ 76 ರನ್ ಗಳಿಸಿದ್ದಾರೆ.
-
ಸನ್‌ರೈಸರ್ಸ್ ಇನ್ನಿಂಗ್ಸ್ ಆರಂಭ
ಹೈದರಾಬಾದ್ ರನ್ ಚೇಸ್ ಆರಂಭಿಸಿದೆ. ತಂಡದ ಗೆಲುವಿಗೆ 246 ರನ್‌ಗಳ ಅವಶ್ಯಕತೆಯಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದ್ದಾರೆ. ವಿಶೇಷವಾಗಿ ಅಭಿಷೇಕ್ ಎರಡನೇ ಓವರ್‌ನಲ್ಲಿ 4 ಬೌಂಡರಿಗಳನ್ನು ಬಾರಿಸಿದರು.
-
245 ರನ್ ಟಾರ್ಗೆಟ್
ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು. ಹೈದರಾಬಾದ್ ತಂಡ 18 ಮತ್ತು 19 ನೇ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿತು ಆದರೆ 20 ನೇ ಓವರ್‌ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಶಮಿ ಎಸೆದ ಸತತ 4 ಎಸೆತಗಳಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಓವರ್‌ನಲ್ಲಿ ಒಟ್ಟು 27 ರನ್‌ಗಳು ಬಂದವು. ಶಮಿ 4 ಓವರ್‌ಗಳಲ್ಲಿ 75 ರನ್‌ಗಳನ್ನು ನೀಡುವ ಮೂಲಕ ಜೋಫ್ರಾ ಆರ್ಚರ್ ಅವರ ಅತ್ಯಂತ ಕಳಪೆ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಸರಿಗಟ್ಟಿದರು.
-
ಶತಕ ವಂಚಿತ ಅಯ್ಯರ್
ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಶತಕದ ಸಮೀಪ ಔಟಾದರು. 18ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ಅವರನ್ನು ಔಟ್ ಮಾಡಿದರು. ಓವರ್‌ನ ಮೊದಲ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಔಟ್ ಮಾಡಿದ ಹರ್ಷಲ್, ಮೂರನೇ ಎಸೆತದಲ್ಲಿ ಶ್ರೇಯಸ್ ಅವರ ವಿಕೆಟ್ ಪಡೆದರು. ಶ್ರೇಯಸ್ ಕೇವಲ 36 ಎಸೆತಗಳಲ್ಲಿ 82 ರನ್ ಗಳಿಸಿದರು.
-
ಗ್ಲೆನ್ ಮ್ಯಾಕ್ಸ್‌ವೆಲ್ ಔಟ್
ಗ್ಲೆನ್ ಮ್ಯಾಕ್ಸ್‌ವೆಲ್ (3) ಮತ್ತೊಮ್ಮೆ ಅಗ್ಗವಾಗಿ ಔಟಾದರು. 18ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ಅವರನ್ನು ಬೌಲ್ಡ್ ಮಾಡಿದರು. ಪಂಜಾಬ್ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ.
-
ನಾಲ್ಕನೇ ವಿಕೆಟ್ ಪತನ
ಪಂಜಾಬ್ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. 15 ನೇ ಓವರ್‌ನ ಮೊದಲ ಎಸೆತದಲ್ಲೇ ಶಶಾಂಕ್ ಸಿಂಗ್ ಅವರ ವಿಕೆಟ್ ಪಡೆಯುವ ಮೂಲಕ ಹರ್ಷಲ್ ಪಟೇಲ್ ತಂಡಕ್ಕೆ ನಾಲ್ಕನೇ ಯಶಸ್ಸನ್ನು ತಂದುಕೊಟ್ಟರು.
-
ಮೂರನೇ ವಿಕೆಟ್ ಪತನ
ಪಂಜಾಬ್ ಕಿಂಗ್ಸ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದ್ದು, ನೆಹಾಲ್ ವಾಧೇರಾ (27) ಅವರ ಇನ್ನಿಂಗ್ಸ್ ಅಂತ್ಯಗೊಂಡಿದೆ. 14ನೇ ಓವರ್‌ನಲ್ಲಿ ಇಶಾನ್ ಮಾಲಿಂಗ ವಾಧೇರಾ ಅವರನ್ನು ಎಲ್‌ಬಿಡಬ್ಲ್ಯೂ ಆಗಿ ಔಟ್ ಮಾಡಿದರು.
-
ಶ್ರೇಯಸ್ ಅರ್ಧಶತಕ
ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಪ್ರಾಬಲ್ಯ ಮುಂದುವರೆದಿದ್ದು, ಕೇವಲ 22 ಎಸೆತಗಳಲ್ಲಿ ಬಿರುಗಾಳಿಯ ಅರ್ಧಶತಕ ಗಳಿಸಿದ್ದಾರೆ. ಇದರೊಂದಿಗೆ ಪಂಜಾಬ್ ಕೂಡ 150 ರನ್‌ಗಳನ್ನು ಪೂರ್ಣಗೊಳಿಸಿದೆ.
