SA vs SL: ಆಫ್ರಿಕಾ ವಿರುದ್ಧ ಕೇವಲ 42 ರನ್​ಗಳಿಗೆ ಶ್ರೀಲಂಕಾ ಆಲೌಟ್

SA vs SL: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಶ್ರೀಲಂಕಾ ತಂಡವು ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿ, ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್‌ಗೆ ಆಲೌಟ್ ಆದ ಎರಡನೇ ತಂಡ ಎನಿಸಿಕೊಂಡಿದೆ. ಆಫ್ರಿಕಾ ಪರ ವೇಗಿ ಮಾರ್ಕೊ ಯಾನ್ಸನ್ 7 ವಿಕೆಟ್ ಪಡೆಯುವ ಮೂಲಕ ಲಂಕಾ ತಂಡವನ್ನು ಅತ್ಯಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದಾರೆ.

SA vs SL: ಆಫ್ರಿಕಾ ವಿರುದ್ಧ ಕೇವಲ 42 ರನ್​ಗಳಿಗೆ ಶ್ರೀಲಂಕಾ ಆಲೌಟ್
ಶ್ರೀಲಂಕಾ- ದಕ್ಷಿಣ ಆಫ್ರಿಕಾ
Follow us
ಪೃಥ್ವಿಶಂಕರ
|

Updated on: Nov 28, 2024 | 6:36 PM

ಶ್ರೀಲಂಕಾ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಕಿಂಗ್ಸ್‌ಮೀಡ್ ಡರ್ಬನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿರುವ ಕಾರಣ ಮೊದಲ ದಿನ ಕೇವಲ 20.4 ಓವರ್‌ಗಳನ್ನು ಮಾತ್ರ ಆಡಲಾಗಿತ್ತು. ಆದರೆ ಎರಡನೇ ದಿನದಾಟದಲ್ಲಿ ಆಟ ಮುಂದುವರೆದಿದ್ದು ದಕ್ಷಿಣ ಆಫ್ರಿಕಾ 191 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಇದಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ, ಆಫ್ರಿಕಾ ಬೌಲರ್‌ಗಳ ದಾಳಿಗೆ ನಲುಗಿ ಕೇವಲ 42 ರನ್​ಗಳಿಗೆ ಆಲೌಟ್ ಆಗಿದೆ.

ಲಂಕಾ ದಹನ

ಆಫ್ರಿಕಾ ಬೌಲರ್​ಗಳ ದಾಳಿಗೆ ಬೆದರಿದ ಸಿಂಹಳೀಯರು ಮೊದಲ ಇನಿಂಗ್ಸ್‌ನಲ್ಲಿ ಕೇವಲ 13.5 ಓವರ್‌ಗಳಲ್ಲಿ 42 ರನ್ ಗಳಿಗೆ ಆಲೌಟ್ ಆಗಿದೆ. ಆಫ್ರಿಕಾ ಪರ ಮಾರಕ ದಾಳಿ ನಡೆಸಿದ ವೇಗಿ ಮಾರ್ಕೊ ಯಾನ್ಸನ್ ಏಕಾಂಗಿಯಾಗಿ 7 ಲಂಕಾ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗಟ್ಟಿದರು. ಮಾರ್ಕೊ ಯಾನ್ಸನ್ ಕೇವಲ 6.5 ಓವರ್ ಬೌಲ್ ಮಾಡಿ 13 ರನ್ ನೀಡಿ 7 ವಿಕೆಟ್ ಪಡೆದರು. ಮಾರ್ಕೊ ಯಾನ್ಸನ್ ಅವರಲ್ಲದೆ, ಜೆರಾಲ್ಡ್ ಕೊಯೆಟ್ಜಿ ಕೂಡ 2 ವಿಕೆಟ್ ಪಡೆದರೆ, ಕಗಿಸೊ ರಬಾಡ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವು ಕೇವಲ 13.5 ಓವರ್‌ಗಳಲ್ಲಿ ಅಂದರೆ 83 ಎಸೆತಗಳಲ್ಲಿ ಆಲೌಟ್ ಆಗಿತ್ತು, ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಆಲೌಟ್ ಆದ ಎರಡನೇ ತಂಡ ಎಂಬ ಬೇಡದ ದಾಖಲೆಗೆ ಕೊರಳೊಡ್ಡಿದೆ. ಇದಕ್ಕೂ ಮುನ್ನ 1924ರಲ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 75 ಎಸೆತಗಳಲ್ಲಿ 30 ರನ್‌ಗಳಿಗೆ ಆಲೌಟ್ ಆಗಿತ್ತು. ಅಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವರ್ಷಗಳ ನಂತರ ಈ ಘಟನೆ ಮರುಕಳಿಸಿದೆ.

ಲಂಕಾ ತಂಡದ ಹೀನಾಯ ಪ್ರದರ್ಶನ

ಅತಿ ಕಡಿಮೆ ಎಸೆತಗಳಲ್ಲಿ ಆಲೌಟ್ ಆಗುವುದರ ಜೊತೆಗೆ ಲಂಕಾ ತಂಡ ತನ್ನ ಟೆಸ್ಟ್ ಕ್ರಿಕೆಟ್‌ ಇತಿಹಾಸಿದಲ್ಲಿ ಅತ್ಯಂತ ಕಡಿಮೆ ಸ್ಕೋರ್​ಗೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಇದಕ್ಕೂ ಮುನ್ನ 1994ರಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 71 ರನ್‌ಗಳಿಗೆ ಆಲೌಟ್ ಆಗಿತ್ತು. ಇದೇ ವೇಳೆ ಲಂಕಾ ತಂಡ ಟೆಸ್ಟ್‌ನಲ್ಲಿ 50 ರನ್‌ಗಳ ಗಡಿ ಮುಟ್ಟದೆ ಆಲೌಟ್ ಆಗಿರುವುದು ಇದೇ ಮೊದಲು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಇಷ್ಟು ಕಡಿಮೆ ಸ್ಕೋರ್‌ಗೆ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಸಾಧನೆಯನ್ನು ಮಾಡಿದೆ. ಇದಕ್ಕೂ ಮುನ್ನ 2013ರಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡವನ್ನು 45 ರನ್‌ಗಳಿಗೆ ಆಲೌಟ್ ಮಾಡಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