-
ಮಾಲಿಂಗಗೆ ವಿಕೆಟ್
ಹೈದರಾಬಾದ್ ಎರಡನೇ ವಿಕೆಟ್ ಪಡೆದುಕೊಂಡಿದೆ. ಪ್ರಭ್ಸಿಮ್ರಾನ್ 42 ರನ್‌ಗಳಿಸಿ ಔಟ್ ಆದರು.
-
ಪವರ್ ಪ್ಲೇನಲ್ಲಿ ಅತ್ಯಧಿಕ ಸ್ಕೋರ್
ಸಿಕ್ಸರ್‌ಗಳ ಮೇಲೆ ಸಿಕ್ಸರ್‌ಗಳು, ಬೌಂಡರಿಗಳ ಮೇಲೆ ಬೌಂಡರಿಗಳು… ಪಂಜಾಬ್ ಪವರ್ ಪ್ಲೇನಲ್ಲಿ ಹೈದರಾಬಾದ್ ವಿರುದ್ಧ ರನ್‌ಗಳ ಮಳೆ ಹರಿಸಿತು. 6 ಓವರ್‌ಗಳಲ್ಲಿ 89 ರನ್‌ಗಳು ದಾಖಲಾಗಿವೆ. ಈ ಋತುವಿನ ಪವರ್ ಪ್ಲೇನಲ್ಲಿ ಅತ್ಯಧಿಕ ಸ್ಕೋರ್. ಪವರ್ ಪ್ಲೇನಲ್ಲಿ 6 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳು ಸಿಡಿದಿವೆ
-
ಮೊದಲ ವಿಕೆಟ್ ಪತನ
ಸ್ಫೋಟಕ ಆರಂಭದ ನಂತರ, ಪಂಜಾಬ್ ತನ್ನ ಮೊದಲ ಹಿನ್ನಡೆಯನ್ನು ಅನುಭವಿಸಿದೆ. ಪ್ರಿಯಾಂಶ್ ಆರ್ಯ (36 ರನ್, 13 ಎಸೆತ, 4 ಸಿಕ್ಸರ್, 2 ಬೌಂಡರಿ) ಅವರ ಚುರುಕಿನ ಇನ್ನಿಂಗ್ಸ್ ಅಂತ್ಯಗೊಂಡಿದೆ.
-
ಶಮಿಗೆ 3 ಸಿಕ್ಸರ್
ಶಮಿ ಎಸೆದ ಮೂರನೇ ಓವರ್‌ನಲ್ಲಿ ಪ್ರಿಯಾಂಶ್ ಆರ್ಯ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಓವರ್ ಪ್ರಾರಂಭಿಸಿದರು. ನಂತರ ಬೌಂಡರಿ ಬಾರಿಸಿದರು. ಪ್ರಭ್ಸಿಮ್ರಾನ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಓವರ್ ಅನ್ನು ಕೊನೆಗೊಳಿಸಿದರು. ಈ ಓವರ್‌ನಲ್ಲಿ 23 ರನ್‌ಗಳು ಬಂದವು. ತಂಡವು ಕೇವಲ 3 ಓವರ್‌ಗಳಲ್ಲಿ 50 ರನ್‌ಗಳನ್ನು ಪೂರ್ಣಗೊಳಿಸಿತು.
-
ಪಂಜಾಬ್ ಬ್ಯಾಟಿಂಗ್ ಆರಂಭ
ಪಂಜಾಬ್ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಮತ್ತೊಮ್ಮೆ ಪ್ರಿಯಾಂಶ್ ಆರ್ಯ-ಪ್ರಭ್ಸಿಮ್ರಾನ್ ಸಿಂಗ್ ಜೋಡಿ ಕ್ರೀಸ್‌ನಲ್ಲಿದ್ದು, ಪಂಜಾಬ್ ತಂಡವು ಸ್ಫೋಟಕ ಆರಂಭವನ್ನು ನಿರೀಕ್ಷಿಸುತ್ತಿದೆ.
-
ಸನ್ ರೈಸರ್ಸ್ ಹೈದರಾಬಾದ್ ತಂಡ
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ, ಇಶಾನ್ ಮಾಲಿಂಗ.
-
ಪಂಜಾಬ್ ಕಿಂಗ್ಸ್ ತಂಡ
ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಮಾರ್ಕೊ ಯಾನ್ಸೆನ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಲಾಕಿ ಫರ್ಗುಸನ್.
-
ಟಾಸ್ ಗೆದ್ದ ಪಂಜಾಬ್
ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - Apr 12,2025 7:06 PM